ETV Bharat / sukhibhava

'ಆ' ಸಮಯದಲ್ಲಿ ಉಸಿರು ನಿಂತು ಒದ್ದಾಡಿದ ಯುವಕ! ಸ್ವಿಟ್ಜರ್ಲೆಂಡ್‌​ನಲ್ಲೊಂದು ವಿಚಿತ್ರ ಘಟನೆ

author img

By

Published : Apr 14, 2022, 7:30 PM IST

ಸ್ವಿಟ್ಜರ್ಲೆಂಡ್‌​ನಲ್ಲಿ 20 ವರ್ಷದ ಯುವಕನೋರ್ವ ಹಸ್ತಮೈಥುನ ಮಾಡಿಕೊಳ್ಳುವಾಗ ಉಸಿರುಕಟ್ಟಿಕೊಂಡು ಒದ್ದಾಡಿದ ಘಟನೆ ನಡೆದಿದೆ. ಅಲ್ಲದೇ, ಆಸ್ಪತ್ರೆಗೆ ದಾಖಲಾದಾಗ ಯುವಕನ ಆ ಸಮಯದ ವೇಳೆ ಆದ ವಿಚಿತ್ರ ಬೆಳವಣಿಗೆ ವೈದ್ಯರಿಗೆ ಆಶ್ಚರ್ಯ ತಂದಿದೆ.

youth-suffered
ಒದ್ದಾಡಿದ ಯುವಕ

ಸ್ವಿಟ್ಜರ್​ಲ್ಯಾಂಡ್​ನಲ್ಲಿ ವಿಚಿತ್ರ ಪ್ರಕರಣವೊಂದು ಬೆಳಕಿಗೆ ಬಂದಿದೆ. ವಿಂಟರ್​ಥೂರ್ ಎಂಬ ನಗರದಲ್ಲಿ ಹಸ್ತಮೈಥುನದ ವೇಳೆ 20 ವರ್ಷದ ಯುವಕ ಹಠಾತ್ತನೇ ಉಸಿರಾಟ ತೊಂದರೆಗೆ ಒಳಗಾಗಿ ಕುಸಿದು ಬಿದ್ದಿದ್ದಾನೆ. ಎದೆ ಕಿವುಚಿದಂತಾಗಿ, ಉಸಿರಾಡಲೂ ಆಗದೇ ಒದ್ದಾಡಿದ್ದಾನೆ. ತಕ್ಷಣವೇ ಆತನನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಸದ್ಯಕ್ಕೆ ಆ ಯುವಕನಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆಯಂತೆ.

ಸಾಮಾನ್ಯವಾಗಿ ಕಠಿಣ ವ್ಯಾಯಾಮ, ಲೈಂಗಿಕ ಕ್ರಿಯೆಯ ವೇಳೆ ಹೃದಯಾಘಾತ ಉಂಟಾಗುವ ಸಾಧ್ಯತೆಗಳು ಇರುತ್ತವೆ. ಆದರೆ, ಇದೇ ಮೊದಲ ಬಾರಿಗೆ ಹಸ್ತಮೈಥುನದ ಸಮಯದಲ್ಲೂ ಉಸಿರಾಟ ತೊಂದರೆ ಉಂಟಾಗಿ ಆಸ್ಪತ್ರೆಗೆ ದಾಖಲಾಗಿದ್ದು ವೈದ್ಯರೇ ಆಶ್ಚರ್ಯಪಡುವಂತಾಗಿದೆ. ಈ ಘಟನೆಯನ್ನು ‘ರೇಡಿಯಾಲಜಿ ಕೇಸ್ ರಿಪೋರ್ಟ್ಸ್’ ಎಂಬ ಜರ್ನಲ್​ ಪ್ರಕಟಿಸಿದ್ದು, ಕುತೂಹಲದೊಂದಿಗೆ ಆತಂಕ ಉಂಟು ಮಾಡಿದೆ.

ಊದಿಕೊಂಡ ಮುಖ, ಕೈ ಕಾಲು: ಆಸ್ಪತ್ರೆಗೆ ಬಂದಾಗ ಆ ಯುವಕನ ಮುಖ ಊದಿಕೊಂಡಿತ್ತು. ಕತ್ತಿನಿಂದ ಕೈಗಳವರೆಗೆ ಎಲ್ಲಿ ಹಿಡಿದರೂ 'ಟಕ್ ಟಕ್' ಎಂದು ಕೀಲು ಮುರಿದಾಗ ಬರುವ ಸದ್ದು ಬರುತ್ತಿತ್ತಂತೆ. ನಂತರ ವೈದ್ಯರು ಯುವಕನಿಗೆ ನ್ಯುಮೋಮೆಡಿಯಾಸ್ಟಿನಮ್ ಮಾಡಿ ಪರೀಕ್ಷಿಸಿದ್ದಾರೆ. ಯುವಕನ ಶ್ವಾಸಕೋಶದಿಂದ ಗಾಳಿ ಸೋರಿಕೆಯಾಗಿ ದೇಹದಾದ್ಯಂತ ಹರಡಿರುವುದು ಕಂಡುಬಂದಿದೆ.

ಯುವಜನರಲ್ಲಿ ಇಂತಹ ಸಮಸ್ಯೆಗಳು ಸಾಮಾನ್ಯವೆಂದು ವೈದ್ಯರು ಹೇಳಿದರೂ, ಇದು ಹೇಗೆ ಸಂಭವಿಸುತ್ತದೆ ಎಂಬ ಬಗ್ಗೆ ವೈದ್ಯಲೋಕಕ್ಕೆ ಮಾಹಿತಿ ಇಲ್ಲವಾಗಿದೆ. ಸಂಭೋಗದ ವೇಳೆ ಈ ರೀತಿಯ ಘಟನೆಗಳು ನಡೆದ ಬಗ್ಗೆ ವರದಿಗಳಿವೆ. ಆದರೆ, ಹಸ್ತಮೈಥುನದ ಸಮಯದಲ್ಲಿ ಈ ರೀತಿ ಸಂಭವಿಸಿದ ಯಾವುದೇ ದಾಖಲೆಗಳಿಲ್ಲ ಎಂದು ವೈದ್ಯರು ವಿವರಿಸಿದ್ದಾರೆ.

ಉಳಿದ ಪ್ರಾಣ: ಯುವಕನಿಗೆ ಅಸ್ತಮಾದ ಜೊತೆಗೆ ಅಟೆನ್ಷನ್​ ಡೆಪಿಸಿಟ್​ ಹೈಪರ್​ಆ್ಯಕ್ಟಿವ್​ ಸಮಸ್ಯೆಯೂ ಇರುವುದು ಪರೀಕ್ಷೆಯ ವೇಳೆ ತಿಳಿದುಬಂದಿದೆ. ತನಗಿರುವ ರೋಗಕ್ಕೆ ಆ ಯುವಕ ಚಿಕಿತ್ಸೆಯನ್ನೂ ತೆಗೆದುಕೊಂಡಿರಲಿಲ್ಲವಂತೆ. ಅಲ್ಲದೇ, ತಾನು ಡ್ರಗ್ಸ್, ಧೂಮಪಾನದಂತಹ ಚಟಗಳಿಂದ ದೂರವಿದ್ದೇನೆ. ಕೆಮ್ಮು ಕೂಡ ಇರಲಿಲ್ಲ. ಶ್ರಮದಾಯಕ ವ್ಯಾಯಾಮವನ್ನೂ ಮಾಡುವುದಿಲ್ಲ ಎಂದು ಯುವಕ ಹೇಳಿಕೊಂಡಿದ್ದಾನೆ. ಯುವಕನ ಆತುರದ ನಿರ್ಧಾರದಿಂದ ಪ್ರಾಣ ಕಳೆದುಕೊಳ್ಳುವುದನ್ನು ಉಳಿಸಿದ ವೈದ್ಯರು, ಇಂತಹ ಅಪರೂಪದ ಪ್ರಕರಣವನ್ನು ಇದೇ ಮೊದಲ ಬಾರಿಗೆ ಕಂಡು ಆಶ್ಚರ್ಯಚಕಿತರಾಗಿದ್ದಾರೆ.

ಇದನ್ನೂ ಓದಿ: ಮರಳಿ ಪಡೆಯಬೇಕೆ ಕನ್ಯತ್ವ?: ಇಲ್ಲಿದೆ ಸೂಕ್ತ ಶಸ್ತ್ರಚಿಕಿತ್ಸೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.