ETV Bharat / sukhibhava

ಮಾಂಸಾಹಾರಿಗಳಿಗಿಂತ ಸಸ್ಯಾಹಾರಿಗಳಲ್ಲಿ ಸೊಂಟ ಮುರಿತದ ಅಪಾಯ ಶೇ 50ರಷ್ಟು ಹೆಚ್ಚು: ಅಧ್ಯಯನ

author img

By

Published : Aug 2, 2023, 1:23 PM IST

ನಿಯಮಿತವಾಗಿ ಮಾಂಸಾಹಾರ ಸೇವನೆ ಮಾಡುವವರಿಗೆ ಹೋಲಿಕೆ ಮಾಡಿದಾಗ ಸಸ್ಯಹಾರಿಗಳು ಸೊಂಟದ ಮುರಿತಕ್ಕೆ ಒಳಗಾಗುವ ಅಪಾಯ ಶೇ 50ರಷ್ಟಿದೆ ಎಂದು ಅಧ್ಯಯನ ತಿಳಿಸಿದೆ.

The risk of hip fracture is 50% higher in vegetarians than in non-vegetarians
The risk of hip fracture is 50% higher in vegetarians than in non-vegetarians

ಲಂಡನ್​: ಸಸ್ಯಾಹಾರ ಪದ್ದತಿ ಸೇವನೆ ಮಾಡುವವರು ಮಾಂಸಹಾರಿ ಪದ್ಧತಿ ಸೇವನೆ ಮಾಡುವವರಿಗಿಂತ ಹೆಚ್ಚಿನ ಸೊಂಟದ ಮುರಿತ (hip fracture)ಕ್ಕೆ ಒಳಗಾಗುವ ಸಾಧ್ಯತೆ ಇದೆ ಎಂದು ಅಧ್ಯಯನ ತಿಳಿಸಿದೆ. ನಿಯಮಿತವಾಗಿ ಮಾಂಸಾಹಾರ ಸೇವನೆ ಮಾಡುವವರಿಗೆ ಹೋಲಿಕೆ ಮಾಡಿದಾಗ ಸಸ್ಯಹಾರಿಗಳು ಸೊಂಟದ ಮುರಿತಕ್ಕೆ ಒಳಗಾಗುವ ಅಪಾಯ ಶೇ 50ರಷ್ಟಿದೆ ಎಂದು ದೊಡ್ಡ ಗಾತ್ರದ ಅಧ್ಯಯನವೊಂದು ತಿಳಿಸಿದೆ.

ಲೀಡ್ಸ್​ ಯುನಿವರ್ಸಿಟಿ ಈ ಸಂಬಂಧ ಅಧ್ಯಯನ ನಡೆಸಿದೆ. ಈ ಅಧ್ಯಯದಲ್ಲಿ 4,13,914 ಮಂದಿ ಪುರುಷರು ಮತ್ತು ಮಹಿಳೆಯರು ಭಾಗಿಯಾಗಿದ್ದರು. ನಿಯಮಿತವಾಗಿ ಮಾಂಸಾಹಾರ ಸೇವಿಸುವ ಪುರುಷರಿಗೆ ಹೋಲಿಕೆ ಮಾಡಿದಾಗ ಸಸ್ಯಾಹಾರ ಸೇವಿಸುವ ಪುರುಷರು ಹೆಚ್ಚಿನ ಸೊಂಟ ಮುರಿತದ ಅಪಾಯವನ್ನು ಹೊಂದಿರುತ್ತಾರೆ ಎಂಬ ಮೊದಲ ಸಾಕ್ಷವನ್ನು ನೀಡಲಾಗಿದೆ.

ಸಮಾಜದಲ್ಲಿ ವಯಸ್ಸಾದವರಲ್ಲಿ ಸದ್ಯ ಈ ಸೊಂಟ ಮುರಿತದ ಸಮಸ್ಯೆ ಹೆಚ್ಚುತ್ತಿದೆ. ಇದು ಆರೋಗ್ಯ ಪರಿಸ್ಥಿತಿಯನ್ನು ಕುಗ್ಗಿಸುತ್ತಿರುವ ಜೊತೆಗೆ ಜೀವನ ಗುಣಮಟ್ಟವನ್ನೂ ಕಡಿಮೆ ಮಾಡುತ್ತಿದೆ ಎಂದು ಸ್ಕೂಲ್​ ಆಫ್​ ಫುಡ್​ ಸೈನ್ಸ್​ ಅಂಡ್​ ನ್ಯೂಟ್ರಿಷಿಯನ್​ ನೇತೃತ್ವದ ಅಧ್ಯಯನ ಸಂಶೋಧಕ ಜೇನ್ಸ್​ ವೆಬ್​​ಸ್ಟಾರ್​ ತಿಳಿಸಿದ್ದಾರೆ.

ಮೂಳೆ ಅಭಿವೃದ್ಧಿಗೆ ಬೇಕು ಪ್ರೋಟಿನ್​: ಸಸ್ಯಾಹಾರದ ಡಯಟ್​ ಅನೇಕ ಆರೋಗ್ಯ ಪ್ರಯೋಜನವನ್ನು ಹೊಂದಿದೆ. ಡಯಟ್​ ಗುಣಮಟ್ಟ ಮತ್ತು ಪೋಷಕಾಂಶದ ಸಮತೋಲನವೂ ಅಪಾಯವನ್ನು ಕಡಿಮೆ ಮಾಡುವ ಜೊತೆಗೆ ಭವಿಷ್ಯದಲ್ಲಿನ ಮೂಳೆ ಆರೋಗ್ಯದ ಅಭಿವೃದ್ಧಿಗೆ ಸಹಾಯ ಮಾಡುತ್ತದೆ ಎಂಬುದನ್ನು ಅರ್ಥೈಸಿಕೊಳ್ಳಬೇಕಿದೆ ಎಂದು ಪ್ರೊ ಜನೆತ್​ ಕೇಡ್​ ತಿಳಿಸಿದ್ದಾರೆ.

ಈ ಅಧ್ಯಯನವನ್ನು ಬಿಎಂಸಿ ಮೆಡಿಸಿನ್​ ಜರ್ನಲ್​ನಲ್ಲಿ ಪ್ರಕಟಿಸಲಾಗಿದೆ. ಇದು ಮಾಂಸಾಹಾರ ಸೇವಿಸುವವರಿಗಿಂತ ಸಸ್ಯಾಹಾರ ಪದ್ದತಿ ಅನುಕರಣೆ ಮಾಡುವವರಲ್ಲಿ ಸೊಂಟ ಮುರಿತದ ಅಪಾಯ ಎದುರಿಸುವ ಸಾಧ್ಯತೆ ಹೆಚ್ಚಿದೆ ಎಂದು ತೋರಿಸಿದೆ.

ಸಸ್ಯಾಹಾರ ಪ್ರಯೋಜನ ಹೊಂದಿದೆ. ಆದರೆ,; ಸಸ್ಯಾಹಾರ ಡಯಟ್​ ಅನುಸರಿಸುವುದರಿಂದ ಕ್ಯಾನ್ಸರ್​ ಮತ್ತು ಹೃದಯ ರಕ್ತನಾಳದ ಅಪಾಯವನ್ನು ಕಡಿಮೆ ಮಾಡಬಹುದು. ಆದರೂ ಕೂಡ ಇದು ಸೊಂಟ ಮುರಿತದ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಅಧ್ಯಯನಕಾರರು ತಿಳಿಸಿದ್ದಾರೆ. ಇದೇ ವೇಳೆ ತಂಡವೂ ಹೇಗೆ ಈ ವ್ಯತ್ಯಾಸವನ್ನು ಲೆಕ್ಕ ಹಾಕಲಾಗುವುದು ಎಂದು ತೋರಿಸಿದ್ದಾರೆ.

ಅಂದಾಜು ಶೇ 6.5 ನಿಯಮಿತ ಮಾಂಸ ಆಹಾರ ಸೇವನೆ (ವಾರದಲ್ಲಿ ಐದು ಅಥವಾ ಅದಕ್ಕಿಂತ ಹೆಚ್ಚಿನ ದಿನ ಮಾಂಸಾಹಾರ ಸೇವನೆ) ಮಾಡುವುವರು ಮತ್ತು ಸರಾಸರಿ ಶೇ 6.5 ಮಂದಿ ಕೆಲವು ಸಮಯದಲ್ಲಿ ಮಾತ್ರ ಮಾಂಸ ಆಹಾರ ಸೇವನೆ ಮಾಡುವವರು (ವಾರದಲ್ಲಿ ಐದು ದಿನಕ್ಕಿಂತ ಕಡಿಮೆ ಮಾಂಸ ಸೇವನೆ ಮಾಡುವವರು) ಸೊಂಟ ಮುರಿತವನ್ನು ಅನುಭವಿಸಿದರೆ, ಮೀನು ಸೇವಿಸಿ, ಮಾಂಸ ಸೇವನೆ ಮಾಡದವರು ಶೇ 7 ಪ್ರಕರಣದಲ್ಲಿ ಸೊಂಟ ಮುರಿತಕ್ಕೆ ಒಳಗಾಗುತ್ತಾರೆ. ಇನ್ನು 9.5ರಷ್ಟು ಪ್ರಕರಣದಲ್ಲಿ ಕೇವಲ ಸಸ್ಯಾಹಾರ ಸೇವನೆ ಮಾಡುವವರು ಸೊಂಟ ಮುರಿತದ ಅಪಾಯ ಎದುರಿಸುತ್ತಾರೆ ಎಂದಿದ್ದಾರೆ.

ಇದಕ್ಕೆ ಪ್ರಮುಖ ಕಾರಣ ಕಡಿಮೆ ಬಿಎಂಐ (ಬಾಡಿ ಮಾಸ್​ ಇಂಡೆಕ್ಸ್​) ಆಗಿದ್ದು, ಇದು ಅಪಾಯವನ್ನು ಹೆಚ್ಚಿಸುತ್ತದೆ ಎಂದಿದ್ದಾರೆ ಅಧ್ಯಯನಕಾರರು. ಜೊತೆಗೆ ಮಾಂಸ ಆಹಾರ ಸೇವಿಸುವವರಿಗೆ ಹೋಲಿಕೆ ಮಾಡಿದರೆ, ಸಸ್ಯಾಹಾರಿಗಳು ಶೇ 17ರಷ್ಟು ಪ್ರೋಟಿನ್​ ಕೊರತೆ ಎದುರಿಸುತ್ತಾರೆ. ಈ ಹಿನ್ನೆಲೆ ಸಸ್ಯಾಹಾರಿಗಳು ತಮ್ಮ ಡಯಟ್​ನಲ್ಲಿ ಉತ್ತಮ ಮಟ್ಟದ ಪ್ರೋಟಿನ್​ ಮತ್ತು ಆರೋಗ್ಯಯುತ ಬಿಎಂಐ ನಿರ್ವಹಣೆಗೆ ಸಮತೋಲ ನಡೆಸುತ್ತಿದ್ದಾರಾ ಎಂಬುದನ್ನು ಖಚಿತ ಪಡಿಸಿಕೊಳ್ಳಬೇಕು. ಇದು ಸಸ್ಯಹಾರಿಗಳಲ್ಲಿ ಆರೋಗ್ಯಯುತ ಮೂಳೆ ಮತ್ತು ಸ್ನಾಯುಗಳ ಅಭಿವೃದ್ಧಿಗೆ ಸಹಾಯ ಮಾಡುತ್ತದೆ ಎಂದಿದ್ದಾರೆ.

ಇದನ್ನೂ ಓದಿ: MIND DIET: ಮೈಂಡ್​ ಡಯಟ್​ನಿಂದ ನೆನಪಿನ ಶಕ್ತಿ ಸುಧಾರಣೆ ಆಗುವುದಿಲ್ಲ.. ಅಧ್ಯಯನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.