ETV Bharat / sukhibhava

Blood Sugar Control Tips.. ಮಧುಮೇಹ ನಿಯಂತ್ರಣಕ್ಕೆ ಬೇಳೆ ಕಾಳುಗಳ ಪಾತ್ರ ಪ್ರಮುಖ

author img

By

Published : Jun 10, 2023, 3:13 PM IST

ರಕ್ತದ ಗ್ಲುಕೋಸ್​ ಮಟ್ಟ ನಿಯಂತ್ರಣ ಮಾಡುವುದರ ಜೊತೆಗೆ ಅಗತ್ಯ ಪ್ರೋಟಿನ್​ ಅನ್ನು ಕೂಡ ಬೇಳೆ ಕಾಳು ಪ್ರಮುಖ ಪಾತ್ರವಹಿಸುತ್ತದೆ.

The role of pulses is important for Sugar control
The role of pulses is important for Sugar control

ಬೆಂಗಳೂರು: ಮಧುಮೇಹವನ್ನು ನಿಯಂತ್ರಣ ಮಾಡಬೇಕು ಎಂದರೆ ನಿಮ್ಮ ದೈನಂದಿನ ಡಯಟ್​​ನಲ್ಲಿ ಮಸೂರ ಸೇರಿದಂತೆ ಇನ್ನಿತರ ಬೇಳೆಯನ್ನು ಸೇರಿಸಿ. ಪ್ರೋಟಿನ್​ಯುಕ್ತವಾಗಿರುವ ಮಸೂರ ದೇಹದ ಆರೋಗ್ಯಕ್ಕೆ ಅಗತ್ಯವಾದ ಪೋಷಕಾಂಶವನ್ನು ಒದಗಿಸುತ್ತದೆ. ಮಸೂರ ಬೇಳೆಯಲ್ಲಿ ಕರಗುವ ಮತ್ತು ಕರಗದ ಫೈಬರ್​ ಅಂಶಗಳಿದ್ದು, ಇದು ರಕ್ತದ ಗ್ಲುಕೋಸ್​ ಮಟ್ಟವನ್ನು ನಿಯಂತ್ರಣದಲ್ಲಿ ಇಡುತ್ತದೆ. ಜೊತೆಗೆ ಇದು ಫೈಬರ್​ ಅಂಶ ಮಲಬದ್ಧತೆ ಸಮಸ್ಯೆಯಿಂದ ನಿವಾರಣೆ ಮಾಡುತ್ತದೆ.

ಪ್ರತಿಯೊಂದು ವಯೋಮಾನದವರಲ್ಲಿ ಮಾನಸಿಕ ಮತ್ತು ದೈಹಿಕ ಬೆಳವಣಿಗೆಗೆ ದಿನಕ್ಕೆ ನಿಗದಿತ ಮಿತಿಯ ಪ್ರೋಟಿನ್​ ಅತ್ಯವಶ್ಯಕವಾಗಿದೆ. ಇದೇ ಕಾರಣಕ್ಕೆ ಪೌಷ್ಠಿಕಾಂಶದ ಸುರಕ್ಷತೆಯಲ್ಲಿ ಬೇಳೆಕಾಳುಗಳಿಗೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಬೇಳೆ ಕಾಳುಗಳಲ್ಲಿ ಗ್ಲೆಸೆಮಿಕ್​ ಇಂಡೆಕ್ಸ್​​ ಕಡಿಮೆ ಇರುತ್ತದೆ. ಇದರಿಂದ ಇದು ಹೆಚ್ಚಿನ ಮಟ್ಟದ ಕಾರ್ಬೋ ಹೈಡ್ರೇಟ್​ ಅನ್ನು ಉತ್ಪಾದಿಸಲು ಬಿಡುವುದಿಲ್ಲ. ಇದರಿಂದ ಮಧು ಮೇಹ ಹೊಂದಿರುವವರು ಕಡಿಮೆ ಪ್ರಮಾಣದ ಗ್ಲೂಕೋಸ್​ ಆಹಾರಗಳನ್ನು ಆಯ್ಕೆ ಮಾಡಬೇಕು ಎಂದು ಸೂಚನೆ ನೀಡಲಾಗುತ್ತದೆ.

ದ್ವಿದಳ ಧಾನ್ಯದ ಮಹತ್ವ: ಮಧು ಮೇಹ ಹೊಂದಿರುವವರು ಗೋಧಿಗಿಂತ ಹೆಚ್ಚಾಗಿ ದ್ವಿದಳ ಧಾನ್ಯಗಳನ್ನು ಸೇವಿಸುವುದು ಉತ್ತಮ ಎನ್ನುತ್ತಾರೆ. ಗೋಧಿ ಮತ್ತು ದ್ವಿದಳ ಧಾನ್ಯ ಎರಡು ಕೂಡ ಹೆಚ್ಚಿನ ಫೈಬರ್​ ಅಂಶವನ್ನು ಹೊಂದಿರುತ್ತವೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ದ್ವಿದಳ ಧಾನ್ಯಗಳಲ್ಲಿ ಕಡಿಮೆ ಕೊಬ್ಬಿನಾಂಶದ ಜೊತೆಗೆ ಪ್ರೋಟಿನ್​ ಹೆಚ್ಚಿರುತ್ತದೆ. ಇದು ಕೊಲೆಸ್ಟ್ರಾಲ್​ ಮಟ್ಟ ನಿರ್ಹಣೆಗೂ ಪ್ರಮುಖವಾಗಿದೆ. ಮಧು ಮೇಹಿಗಳು ಕಾರ್ಬೋ ಹೈಡ್ರೇಟ್​ ನಿರ್ವಹಣೆಗೆ ಬೇಳೆಗಳುಗಳು ಹೆಚ್ಚು ಉಪಯುಕ್ತವಾಗಿದೆ. ಜೊತೆಗೆ ಇವುಗಳಲ್ಲಿ ಖನಿಜಾಂಶಗಳು ಹೆಚ್ಚಿದ್ದು, ದೈನಂದಿನ ಆರೋಗ್ಯವೃದ್ಧಿಗೆ ಸಹಾಯ ಮಾಡುತ್ತದೆ.

ಮಧುಮೇಹವು ಜಾಗತಿಕ ಆರೋಗ್ಯ ಸಮಸ್ಯೆಯಾಗಿದ್ದು, ಅನೇಕ ಮಂದಿ ಈ ಸಮಸ್ಯೆಗೆ ತುತ್ತಾಗುತ್ತಿದ್ದಾರೆ. ಮಧು ಮೇಹ ಹೊಂದಿರುವ ಮುಕ್ಕಾಲು ಭಾಗದ ಮಂದಿ ಕಡಿಮೆ ಮತ್ತು ಮಧ್ಯಮ ಆದಾಯದ ದೇಶದ ಜನರಾಗಿದ್ದಾರೆ. ಮಧುಮೇಹ ಹೆಚ್ಚಳಕ್ಕೆ ಪ್ರಮುಖ ಕಾರಣ ಅನಾರೋಗ್ಯಕರ ಜೀವನ ಶೈಲಿ ಮತ್ತು ಆಹಾರ ಪದ್ಧತಿಯಾಗಿದೆ. ವ್ಯಾಯಾಮದಂತಹ ಚಟುವಟಿಕೆಯಲ್ಲಿ ಭಾಗಿಯಾಗದೇ ಇರುವುದು ಕೂಡ ಮುಖ್ಯವಾಗಿದೆ. ಇತ್ತೀಚಿಗೆ ಐಸಿಎಂಆರ್​ ನಡೆಸಿದ ಅಧ್ಯಯನದಲ್ಲಿ ಭಾರತದಲ್ಲಿ 101 ಮಿಲಿಯನ್​ ಜನರು ಮಧುಮೇಹಕ್ಕೆ ತುತ್ತಾಗಿದ್ದಾರೆ. ಅನಾರೋಗ್ಯಕರ ಜೀವನ ಶೈಲಿ ಜೊತೆಗೆ ಕೆಲವೊಮ್ಮೆ ಈ ರೋಗ ಉಲ್ಬಣಕ್ಕೆ ಅನುವಂಶಿಕತೆ ಕೂಡ ಕಾರಣವಾಗುತ್ತದೆ.

ಮಧ್ಯಮ ಆದಾಯದ ದೇಶದಲ್ಲಿ ಜನರು ಪೌಷ್ಠಿಕಾಂಶದ ಸಮಸ್ಯೆ ಹೆಚ್ಚು ಅನುಭವಿಸುತ್ತಿದ್ದು, ಅವರಿಗೆ ಬೇಳೆ ಕಾಳುಗಳು ಹೆಚ್ಚಿನ ಪರಿಹಾರವಾಗಲಿದೆ. ಸಮತೋಲನ ಆಹಾರ, ದೈಹಿಕ ಚಟುವಟಿಕೆ ಮತ್ತು ತಂಬಾಕು ಸೇವನೆಯಿಂದ ದೂರವಿರುವುದರಿಂದ ಮಧುಮೇಹವನ್ನು ತಡೆಯಬಹುದು. ಇಲ್ಲವಾದರೆ ಮುಂದೂಡಬಹುದು. ಅಲ್ಲದೇ, ಮಧುಮೇಹವನ್ನು ಚಿಕಿತ್ಸೆಯ ಮೂಲಕ ಯಶಸ್ವಿಯಾಗಿ ನಿಯಂತ್ರಿಸಲು ಸಾಧ್ಯವಿದೆ. ತೊಡಕುಗಳು ಉಂಟಾಗುವುದನ್ನು ಮುಂದೂಡಬಹುದಾಗಿದೆ. ಇದನ್ನು ಸಾಧ್ಯವಾಗಿಸಲು ನಿಯಮಿತವಾಗಿ ತಪಾಸಣೆಗೆ ಒಳಗಾಗುವುದು ಮತ್ತು ಅಗತ್ಯ ಚಿಕಿತ್ಸೆಯನ್ನು ಪಡೆಯಬೇಕು.

ಇದನ್ನೂ ಓದಿ: ಭಾರತೀಯರಲ್ಲಿ ಅಧಿಕ ರಕ್ತದೊತ್ತಡ ಮತ್ತು ಮಧುಮೇಹ ಹೆಚ್ಚಳಕ್ಕೆ ಕಾರಣವೇನು?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.