ಪೊಲೀಸರ ಭರ್ಜರಿ ಕಾರ್ಯಾಚರಣೆ: 10 ಕೋಟಿ ರೂ. ಮೌಲ್ಯದ ಅಕ್ರಮ ಮದ್ಯ ವಶ

By

Published : Apr 3, 2021, 10:12 PM IST

thumbnail

ಪ್ರತಾಪಗಢ(ಉತ್ತರಪ್ರದೇಶ): ಪ್ರತಾಪಗಢ ಜಿಲ್ಲೆಯ ತೋಟದ ಮನೆಯೊಂದರಲ್ಲಿ ಕನಿಷ್ಠ 10 ಕೋಟಿ ರೂ. ಮೌಲ್ಯದ ಅಕ್ರಮ ಮದ್ಯ ವಶಪಡಿಸಿಕೊಳ್ಳುವಲ್ಲಿ ಉತ್ತರ ಪ್ರದೇಶ ಪೊಲೀಸರು ಯಶಸ್ವಿಯಾಗಿದ್ದಾರೆ. ಗುಡ್ಡು ಸಿಂಗ್​​ ಎಂಬುವರ ತೋಟದ ಮನೆಯಲ್ಲಿ ಮುಚ್ಚಿಡಲಾಗಿದ್ದ ಅಕ್ರಮ ಮದ್ಯವನ್ನ ಜೆಸಿಬಿ ಮೂಲಕ ಪೊಲೀಸರು ಹೊರತೆಗೆದಿದ್ದು, ಇದರಲ್ಲಿ 23,000 ಬಾಟಲಿ ಇದ್ದವು ಎನ್ನಲಾಗ್ತಿದೆ. 96 ಡ್ರಮ್​ ರಾಸಾಯನಿಕ ಸಹ ವಶಕ್ಕೆ ಪಡೆದುಕೊಳ್ಳಲಾಗಿದ್ದು, ಇದನ್ನ ಅಲ್ಕೋಹಾಲ್​ ತಯಾರಿಸಲ ಬಳಕೆ ಮಾಡಲಾಗುತ್ತಿತ್ತು. ಇದರ ಜತೆಗೆ ತೋಟದ ಮನೆಯೊಳಗೆ 1 ಲಕ್ಷದ 23 ಸಾವಿರ ಮದ್ಯದ ಬಾಟಲಿ ಸಿಕ್ಕಿವೆ. ಕಳೆದ ಕೆಲ ತಿಂಗಳಿಂದ ಉತ್ತರ ಪ್ರದೇಶದಲ್ಲಿ ಅಕ್ರಮ ಮದ್ಯ ಸೇವನೆಯಿಂದ ಸಾವನ್ನಪ್ಪುತ್ತಿರುವ ಪ್ರಕರಣ ಹೆಚ್ಚಾಗಿರುವ ಕಾರಣ ಪೊಲೀಸರು ಇದರ ವಿರುದ್ಧ ಅಭಿಯಾನ ಆರಂಭಿಸಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.