ETV Bharat / sukhibhava

ಮಿದುಳಿನ ಕೆಲಸ ಚುರುಕಾಗಲು ಸಹಾಯ ಮಾಡುತ್ತೆ ಸ್ಲೀಪ್​ ಮಾಸ್ಕ್​: ಅಧ್ಯಯನ

author img

By

Published : Mar 15, 2023, 11:35 AM IST

ಕೃತಕ ಬೆಳಕಿನಿಂದ ನಿದ್ರೆಗೆ ಭಂಗ ಉಂಟಾಗದಿರಲಿ ಎಂದು ಧರಿಸುವ ಸ್ಲೀಪ್​ಮಾಸ್ಕ್​ಗಳು ಅರಿವಿನ ಸಾಮರ್ಥ್ಯ ವೃದ್ಧಿಗೆ ಸಹಾಯಕ ಎಂದು ಹೊಸ ಅಧ್ಯಯನ ಹೇಳುತ್ತದೆ.

Sleep mask helps brain function; study
Sleep mask helps brain function; study

ನಿದ್ದೆ ಮಾಡುವಾಗ ನಮಗೆ ಯಾವುದೇ ಬೆಳಕು ಭಂಗ ತರಕೂಡದು. ಹಾರ್ಮೋನ್​ಗಳ ಸಮತೋಲನ ಕಾಪಾಡಲು ಬಹುತೇಕ ಮಂದಿ ಸ್ಲೀಪ್​ ಮಾಸ್ಕ್​ ಬಳಸುವುದುಂಟು. ಮಲಗುವ ಸಮಯದಲ್ಲಿ ಕಣ್ಣಿನ ಮೇಲೆ ಹಾಕುವ ಈ ಮಾಸ್ಕ್​ನಿಂದ ಗಾಢ ಕತ್ತಲೆ ಆವರಿಸಿ ಬೇಗ ನಿದ್ರೆ ಬರುತ್ತದೆ. ಹೀಗಾಗಿ, ಉತ್ತಮ ಗುಣಮಟ್ಟದ ನಿದ್ದೆಗಿದು ಸಹಾಯಕ. ಅದರಲ್ಲೂ ಪ್ರಯಾಣದ ಸಂದರ್ಭದಲ್ಲಿ ಮಲಗುವಾಗ ಯಾವುದೇ ಅಡಚಣೆ ಇಲ್ಲದೇ ನಿದ್ರೆಗೆ ಜಾರಲು ಇದರ ಬಳಕೆ ಹೆಚ್ಚು. ಸ್ಲೀಪ್​ ಮಾಸ್ಕ್​ಗಳು ಕೇವಲ ನಿದ್ರೆಗೆ ಮಾತ್ರವಲ್ಲ, ಮಿದುಳಿನ ಅರಿವಿನ ಸಾಮರ್ಥ್ಯವನ್ನೂ ವೃದ್ಧಿಸಲು ಸಹಾಯ ಮಾಡುತ್ತದೆ ಎಂದು ಹೊಸ ಅಧ್ಯಯನ ಹೇಳುತ್ತದೆ.

ನಿದ್ದೆ ಮಾಡುವ ಸಮಯವು ಹೆಚ್ಚು ನಿರ್ಣಾಯಕ. ಈ ವೇಳೆ ಮಿದುಳು ಜಾಗರೂಕತೆಯಿಂದ ಹೊಸ ಮಾಹಿತಿಗಳನ್ನು ಮಿದುಳಿಗೆ ಎನ್ಕೋಡ್​ ಮಾಡುತ್ತದೆ. ನಿದ್ದೆಯ ಸಮಯದಲ್ಲಿ ಕೋಣೆಯಲ್ಲಿ ಉರಿಯುವ ಸಣ್ಣ ದೀಪ, ಕಿಟಕಿಯಿಂದ ನಿದ್ರೆಗೆ ಅಡ್ಡಿಪಡಿಸುವ ಬೀದಿದೀಪದ ಬೆಳಕುಗಳು ಅಡ್ಡಿಪಡಿಸುತ್ತದೆ. ಇಂಥ ಸಂದರ್ಭದಲ್ಲಿ ಸ್ಲೀಪ್ ಮಾಸ್ಕ್‌​ ಧರಿಸಿ ಮಲಗುವುದರಿಂದ ಈ ರೀತಿಯ ಬೆಳಕನ್ನು ನಿರ್ಬಂಧಿಸಿ, ಅದು ಸ್ಮರಣಶಕ್ತಿ ವೃದ್ಧಿಗೆ ಸಹಾಯ ಮಾಡುತ್ತದೆ ಎನ್ನುವುದು ಅಧ್ಯಯನ ವರದಿಯಲ್ಲಿ ಉಲ್ಲೇಖಿಸಿರುವ ಅಂಶ.

ರಾತ್ರಿಯಿಡೀ ಈ ರೀತಿಯ ಸ್ಲೀಪ್​ ಮಾಸ್ಕ್​ ಧರಿಸಿ ನಿದ್ರಿಸುವುದರಿಂದ ಮರುದಿನಕ್ಕೆ ಮಿದುಳನ್ನು ಎನ್ಕೋಡಿಂಗ್​ ಮಾಡಲು ಇದು ನೆರವಾಗುತ್ತದೆ ಎಂದು ಕಾರ್ಡಿಫ್​ ಯೂನಿವರ್ಸಿಟಿಯ ಮನಶಾಸ್ತ್ರಜ್ಞ ವಿವಿಯನ್​ ಗ್ರೇಸ್​ ತಿಳಿಸಿದ್ದಾರೆ. ಈ ಕುರಿತಾಗಿ ಸಂಶೋಧನಾ ಪತ್ರಿಕೆ ಮಂಡಿಸಿರುವ ಅವರು, ನಿದ್ರೆಯ ಮಾಸ್ಕ್​ಗಳು ಯಾವ ರೀತಿ ಪ್ರಭಾವ ಬೀರುತ್ತದೆ ಎಂಬುದನ್ನು ತಿಳಿಯಲು ಎರಡು ರೀತಿ ಪ್ರಯೋಗಗಳನ್ನು ನಡೆಸಿರುವುದಾಗಿ ತಿಳಿಸಿದ್ದಾರೆ.

ಮೊದಲ ಪ್ರಯೋಗದಲ್ಲಿ 18-35ರ ವಯೋಮಾನದ 94 ಮಂದಿ ಒಂದು ವಾರದ ಕಾಲ ಈ ಸ್ಲೀಪ್​ ಮಾಸ್ಕ್​ ಧರಿಸಿ ಮಲಗಿದ್ದಾರೆ. ಮತ್ತೊಂದು ವಾರ ಬೆಳಕುಗಳ ನಿಯಂತ್ರಿಸಿದ ಸ್ಥಿತಿಯಲ್ಲಿ ಮಲಗಿದ್ದಾರೆ. ಐದು ದಿನಗಳ ನಿದ್ರಾ ಅವಧಿಯ ಬಳಿಕ ಆರು ಮತ್ತು ಏಳನೇ ದಿನ ಅವರ ಅರಿವಿನ ಮಟ್ಟವನ್ನು ತಿಳಿಯಲಾಗಿದೆ. ಈ ಸಂದರ್ಭದಲ್ಲಿ ಸ್ಲೀಪ್​ ಮಾಸ್ಕ್​ ಅವರ ಎನ್ಕೋಡಿಂಗ್​ನಲ್ಲಿ ಪ್ರಧಾನ ಪಾತ್ರವಹಿಸಿದೆ ಎಂದು ತಿಳಿದು ಬಂದಿದೆ ಎಂದಿದ್ದಾರೆ ಸಂಶೋಧಕರು.

ಎರಡನೇ ಪ್ರಯೋಗದಲ್ಲಿ ಇದೇ ವಯೋಮಾನದ 35 ಮಂದಿ ಸ್ಲೀಪ್ ಮಾಸ್ಕ್​ ಬದಲಾಗಿ ನಿದ್ರೆಯ ಮೇಲ್ವಿಚಾರಣೆಗೆ ಸಹಾಯವಾಗುವ ಸಾಧನಗಳನ್ನು ಬಳಸಿದ್ದಾರೆ. ಇವರು ನಿಧಾನಗತಿ ನಿದ್ರೆ ಹೊಂದಿದ್ದು, ಎನ್​ಕೋಡಿಂಗ್​​ ಪ್ರಯೋಜನ ಪುನರಾವರ್ತಿಸಿದೆ. ನಿಧಾನಗತಿಯ ನಿದ್ರೆಯಲ್ಲಿ ಕಳೆದ ಸಮಯದೊಂದಿಗೆ ನೆನಪಿನ ಪ್ರಯೋಜನವನ್ನೂ ಅಂದಾಜು ಮಾಡಲಾಗಿದೆ.

ಸಂಶೋಧನೆಯ ಫಲಿತಾಂಶದಲ್ಲಿ ನಿದ್ರೆ ಸಮಯದಲ್ಲಿ ಬಳಕೆ ಮಾಡುವ ಸ್ಲೀಪ್​​​ ಮಾಸ್ಕ್ ಹೆಚ್ಚು​ ಪರಿಣಾಮಕಾರಿ ಮತ್ತು ಆಕ್ರಮಣಶೀಲವಲ್ಲದ ನಡವಳಿಕೆ ಹೊಂದಿದೆ ಎಂದು ಇದು ತಿಳಿಸುತ್ತದೆ. ಇದು ಅರಿವಿನ ಕಾರ್ಯಕ್ಕೆ ಪ್ರಯೋಜನ ನೀಡುತ್ತದೆ. ಇದರ ಜೊತೆಗೆ ದೈನಂದಿನ ಕೆಲಸಗಳ ಮೇಲೆ ಅಳೆಯಬಹುದಾದ ಪರಿಣಾಮಗಳಿಗೂ ಕಾರಣವಾಗಬಹುದು ಎಂದು ತಿಳಿಸಲಾಗಿದೆ.

ಇದನ್ನೂ ಓದಿ: ಎಷ್ಟು ನಿದ್ರೆ ಮಾಡ್ತೀರಿ ಎಂಬುದರ ಮೇಲೆ ಕೋವಿಡ್​ ಲಸಿಕೆ ಪರಿಣಾಮ ಅವಲಂಬಿತವಾಗಿದೆ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.