ಕಲುಷಿತ ಗಾಳಿಯ ಉಸಿರಾಟದಿಂದ ನರವ್ಯೂಹಕ್ಕೆ ಹಾನಿ: ಅಧ್ಯಯನ

author img

By

Published : Jun 21, 2022, 4:27 PM IST

Study reveals breathing in polluted air contributes to neurological damage
Study reveals breathing in polluted air contributes to neurological damage ()

ಮೂಗಿನ ಮೂಲಕ ನೇರವಾಗಿ ಒಳ ಸೇರುವುದಕ್ಕಿಂತ ಎಂಟು ಪಟ್ಟು ಹೆಚ್ಚಿನ ಸೂಕ್ಷ್ಮ ಕಣಗಳು ರಕ್ತಪರಿಚಲನೆಯ ಮೂಲಕ ಮೆದುಳಿಗೆ ತಲುಪುತ್ತವೆ ಎಂದು ತಿಳಿದು ಬಂದಿದೆ. ವಾಯ ಮಾಲಿನ್ಯ ಹಾಗೂ ಮೆದುಳು ಆರೋಗ್ಯದ ಸಮಸ್ಯೆಗಳ ಕುರಿತಾದ ಸಂಬಂಧದ ಬಗ್ಗೆ ಈ ಸಂಶೋಧನೆಯು ಮತ್ತಷ್ಟು ಮಾಹಿತಿಯನ್ನು ಒದಗಿಸಲಿದೆ ಎಂದು ಬರ್ಮಿಂಗ್ ಹ್ಯಾಂ ವಿವಿಯ ಸಹ ಪ್ರಾಧ್ಯಾಪಕ ಇಸೆಲ್ಟ್​ ಲಿಂಚ್ ಹೇಳಿದ್ದಾರೆ.

ಉಸಿರಾಟದ ಮೂಲಕ ಗಾಳಿಯ ಜೊತೆಗೆ ದೇಹ ಸೇರಿ ರಕ್ತಸಂಚಾರದೊಂದಿಗೆ ಬೆರೆಯುವ ವಿಷಕಾರಿ ಅಣುಗಳಿಂದ ಮೆದುಳಿಗೆ ಹಾಗೂ ನರಮಂಡಲಕ್ಕೆ ಬಲವಾದ ಹಾನಿಯಾಗುತ್ತದೆ ಎಂದು ಬರ್ಮಿಂಗ್​ ಹ್ಯಾಂ ವಿಶ್ವವಿದ್ಯಾಲಯದ ಸಂಶೋಧಕರು ಹಾಗೂ ಚೀನಾ ದೇಶದ ಸಂಶೋಧಕರು ನಡೆಸಿದ ಅಧ್ಯಯನದಲ್ಲಿ ತಿಳಿದು ಬಂದಿದೆ. ಒಂದು ಬಾರಿ ರಕ್ತಪರಿಚಲನೆಯ ವ್ಯವಸ್ಥೆಯೊಳಗೆ ಹೋಗುವ ವಿಷಕಾರಿ ಅಣುಗಳು ಮೆದುಳನ್ನು ತಲುಪುತ್ತವೆ ಹಾಗೂ ಅಲ್ಲಿ ಬಹುಕಾಲ ಉಳಿಯುತ್ತವೆ ಎಂದು ಅಧ್ಯಯನದಲ್ಲಿ ತಿಳಿದು ಬಂದಿದೆ.

ಮೆದುಳು ಸಮಸ್ಯೆಯಿಂದ ಬಳಲುತ್ತಿರುವ ವ್ಯಕ್ತಿಗಳ ಸೆರೆಬ್ರೊಸ್ಪೈನಲ್ ದ್ರವದ ಮಾದರಿಗಳಲ್ಲಿ ಸೂಕ್ಷ್ಮ ಗಾತ್ರದ ಕಣಗಳು ಕಂಡುಬಂದಿವೆ. ಮೆದುಳಿನಲ್ಲಿ ಸಂಗ್ರಹಗೊಂಡಿರುವ ಹಾನಿಕಾರಕ ಕಣಗಳ ಬಗ್ಗೆ ಈ ಸಂಶೋಧನೆಯು ಮತ್ತಷ್ಟು ಬೆಳಕು ಚೆಲ್ಲುವ ಸಾಧ್ಯತೆಗಳಿವೆ.

"ಗಾಳಿಯೊಂದಿಗೆ ಬಂಧಿಸಲ್ಪಟ್ಟಿರುವ ಸೂಕ್ಷ್ಮ ಕಣಗಳಿಂದ ಕೇಂದ್ರ ನರವ್ಯೂಹದ ಮೇಲೆ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ನಮಗಿನ್ನೂ ಮಾಹಿತಿಯ ಕೊರತೆಯಿದೆ. ನಾವು ಉಸಿರಾಟದ ಮೂಲಕ ಒಳಗೆ ತೆಗೆದುಕೊಳ್ಳುವ ಸೂಕ್ಷ್ಮ ಕಣಗಳು ನಮ್ಮ ದೇಹಾದ್ಯಂತ ಯಾವ ರೀತಿ ಸಂಚರಿಸುತ್ತವೆ ಎಂಬುದರ ಬಗ್ಗೆ ಈ ಸಂಶೋಧನೆಗಳು ಒಂದಿಷ್ಟು ಮಾಹಿತಿ ನೀಡುತ್ತವೆ. ಮೂಗಿನ ಮೂಲಕ ನೇರವಾಗಿ ಒಳ ಸೇರುವುದಕ್ಕಿಂತ ಎಂಟು ಪಟ್ಟು ಹೆಚ್ಚಿನ ಸೂಕ್ಷ್ಮ ಕಣಗಳು ರಕ್ತಪರಿಚಲನೆಯ ಮೂಲಕ ಮೆದುಳಿಗೆ ತಲುಪುತ್ತವೆ ಎಂದು ತಿಳಿದು ಬಂದಿದೆ. ವಾಯಯಮಾಲಿನ್ಯ ಹಾಗೂ ಮೆದುಳು ಆರೋಗ್ಯದ ಸಮಸ್ಯೆಗಳ ಕುರಿತಾದ ಸಂಬಂಧದ ಬಗ್ಗೆ ಈ ಸಂಶೋಧನೆಯು ಮತ್ತಷ್ಟು ಮಾಹಿತಿಯನ್ನು ಒದಗಿಸಲಿದೆ" ಎಂದು ಬರ್ಮಿಂಗ್ ಹ್ಯಾಂ ವಿವಿಯ ಸಹ ಪ್ರಾಧ್ಯಾಪಕ ಇಸೆಲ್ಟ್​ ಲಿಂಚ್ ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.