ETV Bharat / sukhibhava

ಚರ್ಮವು ಸುಕ್ಕುಗಟ್ಟದಂತೆ ವಿಶೇಷವಾಗಿ ಗಮನಹರಿಸಿ: ಇಲ್ಲಿದೆ ಪ್ರಮುಖ ಕ್ರಮಗಳು...

author img

By

Published : Mar 6, 2023, 6:53 PM IST

ವಯಸ್ಸಾದವರಲ್ಲಿ ಹೆಚ್ಚು ಕಾಣಿಸುತ್ತೆ ಚರ್ಮದ ಸುಕ್ಕುಗಟ್ಟುವಿಕೆ. ಬಹುತೇಕ ಜನರಲ್ಲಿ ಸುಕ್ಕುಗಟ್ಟುವಿಕೆಯ ಪರಿಣಾಮವು ಮುಖದ ಮೇಲೆ ಕಂಡುಬರುತ್ತದೆ. ಚರ್ಮ ಸುಕ್ಕುಗಟ್ಟುಲು ಕಾರಣಗಳು ಹಾಗೂ ಅವುಗಳನ್ನು ತಡೆಗಟ್ಟಲು ಕ್ರಮಗಳನ್ನು ಇಲ್ಲಿದೆ ನೋಡಿ...

Take care to avoid wrinkles on the skin
ಚರ್ಮವು ಸುಕ್ಕುಗಟ್ಟದಂತೆ ವಿಶೇಷ ಗಮನಿಸಿರಿ

ವಯಸ್ಸಾದವರಲ್ಲಿ ಅತ್ಯಂತ ಹೆಚ್ಚು ಗೋಚರಿಸುವ ಲಕ್ಷಣ ಎಂದರೆ ಚರ್ಮದ ಸುಕ್ಕುಗಟ್ಟುವಿಕೆ. ನಿಮ್ಮ ಮುಖದ ಚರ್ಮವು ತುಂಬಾ ಸೂಕ್ಷ್ಮವಾಗಿರುತ್ತದೆ. ಇದರಿಂದ ಸುಕ್ಕುಗಟ್ಟುವಿಕೆಯ ಪರಿಣಾಮವು ಹೆಚ್ಚಾಗಿ ಮುಖದ ಮೇಲೆ ಕಂಡುಬರುತ್ತದೆ. ಚರ್ಮವು ಸುಕ್ಕುಗಟ್ಟುಲು ಕಾರಣಗಳನ್ನು ನೀವು ತಿಳಿದಿದ್ದರೆ, ಅವುಗಳನ್ನು ತಡೆಗಟ್ಟಲು ಪ್ರಮುಖ ಕ್ರಮಗಳನ್ನು ಇಲ್ಲಿ ಕಾಣಬಹುದು. ತ್ವಚೆಯ ಮೇಲಿನ ಸುಕ್ಕುಗಳಿಗೆ ವಯಸ್ಸಾಗುವುದೊಂದೇ ಕಾರಣವಲ್ಲ. ಸೌಂದರ್ಯದ ಆರೈಕೆಯಲ್ಲಿನ ಕೆಲವು ತಪ್ಪುಗಳು ಮತ್ತು ನಮ್ಮ ಜೀವನಶೈಲಿಯೂ ಕಾರಣವಾಗುತ್ತದೆ.

Take care to avoid wrinkles on the skin
ಪ್ರತಿದಿನ 8 ಗಂಟೆಗಳವರೆಗೆ ತಪ್ಪದೇ ನಿದ್ರೆ ಮಾಡಬೇಕು

ಉರಿಯುವ ಬಿಸಿಲಿನಿಂದ ಹೆಚ್ಚು ತಿರುಗಾಡಬೇಡಿ: ಉರಿಯುವ ಬಿಸಿಲಿನಲ್ಲಿ ಹೊರಗೆ ನಡೆಯುವಾಗ ಚರ್ಮದ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಮಧ್ಯಾಹ್ನದ ಅವಧಿಯಲ್ಲಿ ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವುದರಿಂದ ಕಪ್ಪು ಕಲೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಚಿಕ್ಕ ವಯಸ್ಸಿನವರಲ್ಲಿ ಈ ರೀತಿ ಎಫೆಕ್ಟ್​ ಹೆಚ್ಚಾಗಿ ಕಾಣಿಸಲಿದೆ. ಅದಕ್ಕಾಗಿಯೇ ಬಿಸಿಲಿನಲ್ಲಿ ಹೋಗುವಾಗ ಸನ್‌ಸ್ಕ್ರೀನ್ ಲೋಷನ್‌ಗಳನ್ನು ಅನ್ವಯಿಸುವ ರಕ್ಷಣಾತ್ಮಕ ಕ್ರಮಗಳನ್ನು ತಪ್ಪದೇ ಅನುಸರಿಸಬೇಕು.

Take care to avoid wrinkles on the skin
ಹಣ್ಣುಗಳು ಹಾಗೂ ತರಕಾರಿಗಳು ನಿಮ್ಮ ಆಹಾರದ ಭಾಗವಾಗಲಿ

ಮೇಕಪ್ ಹಾಕಿಕೊಂಡು ಮಲಗುವುದು ಒಳ್ಳೆಯದಲ್ಲ: ಕೆಲಸದ ನಿಮಿತ್ತ ಹೊರಗೆ ಹೋಗುವಾಗ ಅಗತ್ಯ ಬಿದ್ದರೆ, ಮೇಕಪ್ ಮಾಡಿಕೊಳ್ಳುತ್ತೇವೆ. ಆದರೆ, ಕೆಲಸ ಮುಗಿಸಿ ಮನೆಗೆ ಮರಳಿದ ನಂತರ ಮೇಕಪ್ ತೆಗೆದು ಮುಖವನ್ನು ಕ್ಲೀನ್ ಮಾಡಿಕೊಳ್ಳಬೇಕು. ಇಲ್ಲದಿದ್ದರೆ, ಮೇಕಪ್ ಉತ್ಪನ್ನಗಳಲ್ಲಿ ಇರುವ ಫ್ರೀ ರಾಡಿಕಲ್​ಗಳು ಮತ್ತು ಮಾಲಿನ್ಯಕಾರಕಗಳು ಎಲ್ಲ ಪ್ರಕಾರದ ಚರ್ಮದ ಮೇಲೆ ಪರಿಣಾಮ ಬೀರುತ್ತವೆ. ಜೊತೆಗೆ ಸುಕ್ಕುಗಟ್ಟವಂತೆ ಮಾಡುತ್ತವೆ. ಹಾಗಾಗಿ ಮೇಕಪ್ ಹಾಕಿಕೊಂಡು ಮಲಗುವುದು ಒಳ್ಳೆಯ ಅಭ್ಯಾಸವಲ್ಲ ಎನ್ನುವುದನ್ನು ಪ್ರತಿಯೊಬ್ಬರು ಅರಿತುಕೊಳ್ಳಬೇಕು.

Take care to avoid wrinkles on the skin
ಸನ್‌ಸ್ಕ್ರೀನ್ ಲೋಷನ್‌ಗಳನ್ನು ಅನ್ವಯಿಸುವ ರಕ್ಷಣಾತ್ಮಕ ಕ್ರಮಗಳನ್ನು ತಪ್ಪದೇ ಅನುಸರಿಸಿ

ತೂಕದಲ್ಲಾಗುವ ಬದಲಾವಣೆ: ನಮ್ಮ ದೇಹದ ತೂಕದಲ್ಲಿನ ಬದಲಾವಣೆಗಳು ಕೂಡಾ ಚರ್ಮದ ಮೇಲೆ ಸುಕ್ಕುಗಳನ್ನು ಉಂಟುಮಾಡಬಹುದು. ಅದೇ ಸಮಯದಲ್ಲಿ ತೂಕ ಕಡಿಮೆಯಾಗುವುದು ಅಥವಾ ತೂಕ ಹೆಚ್ಚಾಗುವುದು ಇದ್ದರೆ, ಸ್ಟ್ರೆಚ್ ಮಾರ್ಕ್ಸ್ ಕಾಣಿಸಿಕೊಂಡು ಚರ್ಮವು ಸುಕ್ಕುಗಟ್ಟುವಿಕೆಯು ಸಾಧ್ಯತೆ ಹೆಚ್ಚಿರುತ್ತದೆ. ಇದರಿಂದಾಗಿ ತೂಕ ತುಂಬಾ ಕಡಿಮೆ ಅಥವಾ ಹೆಚ್ಚು ಆಗದಂತೆ ಎಚ್ಚರಿಕೆ ವಹಿಸಬೇಕು.

ಪೋಷಕಾಂಶಗಳ ಕೊರತೆ: ಆ್ಯಂಟಿ ಆಕ್ಸಿಡೆಂಟ್‌ಗಳನ್ನು ಹೊಂದಿರುವ ಹಣ್ಣುಗಳು ಮತ್ತು ತರಕಾರಿಗಳು ಚರ್ಮವನ್ನು ಆರೋಗ್ಯಕರವಾಗಿಡಲು ನಮ್ಮ ಆಹಾರದ ಭಾಗವಾಗಿರಬೇಕು. ಏಕೆಂದರೆ, ಅವು ಚರ್ಮದ ಮೇಲೆ ಉತ್ತಮ ಪರಿಣಾಮ ಬೀರುತ್ತವೆ. ಇದರಿಂದ ಚರ್ಮದ ಕಾಂತಿ ಹೆಚ್ಚಾಗುತ್ತದೆ. ಯಾವಾಗ ತ್ವಚೆಯ ಆರೈಕೆಗೆ ಬೇಕಾದ ಪೋಷಕಾಂಶಗಳ ಕಾಡುತ್ತದೆಯೋ, ಆಗ ಅದರ ಪರಿಣಾಮವು ತ್ವಚೆಯ ಮೇಲೆ ಕಾಣಿಸುತ್ತದೆ.

ನಿದ್ದೆ ಕಡಿಮೆಯಾದರೂ ತೊಂದರೆ: ಪ್ರಸ್ತುತ ವಿವಿಧ ಕಾರಣಗಳಿಂದ ನಿದ್ದೆಯ ಸಮಯ ಕಡಿಮೆಯಾಗುತ್ತಿದೆ. ಇದರಿಂದ ಮುಖದಲ್ಲಿರುವ ಚರ್ಮದ ಕೋಶಗಳು ಸುಸ್ತಾಗಿ ಚರ್ಮ ಸುಕ್ಕುಗಟ್ಟುವಂತೆ ಮಾಡುತ್ತವೆ. ಅದಕ್ಕಾಗಿಯೇ ನಿತ್ಯ 8 ಗಂಟೆಗಳವರೆಗೆ ನಿದ್ದೆಯನ್ನು ಮಾಡಬೇಕಾಗುತ್ತದೆ.

ತುಂಬಾ ಹೊತ್ತು ಒಂದೇ ಕಡೆ ಕುಳಿತುಕೊಳ್ಳುವುದು: ಒಂದೇ ಸ್ಥಳದಲ್ಲಿ ತುಂಬಾ ಹೊತ್ತು ಒಂದೇ ಕೆಲಸವನ್ನು ಮಾಡುತ್ತಾ ಕುಳಿತರೆ, ದೇಹಕ್ಕೆ ಸರಿಯಾದ ವ್ಯಾಯಾಮ ಸಿಗುವುದಿಲ್ಲ. ಅದರ ಪರಿಣಾಮ ತ್ವಚೆಯ ಮೇಲೂ ಗೋಚರಿಸುತ್ತದೆ. ಅದಕ್ಕಾಗಿಯೇ ನಿಯಮಿತ ವ್ಯಾಯಾಮವು ಚರ್ಮವನ್ನು ಚೆನ್ನಾಗಿ ಕಾಣುವಂತೆ ಮಾಡುತ್ತದೆ. ನಿಯಮಿತವಾಗಿ ವ್ಯಾಯಾಮಾ ಮಾಡುವ ಪ್ರವೃತ್ತಿ ಬೆಳೆಸಿಕೊಳ್ಳಬೇಕಾಗುತ್ತದೆ.

ಇದನ್ನೂ ಓದಿ: ಹೆಚ್ಚಿದ ಬೇಸಿಗೆಯ ಬಿಸಿ: ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿದರೆ ಈ ಸಮಸ್ಯೆಗಳು ದೂರ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.