ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ: ನೃತ್ಯ ಮಾಡಿ ಪ್ರೇಕ್ಷಕರನ್ನು ರಂಜಿಸಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

By

Published : Jan 23, 2023, 3:31 PM IST

Updated : Feb 3, 2023, 8:39 PM IST

thumbnail

ಹುಬ್ಬಳ್ಳಿ : ನಗರದ ಜೆ.ಕೆ. ಸ್ಕೂಲ್ ವೆಂಕಟರಮಣ ದೇವಸ್ಥಾನದ ಬಳಿ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಸಖತ್​ ಸ್ಟೆಪ್​ ಹಾಕಿದರು. ಹುಬ್ಬಳ್ಳಿ ಹುಡುಗಿ ಅನನ್ಯ ಪಾಟೀಲ್ ಹಾಡಿದ ಗಜಪತಿ ಗರ್ವಭಂಗ ಚಿತ್ರದ ಜಟಕಾ ಕುದುರೆ ಹತ್ತಿ ಜಾತ್ರೆಗೆ ಹೋಗುಮಾ ಹಾಡಿಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ನೃತ್ಯ ಮಾಡಿದರು.

ಸಚಿವರು ಹೆಜ್ಜೆ ಹಾಕುತ್ತಿದ್ದಂತೆ ಅವರ ಜೊತೆಯಲ್ಲಿದ್ದವರು ಸಾಥ್​ ನೀಡಿ ನೆರೆದಿದ್ದ  ಪ್ರೇಕ್ಷಕರರನ್ನು ರಂಜಿಸಿದರು. ಇನ್ನೂ ವೇದಿಕೆಯಲ್ಲಿ ಸಚಿವರು ನಟ ಪುನೀತ್ ರಾಜಕುಮಾರ್ ಅವರ ರಾಜಕುಮಾರ ಸಿನಿಮಾದ "ಬೊಂಬೆ ಹೇಳುತೈತೆ" ಹಾಡನ್ನು ಹಾಡಿದರು.

ಇದನ್ನೂ ನೋಡಿ : ಬಳ್ಳಾರಿ ಉತ್ಸವ : ಸಖತ್​ ಸ್ಟೆಪ್​ ಹಾಕಿದ ಶ್ರೀರಾಮುಲು, ಸೋಮಶೇಖರ್​​ ರೆಡ್ಡಿ

Last Updated : Feb 3, 2023, 8:39 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.