ETV Bharat / sukhibhava

ವಿಶ್ವ ಶಕ್ತಿ ಸಂರಕ್ಷಣಾ ದಿನ: ಇತಿಹಾಸ, ಪ್ರಾಮುಖ್ಯತೆ ಕುರಿತು ಇರಲಿ ಮಾಹಿತಿ

author img

By ETV Bharat Karnataka Team

Published : Dec 14, 2023, 4:18 PM IST

ಶಕ್ತಿ ಸಂರಕ್ಷಣೆ ಎಂಬುದು ಅನಾವಶ್ಯಕವಾಗಿ ಇಂಧನಗಳ ಬಳಕೆ ಮಾಡದೇ ಮಿತ ಸೇವೆಗೆ ಬಳಕೆ ಮಾಡುವುದಾಗಿದೆ.

world-energy-conservation-day-2023-aiming-for-sustainable-future
world-energy-conservation-day-2023-aiming-for-sustainable-future

ಹೈದರಾಬಾದ್​: ವಿಶ್ವ ಇಂಧನ ಸಂರಕ್ಷಣಾ ದಿನವನ್ನು ಪ್ರತಿ ವರ್ಷ ಡಿಸೆಂಬರ್​ 14ರಂದು ಆಚರಿಸಲಾಗುತ್ತದೆ. 150 ದೇಶಗಳ, 5200 ನಗರಗಳ ಮತ್ತು ಮಿಲಿಯಂತರ ಜನರ ಒಳಗೊಂಡ ಜಾಗತಿಕ ಉಪಕ್ರಮ ಇದಾಗಿದೆ. ನಿತ್ಯದ ಜೀವನದಲ್ಲಿನ ಶಕ್ತಿ ಬಳಕೆ, ಕೊರತೆ ಮತ್ತು ಜಾಗತಿಕ ಜೀವವ್ಯವಸ್ಥೆ ಸುಸ್ಥಿರತೆ ಮೇಲಿನ ಪರಿಣಾಮವನ್ನು ಇದು ಒತ್ತಿ ಹೇಳುತ್ತದೆ.

ಸಂಪ್ರದಾಯಿಕವಲ್ಲದ ಶಕ್ತಿ ಮೂಲಗಳಾದ ಗಾಳಿ, ಹೈಡೆಲ್​, ಬಯೋಮಾಸ್​, ಬಯೋಗ್ಯಾಸ್​, ಬಯೋಡಿಸೆಲ್​, ಜಿಯೋಥರ್ಮಲ್​, ಸೌರಶಕ್ತಿಗಳ ಮೂಲವನ್ನು ಇವು ಹೊಂದಿದೆ. ಬಹುತೇಕ ಸಾಂಪ್ರದಾಯಿಕ ಮೂಲವಲ್ಲದ ಶಕ್ತಿಗಳಲ್ಲಿ ಜಲ ಮತ್ತು ಗಾಳಿ ಹೊರತಾಗಿ ಉಳಿದವು ದುಬಾರಿಯಾಗಿವೆ.

ಉದ್ದೇಶ: ಈ ದಿನದ ಉದ್ದೇಶ ಎಂದರೆ ಶಕ್ತಿ ಸಂರಕ್ಷಣೆಯನ್ನು ಎಲ್ಲ ರೀತಿಯಲ್ಲಿ ಉಳಿಸಿಕೊಂಡು ಹೋಗುವುದು ಪ್ರಮುಖವಾಗಿದೆ ಎಂಬ ಸಂದೇಶ ಸಾರುವುದಾಗಿದೆ. ಈ ನಟ್ಟಿನಲ್ಲಿ ಶಕ್ತಿ ಸಂರಕ್ಷಣೆ ಬಗ್ಗೆ ಹಲವು ಚರ್ಚೆ, ಸಭೆ, ಚರ್ಚೆ ಮತ್ತು ವರ್ಕ್​ಶಾಪ್​ ಮೂಲಕ ಅರಿವು ಮೂಡಿಸುವ ಕಾರ್ಯ ನಡೆಸಬೇಕಿದೆ. ಜನರಿಗೆ ಶಕ್ತಿ ಬಳಕೆಯನ್ನು ಮಿತವಾಗಿ ಬಳಕೆ ಮಾಡುವಂತೆ ತಿಳಿಸುವುದಾಗಿದೆ. ಜೊತೆಗೆ ಅನಗತ್ಯ ಬಳಕೆಗೆ ಕಡಿವಾಣ ಮತ್ತು ಸಾಮರ್ಥ್ಯದಾಯಕ ಬಳಕೆಗೆ ಉತ್ತೇಜನ ನೀಡುವ ನಿರ್ಣಾಯಕ ಗುರಿಯನ್ನು ಹೊಂದಿದೆ. ಜೊತೆಗೆ ಕಟ್ಟಡಗಳು, ವಾಹನ ಮತ್ತು ಇತರ ಗೃಹ ಸಾಮಗ್ರಿಗಳಿಗೆ ಸಾಮರ್ಥ್ಯದಾಯಕ ಬಳಕೆಗೆ ಪ್ರಯೋಜನ ನೀಡುವ ಮೂಲಕ ಪರಿಸರ ಮಾಲಿನ್ಯ ಕಡಿಮೆ ಮಾಡಬಹುದಾಗಿದೆ.

ಏನಿದು ಶಕ್ತಿ ಸಂರಕ್ಷಣೆ: ಶಕ್ತಿ ಸಂರಕ್ಷಣೆ ಎಂಬುದು ಅನವಶ್ಯಕವಾಗಿ ಇಂಧನಗಳ ಬಳಕೆ ಮಾಡದೇ ಮಿತ ಸೇವೆಗೆ ಬಳಕೆ ಮಾಡುವುದಾಗಿದೆ. ಶಕ್ತಿಯನ್ನು ಹೆಚ್ಚು ಪರಿಣಾಮಕಾರಿಯಾಗಿ ಬಳಸುವುದರ ಮೂಲಕ ಅಥವಾ ಕಡಿಮೆ ಬಳಕೆ ಮಾಡುವ ಮೂಲಕ ದಕ್ಷ ಶಕ್ತಿಯ ಬಳಕೆಯ ಮೂಲಕ ಶಕ್ತಿ ಸಂರಕ್ಷಣೆಯನ್ನು ಸಾಧಿಸಬಹುದು. ಇದು ಹಸಿರುಮನೆ ಅನಿಲ ಹೊರಸೂಸುವಿಕೆಯಲ್ಲಿನ ಕಡಿತ ಮತ್ತು ಸಣ್ಣ ಇಂಗಾಲದ ಹೆಜ್ಜೆಗುರುತು, ಹಾಗೆಯೇ ವೆಚ್ಚ, ನೀರು ಮತ್ತು ಶಕ್ತಿಯ ಉಳಿತಾಯ ಸೇರಿದಂತೆ ಕೆಲವು ಪ್ರಯೋಜನಗಳನ್ನು ಹೊಂದಿದೆ.

ಶಕ್ತಿ ಸಂರಕ್ಷಣ ಕಾಯ್ದೆ: ಭಾರತವೂ 2001ರಲ್ಲಿ ಶಕ್ತಿ ಸಂರಕ್ಷಣೆ ಅಳವಡಿಕೆ ಮಾಡಲಾಗಿದೆ. ಭಾರತ ಸರ್ಕಾರ ಶಕ್ತಿ ಸಾಮರ್ಥ್ಯದ ಬ್ಯೂರೋ ಈ ನಿಯಮಗಳ ಅಬಿವೃದ್ಧಿ ಮತ್ತು ಶಕ್ತಿ ಸಂರಕ್ಷಣೆ ಕಡಿಮೆ ಮಾಡುವ ತಂತ್ರ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದೆ. ವಿಶ್ವ ಶಕ್ತಿ ಸಂರಕ್ಷಣಾ ದಿನವನ್ನು ಭಾರತದಲ್ಲಿ ಈ ಕುರಿತು ಜಾಗೃತಿ ಮತ್ತು ಶಕ್ತಿಯ ಸಮರ್ಥ ಬಳಕೆ ಉತ್ತೇಜನಕ್ಕೆ ಬಳಕೆ ಮಾಡಲಾಗುತ್ತಿದೆ.

ಇದನ್ನೂ ಓದಿ: ವಾಯು ಮಾಲಿನ್ಯ; ವ್ಯಕ್ತಿಯ ಮೇಲೆ ಆಗುವ ಹಾನಿ ಬಗ್ಗೆ ಶೇ 80ರಷ್ಟು ವೈದ್ಯರಿಗಿಲ್ಲ ಅರಿವು.. ತಜ್ಞರ ವರದಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.