Watch: ಪ್ರವಾಸಿಗರೊಂದಿಗೆ ಬಿಂದಾಸ್‌ ಆಟವಾಡಿದ ಚಿರತೆ: ಸೆಲ್ಫಿ ತೆಗೆದು ಖುಷಿ ಪಟ್ಟ ಜನ!

By

Published : Jan 14, 2021, 4:31 PM IST

thumbnail

ಕುಲ್ಲು (ಹಿಮಾಚಲ ಪ್ರದೇಶ): ಅರಣ್ಯಗಳಲ್ಲಿ ವಾಸಿಸುವ ನರಭಕ್ಷಕ ಚಿರತೆ ಕೆಲವೊಮ್ಮೆ ಜನ, ಸಾಕು ಪ್ರಾಣಿಗಳ ಮೇಲೆ ದಾಳಿ ಮಾಡುವುದು ಸರ್ವೇ ಸಾಮಾನ್ಯ. ಆದರೆ ಇಲ್ಲೊಂದು ಚಿರತೆ ಜನರಿಗೆ ಯಾವುದೇ ರೀತಿಯ ತೊಂದರೆ ಮಾಡದೇ ಅವರೊಂದಿಗೆ ಆಟವಾಡಿದೆ. ಹಿಮಾಚಲಪ್ರದೇಶದ ಕುಲ್ಲು ತೀರ್ಥನ್​ ಕಣಿವೆಯಲ್ಲಿ ಕುತೂಹಲಕಾರಿ ಘಟನೆ ನಡೆದಿದೆ. ರಸ್ತೆಯ ಮೇಲೆ ಮಲಗಿದ್ದ ಚಿರತೆಯನ್ನು ನೋಡಲು ಪ್ರವಾಸಿಗರು ವಾಹನಗಳಿಂದ ಕೆಳಗಿಳಿದಿದ್ದಾರೆ. ಈ ವೇಳೆ ಕಾಡುಪ್ರಾಣಿ ಯಾವುದೇ ವ್ಯಕ್ತಿಯ ಮೇಲೆ ದಾಳಿ ಮಾಡಿಲ್ಲ. ಆದರೆ ಪ್ರವಾಸಿಗರೊಂದಿಗೆ ಆಟವಾಡಿದೆ. ಅನೇಕರು ಚಿರತೆಯ ಜೊತೆ ಸೆಲ್ಫಿ ಕೂಡ ತೆಗೆದುಕೊಂಡಿದ್ದಾರೆ. ಸುಮಾರು 1 ಗಂಟೆಗೂ ಹೆಚ್ಚು ಸಮಯ ಈ ಚಿರತೆ ಜನರೊಂದಿಗೆ ಆಟವಾಡಿದ್ದು ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.