ETV Bharat / sukhibhava

ಜೈಲುವಾಸದ ಅನುಭವ ಮೂಡಿಸಿದ ಕೋವಿಡ್​ ಲಾಕ್​ಡೌನ್​: ಅಧ್ಯಯನ

author img

By

Published : Jun 2, 2023, 10:36 AM IST

ಓಡುತ್ತಿದ್ದ ಜಗತ್ತಿಗೆ ಬ್ರೇಕ್​ ಹಾಕಿದ ಕೋವಿಡ್​ ಲಾಕ್​ಡೌನ್​ನಿಂದ ಜನರು ಮಾನಸಿಕ ಮತ್ತು ದೈಹಿಕವಾಗಿ ಕುಗ್ಗಿ ಹೋದ ಬಗ್ಗೆ ಮತ್ತೊಂದು ಅಧ್ಯಯನ ತಿಳಿಸಿದೆ.

The experience of being in jail has been affected by the Covid lockdown; Study
The experience of being in jail has been affected by the Covid lockdown; Study

ಲಂಡನ್​: 2020ರ ಆರಂಭದಲ್ಲಿ ಕೋವಿಡ್​ ಶರವೇಗದಲ್ಲಿ ಎಲ್ಲ ರಾಷ್ಟ್ರಗಳಿಗೆ ಹರಡುತ್ತಿದ್ದಾಗ ಅದನ್ನು ತಡೆಯಲು ಇದ್ದ ಒಂದೇ ಒಂದು ಮಾರ್ಗ ಎಂದರೆ ಅದು ಲಾಕ್​ ಡೌನ್​. ಸಂಪೂರ್ಣವಾಗಿ ಪ್ರತಿಯೊಬ್ಬರನ್ನೂ ಪ್ರತ್ಯೇಕವಾಗಿಡಲು ದೇಶಗಳು ಸಾಮೂಹಿಕವಾಗಿ ಲಾಕ್​ ಡೌನ್​ ಘೋಷಿಸಿದವು. ಇದರಿಂದ ಜನರು ತಮ್ಮ ಸಾಮಾಜಿಕ ಜೀವನ, ಸಂಪರ್ಕ, ಕೆಲಸಗಳನ್ನು ಕಳೆದುಕೊಂಡು ಮನೆಯೊಳಗೆ ಇರುವ ಅನಿವಾರ್ಯತೆ ಎದುರಾಯಿತು.

ಸರಿಸುಮಾರು 2 ವರ್ಷಗಳ ಕಾಲ ಈ ಲಾಕ್​ಡೌನ್​ ಮೊರೆ ಹೋದ ಹಿನ್ನೆಲೆಯಲ್ಲಿ ಜನರ ಮಾನಸಿನ ಮತ್ತು ದೈಹಿಕ ಆರೋಗ್ಯದ ಮೇಲೆ ಇದು ಪರಿಣಾಮ ಬೀರಿತು. ಈ ಅನುಭವ ಜನರ ಮೇಲೆ ಹೇಗೆ ಪ್ರಭಾವ ಬೀರಿತು ಎಂದರೆ ಇದು ಜೈಲು ವಾಸಕ್ಕೆ ಸಮವಾಗಿತ್ತು ಎಂದು ಹೊಸ ಅಧ್ಯಯನ ತಿಳಿಸಿದೆ. ಸ್ಕ್ಯಾಡ್ಲೆಂಡ್​ನ ಅಬರ್ಡೀನ್​ ವಿಶ್ವವಿದ್ಯಾಲಯ ತಂಡ ಈ ಕುರಿತು ಅಧ್ಯಯನ ನಡೆಸಿದೆ. ಅಧ್ಯಯನದ ಭಾಗವಾಗಿದ್ದ 277 ಜನರನ್ನು 2017ರಿಂದ 2021 ನಡೆದ ಘಟನೆಗಳ ಕುರಿತು ಪ್ರಶ್ನಿಸಲಾಗಿದೆ. ಅಧ್ಯಯನ ಪಿಎಲ್​ಒಎಸ್​ ಒನ್​ ಜರ್ನಲ್​ನಲ್ಲಿ ಪ್ರಕಟವಾಗಿದೆ. 2020 ರಲ್ಲಿ ಹೆಚ್ಚಿನ ಪರಿಣಾಮಕ್ಕೆ ಗುರಿಯಾದ ಕುರಿತು ಅವರು ತಿಳಿಸಿದ್ದಾರೆ. ವಿಶೇಷ ಎಂದರೆ ಅತಿ ದೀರ್ಘಾವಧಿ ಘಟನೆಯನ್ನು 2021 ಕ್ಕೆ ಹೊಂದಿಸಲಾಗಿದೆ.

ಆತಂಕ, ಖಿನ್ನತೆ ಮತ್ತು ಒತ್ತಡವನ್ನು ಹೊಂದಿರುವ ಮಂದಿ ಈ ಸಮಯ ಹೆಚ್ಚು ಕೆಟ್ಟದಾಗಿತ್ತು ಎಂದು ತಿಳಿಸಿದ್ದಾರೆ. ಅಲ್ಲದೇ, ಸಾಮಾನ್ಯ ಜನರಲ್ಲೂ ಇದು ಹೆಚ್ಚಿನ ಪ್ರಭಾವ ಬೀರಿದೆ ಎಂದು ಹೇಳಿದ್ದಾರೆ. ಈ ಸಮಯವೂ ಕಳಪೆ ಗ್ರಹಿಕೆ ಆಗಿದ್ದು, ಜೈಲು ವಾಸಕ್ಕೆ ಇದು ಸಮವಾಗಿತ್ತು ಎಂಬುದು ಫಲಿತಾಂಶದಲ್ಲಿ ತಿಳಿದು ಬಂದಿದೆ ಎಂದು ಸಂಶೋಧಕರು ವಿವರಿಸಿದ್ದಾರೆ.

ಇನ್ನು ಜನರ ಹುಟ್ಟುಹಬ್ಬ, ರಜೆ ದಿನ, ಪ್ರವಾಸ ಮುಂತಾದವುಗಳ ಸಾಮಾಜಿಕ ಘಟನೆ ಮೇಲೆ ಪರಿಣಾಮ ಬೀರಿದೆ. ಈ ಸಂದರ್ಭದಲ್ಲಿ ಜನರು ಕೋವಿಡ್​ ನಿರ್ಬಂಧ ಹಿನ್ನೆಲೆಯಲ್ಲಿ ಮುಕ್ತವಾಗಿ ಆಚರಣೆ ಮಾಡಲು ಸಾಧ್ಯವಾಗಿಲ್ಲ. ಇದು ಯಾವ ಮಟ್ಟಿಗೆ ಪರಿಣಾಮಕಾರಿಯಾಗಿತ್ತು ಎಂದರೆ ಜನರು ತಮ್ಮ ಪ್ರಮುಖ ಘಟನೆಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳುವ ಸಾಮರ್ಥ್ಯವನ್ನು ಇದು ತೆಗೆದು ಹಾಕಿತು ಎಂದು ಸ್ಕೂಲ್ ಆಫ್ ಸೈಕಾಲಜಿಯ ಪ್ರೊಫೆಸರ್ ಅರಾಶ್ ಸಹ್ರೈ ಹೇಳುತ್ತಾರೆ.

ಅಲ್ಲದೇ, ಈ ಸಮಯವೂ ಹೇಗೆ ಮಾನಸಿಕ ಸ್ಥಿತಿಯು ಗ್ರಹಿಕೆಯನ್ನು ಬದಲಾಯಿಸುತ್ತದೆ. ಜೊತೆಗೆ ಹೇಗೆ, ಸಮಯವನ್ನು ನಿಧಾನಗೊಳಿಸುತ್ತದೆ ಎಂಬುದು ಗ್ರಹಿಸಬಹುದಾಗಿದೆ. ಅಲ್ಲದೇ, ಈ ವೇಳೆ ಜನರು ಹುಟ್ಟುಹಬ್ಬದ ಆಚರಣೆಗಳು, ಅಂತ್ಯಕ್ರಿಯೆಗಳು, ರಜಾದಿನಗಳು ಮತ್ತು ಗೆಟ್-ಟುಗೆದರ್‌ ಮರೆತು ಹೋದರು ಎಂದು ತೋರಿಸಿದೆ.

ಸಾಂಕ್ರಾಮಿಕವು ಆರ್ಥಿಕತೆ, ದೈಹಿಕ ಆರೋಗ್ಯ ಮತ್ತು ನಮ್ಮ ಮಾನಸಿಕ ಆರೋಗ್ಯದ ಮೇಲೆ ಬೀರಿದ ಪರಿಣಾಮವನ್ನು ನಾವು ಅರ್ಥಮಾಡಿಕೊಳ್ಳಬೇಕಿದೆ. ಅಲ್ಲದೇ, ಲಾಕ್‌ಡೌನ್‌ಗಳು, ಒತ್ತಡ ಮತ್ತು ಪ್ರತ್ಯೇಕತೆಯು ನಮ್ಮ ಮೇಲೆ ಹೇಗೆ ವಿವಿಧ ರೀತಿಯಲ್ಲಿ ಪರಿಣಾಮ ಬೀರಬಹುದು ಎಂಬುದರ ಕುರಿತು ಅರ್ಥಮಾಡಿಕೊಳ್ಳಲು ಭವಿಷ್ಯದಲ್ಲಿ ಇನ್ನೂ ಹಲವು ವಿಧಗಳಿವೆ ಎಂದು ಅಧ್ಯಯನ ವಿಶ್ಲೇಷಿಸಿದೆ.

ಇದನ್ನೂ ಓದಿ: ಬೆಕ್ಕುಗಳಿಂದಲೂ ಹರಡಬಹುದು ಕೋವಿಡ್​ ಸೋಂಕು!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.