ETV Bharat / t20-world-cup-2022

ಟಿ20 ವಿಶ್ವಕಪ್‌: ಪಾಕ್‌ ಎದುರು ಟಾಸ್‌ ಗೆದ್ದು ಫೀಲ್ಡಿಂಗ್‌ ಆಯ್ದುಕೊಂಡ ಟೀಂ ಇಂಡಿಯಾ

author img

By

Published : Oct 23, 2022, 1:26 PM IST

ರಿಷಬ್​ ಪಂತ್ ಬದಲಿಗೆ ಅನುಭವಿ ಬ್ಯಾಟರ್ ಕಂ ವಿಕೆಟ್ ಕೀಪರ್‌ ದಿನೇಶ್​ ಕಾರ್ತಿಕ್​ ಅವರಿಗೆ ತಂಡದಲ್ಲಿ ಸ್ಥಾನ ನೀಡಲಾಗಿದೆ.

t20-world-cup-india-won-the-toss-opt-to-bowl
ಹೈವೋಲ್ಟೆಜ್​ ಪಂದ್ಯದಲ್ಲಿ ಟಾಸ್​ ಗೆದ್ದ ರೋಹಿತ್

ಮೆಲ್ಬರ್ನ್​ (ಆಸ್ಟ್ರೇಲಿಯಾ): ಟಿ20 ವಿಶ್ವಕಪ್​ನ ತನ್ನ ಮೊದಲ ಪಂದ್ಯದಲ್ಲಿಂದು ಭಾರತ ತಂಡವು ಪಾಕಿಸ್ತಾನವನ್ನು ಎದುರಿಸುತ್ತಿದ್ದು, ಟಾಸ್​ ಗೆದ್ದ ಕ್ಯಾಪ್ಟನ್ ರೋಹಿತ್ ಶರ್ಮಾ ಕ್ಷೇತ್ರರಕ್ಷಣೆ ಆಯ್ದುಕೊಂಡರು. ತಂಡದ ಆಡುವ 11 ರ ಬಳಗದಲ್ಲಿ ರಿಷಬ್​ ಪಂತ್ ಅವರನ್ನು​ ಕೈಬಿಟ್ಟಿದ್ದು ದಿನೇಶ್‌ ಕಾರ್ತಿಕ್​ಗೆ ಅವಕಾಶ ನೀಡಲಾಗಿದೆ.

ಪಾಕಿಸ್ತಾನ ತಂಡದ ಹೀಗಿದೆ: ಬಾಬರ್ ಅಜಮ್ (ನಾಯಕ), ಮೊಹಮ್ಮದ್ ರಿಜ್ವಾನ್ (ವಿಕೆಟ್​ ಕಿಪರ್​), ಶಾನ್ ಮಸೂದ್, ಹೈದರ್ ಅಲಿ, ಮೊಹಮ್ಮದ್ ನವಾಜ್, ಶಾದಾಬ್ ಖಾನ್, ಇಫ್ತಿಕರ್ ಅಹ್ಮದ್, ಆಸಿಫ್ ಅಲಿ, ಶಾಹೀನ್ ಅಫ್ರಿದಿ, ಹ್ಯಾರಿಸ್ ರೌಫ್, ನಸೀಮ್ ಶಾ.

ಭಾರತ ತಂಡ ಹೀಗಿದೆ: ರೋಹಿತ್ ಶರ್ಮಾ(ನಾಯಕ), ಕೆ ಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್ (ವಿಕೆಟ್​ ಕಿಪರ್​), ಅಕ್ಸರ್ ಪಟೇಲ್, ರವಿಚಂದ್ರನ್ ಅಶ್ವಿನ್, ಭುವನೇಶ್ವರ್ ಕುಮಾರ್, ಮೊಹಮ್ಮದ್ ಶಮಿ, ಅರ್ಷದೀಪ್ ಸಿಂಗ್.

ಇದನ್ನೂ ಓದಿ : ಟಿ20 ವಿಶ್ವಕಪ್: ಹೈವೋಲ್ಟೇಜ್ ಪಂದ್ಯಕ್ಕೆ ಮೆಲ್ಬರ್ನ್ ಸಜ್ಜು​, ದೀಪಾವಳಿ ಮೋಕಾ ಯಾರಿಗೆ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.