ಬೆಲ್​ಗ್ರೇಡ್​​​ನಲ್ಲೂ ಪಾಕ್​ ಮಾನ ಹರಾಜು... ವಾಗ್ದಾಳಿ ನಡೆಸಿದ ಸಂಸದ ಶಶಿ ತರೂರ್​!

By

Published : Oct 16, 2019, 9:50 PM IST

thumbnail

ಬೆಲ್​ಗ್ರೇಡ್​​​ನಲ್ಲಿ ನಡೆದ 141ನೇ ಅಂತರ ಸಂಸದೀಯ ಒಕ್ಕೂಟದ 141ನೇ ಅಸೆಂಬ್ಲಿಯಲ್ಲೂ ಪಾಕ್​ ಮಾನ ಹರಾಜುಗೊಂಡಿದೆ. ಲೋಕಸಭೆ ಸ್ಪೀಕರ್​ ಓಂ ಬಿರ್ಲಾ ನೇತೃತ್ವದಲ್ಲಿ ಒಕ್ಕೂಟದಲ್ಲಿ ಭಾಗಿಯಾಗಿದ್ದ ಇಂಡಿಯನ್​ ಪಾರ್ಲಿಮೆಂಟರಿ ಸದಸ್ಯ, ಕಾಂಗ್ರೆಸ್​ ಸಂಸದ ಶಶಿ ತರೂರ್​ ನೆರೆಯ ರಾಷ್ಟ್ರದ ಮೇಲೆ ವಾಗ್ದಾಳಿ ನಡೆಸಿದರು. ಪಾಕಿಸ್ತಾನ ಪದೇ ಪದೆ ಭಾರತದ ಮೇಲೆ ಆಂತರಿಕ ವಿಷಯವಿಟ್ಟುಕೊಂಡು ಜಗಳಕ್ಕೆ ಮುಂದಾಗುತ್ತಿದೆ. ಆದರೆ, ಭಾರತ ಸಂಪೂರ್ಣವಾಗಿ ಅಂತಹ ಉಲ್ಲೇಖ ತಿರಸ್ಕರಿಸಿ, ಬಲವಾಗಿ ಖಂಡಿಸುತ್ತದೆ. ಗಡಿ ಉದ್ದಕ್ಕೂ ಉಗ್ರವಾದ ಹಬ್ಬಿಸುತ್ತಿರುವ ಪಾಕ್​​​, ಜಮ್ಮು-ಕಾಶ್ಮೀರದಲ್ಲಿನ ಶಾಂತಿ ಹದಗೆಡಸಲು ಮುಂದಾಗುತ್ತಿದೆ ಇದರ ಜತೆಗೆ ಜಮ್ಮು-ಕಾಶ್ಮೀರ ಭಾರತದ ಅವಿಭಾಜ್ಯ ಅಂಗವಾಗಿದ್ದು, ಅದರಲ್ಲಿ ಹಸ್ತಕ್ಷೇಪ ಮಾಡುವ ಅಗತ್ಯವಿಲ್ಲ ಎಂದಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.