ETV Bharat / sukhibhava

ವಿಶ್ವದಾದ್ಯಂತ ಪಸರಿಸುತ್ತಿರುವ ಚೀನಿ ಹಳೆಯ ಚಿಕಿತ್ಸಾ ಪದ್ಧತಿ

author img

By

Published : Nov 14, 2022, 6:28 PM IST

ಅಕ್ಯುಪಂಕ್ಚರ್ ಪ್ರಾಚೀನ ಚೀನೀ ವೈದ್ಯಕೀಯ ಚಿಕಿತ್ಸೆಯಾಗಿದೆ. ನೋವು ಮತ್ತು ವಿವಿಧ ರೋಗಗಳಿಗೆ ಈ ಚಿಕಿತ್ಸೆ ಸಹಕಾರಿ. ದೇಹದ ವಿವಿಧ ಭಾಗಗಳ ಒತ್ತಡದ ಬಿಂದುಗಳ ಮೇಲೆ ತೆಳುವಾದ ಉದ್ದನೆ ಸೂಜಿಗಳನ್ನು ಅಂಟಿಸುವ ಮೂಲಕ ಚಿಕಿತ್ಸೆ ಮಾಡಲಾಗುತ್ತದೆ.

Acupuncture treatment
ಅಕ್ಯುಪಂಕ್ಚರ್ ಚಿಕಿತ್ಸೆ

ಹೈದರಾಬಾದ್: ಅಕ್ಯುಪಂಕ್ಚರ್ ಪ್ರಾಚೀನ ಚೀನೀ ವೈದ್ಯಕೀಯ ಚಿಕಿತ್ಸೆಯಾಗಿದೆ. ನೋವು ಮತ್ತು ವಿವಿಧ ರೋಗಗಳಿಗೆ ಈ ಚಿಕಿತ್ಸೆ ಸಹಕಾರಿ. ದೇಹದ ವಿವಿಧ ಭಾಗಗಳ ಒತ್ತಡದ ಬಿಂದುಗಳ ಮೇಲೆ ತೆಳುವಾದ ಉದ್ದನೆ ಸೂಜಿಗಳನ್ನು ಅಂಟಿಸುವ ಮೂಲಕ ಚಿಕಿತ್ಸೆ ಮಾಡಲಾಗುತ್ತದೆ.

ಇದು ಪ್ರಕೃತಿ ಸಹಜವಾಗಿ ನೀಡಲಾಗುವ ಚಿಕಿತ್ಸೆಯಾಗಿದೆ. ಗಮನ ಕೇಂದ್ರೀಕರಿಸಲು ತೊಂದರೆ ಇರುವವರಿಗೆ ಈ ಚಿಕಿತ್ಸೆಯು ಸಹಕಾರಿಯಾಗುತ್ತದೆ. ಆಲೋಚನಾ ಪ್ರಕ್ರಿಯೆಯನ್ನು ಉತ್ತೇಜನಗೊಳಿಸುವುದರ ಜೊತೆಗೆ ಅತಿಯಾಗಿ ಯೋಚಿಸುವುದನ್ನು ನಿಲ್ಲಿಸಲು ಸಹಾಯ ಮಾಡುತ್ತದೆ.

ಪ್ರಾಚೀನ ಚೀನಾದಲ್ಲಿ ಅಕ್ಯುಪಂಕ್ಚರ್ ಚಿಕಿತ್ಸೆಯು, ಪ್ರಸಿದ್ಧ ಹಳದಿ ನದಿಯ ಬಳಿ ಕ್ರಿಸ್ತ ಪೂರ್ವದಲ್ಲಿ ಹುಟ್ಟಿಕೊಂಡಿತು. ಈ ಅಕ್ಯುಪಂಕ್ಚರ್ ತಂತ್ರಗಳನ್ನು ಆರಂಭಿಕ ಸುಧಾರಣೆಯ ರೂಪವಾಗಿ ಮಾನವ ದೇಹಕ್ಕೆ ಅನ್ವಯಿಸಲಾಯಿತು. ಚೀನಾದಲ್ಲಿ ಝೌ ರಾಜವಂಶದ ಅವಧಿಯಲ್ಲಿ ಅಕ್ಯುಪಂಕ್ಚರ್ ವ್ಯಾಪಕವಾಗಿ ಹರಡಿತು. ಹಾಗಿದ್ದರೂ ಆ ಸಮಯದಲ್ಲಿ, ಅಕ್ಯುಪಂಕ್ಚರ್ ಸಂಶೋಧನೆಯು ಪೂರ್ಣ ರೂಪವನ್ನು ಪಡೆಯಲು ಸಾಧ್ಯವಾಗಲಿಲ್ಲ.

ಇದನ್ನೂ ಓದಿ:ಕಣ್ಣಿನ ಕಾಯಿಲೆಗೆ ಬಳಸುವ ಔಷಧವು ಕೋವಿಡ್ ವಿರುದ್ಧ ಹೋರಾಡಲು ಸಹಕಾರಿ: ಅಧ್ಯಯನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.