ಕಡಿಮೆ ನಿದ್ರೆ, ನೈಟ್​ ಶಿಫ್ಟ್​ ಕೆಲಸ ಮಾಡುವವರಲ್ಲಿ ಬಿಪಿ ಅಧಿಕ: ಅಧ್ಯಯನದಲ್ಲಿ ಬಯಲು

author img

By ETV Bharat Karnataka Desk

Published : Nov 16, 2023, 11:50 AM IST

sleep lengths have been linked with bp

Short sleep shift work risks: ಕಡಿಮೆ ನಿದ್ರೆ ಅಂದರೆ ಏಳು ಗಂಟೆಗಿಂತ ಕಡಿಮೆ ಅವಧಿಯ ನಿದ್ರೆ. 7 ಗಂಟೆಗಿಂತ ಹೆಚ್ಚು ಅವಧಿಯ ನಿದ್ರೆ ಕೂಡ ನಕಾರಾತ್ಮಕ ಪರಿಣಾಮ ಹೊಂದಿದೆ.

ಸಿಡ್ನಿ: ಕಡಿಮೆ ನಿದ್ರೆ, ಹಗಲು ಹೊತ್ತಿನಲ್ಲಿ ಸಣ್ಣ ನಿದ್ದೆ, ಶಿಫ್ಟ್​​ ಕೆಲಸ ಮತ್ತು ದೀರ್ಘ ನಿದ್ರಾ ಅವಧಿಗಳು ರಕ್ತದೊತ್ತಡ ಮತ್ತು ಹೃದಯ ರಕ್ತನಾಳ ಸಮಸ್ಯೆ ಅಪಾಯದೊಂದಿಗೆ ಸಂಬಂಧ ಹೊಂದಿವೆ ಎಂದು ಹೊಸ ಅಧ್ಯಯನ ತಿಳಿಸಿದೆ.

ನೇಚರ್​ ಕಮ್ಯೂನಿಕೇಷನ್​ನಲ್ಲಿ ಪ್ರಕಟವಾದ ಈ ಅಧ್ಯಯನ ವರದಿಯಲ್ಲಿ ವಯಸ್ಸು, ಲಿಂಗ ಮತ್ತು ದೇಹ ತೂಕ ಸೂಚ್ಯಂಕ (ಬಿಎಂಐ) ಹೃದಯದ ಲಯ-ನಡವಳಿಕೆ ಬದಲಾವಣೆ ಸೇರಿದಂತೆ ಹಲವು ಅಂಶಗಳು ಸ್ವತಂತ್ರವಾಗಿ ರಕ್ತದೊತ್ತಡ ನಿಯಂತ್ರಣದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತವೆ ಎಂಬುದನ್ನು ಅಧ್ಯಯನದಲ್ಲಿ ತೋರಿಸಲಾಗಿದೆ.

ಹೊಂದಾಣಿಕೆ ನಿದ್ರೆ ಆರೋಗ್ಯ/ನೈಟ್​ ಶಿಫ್ಟ್​​ಗಳು ಎಲ್ಲ ವಯೋಮಾನದ ಪುರುಷ ಮತ್ತು ಮಹಿಳೆಯರಲ್ಲಿ ರಕ್ತದೊತ್ತಡಕ್ಕೆ ಕಾರಣವಾಗಬಹುದು ಎಂಬುದನ್ನು ಪತ್ತೆ ಮಾಡಿದ್ದೇವೆ ಎಂದು ಅಧ್ಯಯನದ ಪ್ರಮುಖ ಲೇಖಕ ಮೆಲ್ಬೋರ್ನಾದ ಬೇಕರ್​ ಹಾರ್ಟ್​ ಆ್ಯಂಡ್​ ಡಯಾಬಿಟೀಸ್​ ಇನ್ಸುಟಿಟ್ಯೂಟ್​ನ ಅಸೋಸಿಯೇಟ್​ ಪ್ರೊಫೆಸರ್​ ಮೊರ್ಗ್​ ಯಂಗ್​ ಹೇಳಿದ್ದಾರೆ.

ಸಿಂಕ್ರೊನೈಸ್‌ನಿಂದ ಹೊರಗಿರುವ ಸಿರ್ಕಾಡಿಯನ್ ಲಯವು ಸ್ವಲ್ಪಮಟ್ಟಿಗೆ ರಕ್ತದೊತ್ತಡದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂಬುದನ್ನು ನಾವು ಪತ್ತೆ ಹಚ್ಚಿದ್ದೇವೆ ಎಂದು ಯಂಗ್​ ತಿಳಿಸಿದ್ದಾರೆ. ಈ ಅಧ್ಯಯನದಲ್ಲಿ, ನೈಟ್​ ಶಿಫ್ಟ್​ ಕೆಲಸ ಮಾಡುವವರು ಐದು/ ಆರು ಗಂಟೆಗಿಂತ ಕಡಿಮೆ ನಿದ್ರೆ ಮಾಡುವುದನ್ನು ಪತ್ತೆ ಮಾಡಿದ್ದು, ಅವರು ಹೆಚ್ಚಿನ ಅಪಾಯದಲ್ಲಿದ್ದಾರೆ. ಬೆಳಿಗ್ಗೆ ಮತ್ತು ರಾತ್ರಿಯ ಮಿಕ್ಸೆಡ್​ ಶಿಫ್ಟ್​ನಲ್ಲಿ ಕೆಲಸ ಮಾಡುವವರಲ್ಲೂ ಕೂಡ ರಕ್ತದೊತ್ತಡ ಅಭಿವೃದ್ಧಿಯಾಗಿರುವುದು ಕಾಣಬಹುದು. ಮತ್ತೊಂದು ಆಸಕ್ತಿಕರ ಅಂಶವೆಂದರೆ, ದೀರ್ಘಕಾಲದ ನಿದ್ರಾವಧಿ ಕೂಡ ಸಿರ್ಕಾಡಿಯನ್​ ಲಯವನ್ನು ಅಡ್ಡಿಪಡಿಸುವುದನ್ನು ಕಾಣಬಹುದು ಎಂದು ಮಾಹಿತಿ ನೀಡಿದ್ದಾರೆ.

ಕಡಿಮೆ-ಅಧಿಕ ನಿದ್ದೆಗಳು ಅಪಾಯ: 7 ಗಂಟೆಗಳ ನಿದ್ದೆಯು ಆರೋಗ್ಯಯುತ ರಕ್ತದೊತ್ತಡ ನಿರ್ವಹಣೆ ಮಾಡುವಲ್ಲಿ ಉತ್ತಮ ಎಂಬುದನ್ನು ಸಂಶೋಧಕರು ಕಂಡುಕೊಂಡಿದ್ದಾರೆ. ಇದರೊಂದಿಗೆ ಕಡಿಮೆ ನಿದ್ರೆ ಅಂದರೆ ಏಳು ಗಂಟೆಗಿಂತ ಕಡಿಮೆ ಅವಧಿಯ ನಿದ್ರೆ ಮತ್ತು 7 ಗಂಟೆಗಿಂತ ಹೆಚ್ಚಿನ ಅವಧಿ ನಿದ್ರೆಯೂ ನಕಾರಾತ್ಮಕ ಪರಿಣಾಮ ಬೀರಲಿದೆ.

ಶಾಶ್ವತ ರಾತ್ರಿ ಪಾಳಿ ಕೆಲಸಗಾರರಲ್ಲಿ ರಕ್ತದೊತ್ತಡ ಅಪಾಯ ಹೆಚ್ಚಿನ ಮಟ್ಟದಲ್ಲಿದೆ. ರೊಟೇಟಿಂಗ್​ ಶಿಫ್ಟ್‌ಗಳಲ್ಲಿ ಕೆಲಸ ಮಾಡುವವರಲ್ಲಿ ರಕ್ತದೊತ್ತಡ ಕಂಡುಬಂದರೂ ನೈಟ್​ ಶಿಫ್ಟ್​ ಕೆಲಸಗಾರರಿಗೆ ಹೋಲಿಕೆ ಮಾಡಿದರೆ ಕಡಿಮೆ ಪ್ರಮಾಣದ ಅಪಾಯವಿದೆ. ನಮ್ಮ ದತ್ತಾಂಶ ಕಡಿಮೆ ನಿದ್ದೆ ರಕ್ತದೊತ್ತಡದ ಮೇಲೆ ನಕಾರಾತ್ಮಕ ಪರಿಣಾಮ ಹೊಂದಿದೆ ಎಂದು ತೋರಿಸಿದೆ. ದೇಹದ ಸಿರ್ಕಾಡಿಯನ್ ಗಡಿಯಾರವೂ ಮಾನವನ ದೇಹದ ಎಲ್ಲಾ ಪ್ರಕ್ರಿಯೆನ್ನು ನಿರ್ವಹಣೆ ಮಾಡುತ್ತದೆ. ಚಯಾಪಚಯನ ಕ್ರಿಯೆ, ಅರಿವಿನ, ಹೃದಯಬಡಿತ ಮತ್ತು ನಿದ್ರೆ-ಎಚ್ಚರದ ನಡವಳಿಕೆಯನ್ನು ಇದು ಹೊಂದಿದೆ. ದೇಹದ ಸಾಮಾನ್ಯ ಜೈವಿಕ ಲಯಕ್ಕೆ ಅಡ್ಡಿಯಾದಾಗ ದೇಹವು ಸಿಂಕ್ರೊನೈಜ್​ನಿಂದ ಹೊರಗುಳಿಯುತ್ತದೆ. ಇದು ಸಿರ್ಕಾಡಿಯನ್​ ಒತ್ತಡ ಸೃಷ್ಟಿಸಿ, ನಕಾರಾತ್ಮಕ ಪರಿಣಾಮಕ್ಕೆ ಕಾರಣವಾಗುತ್ತದೆ.

ರಕ್ತದೊತ್ತಡಕ್ಕೆ ಉತ್ತಮ ವರ್ಗೀಕರಣದ ಸಿಕಾರ್ಡಿಯನ್​ ಲಯ ಹೊಂದಿರಬೇಕು. ಈ ಲಯಕ್ಕೆ ಅಡ್ಡಿಯಾದಾಗ ಹೃದಯರಕ್ತನಾಳದ ಆರೋಗ್ಯದ ಮೇಲೆ ಗಮನಾರ್ಹ ಪರಿಣಾಮ ಬೀರುತ್ತದೆ ಎಂದಿದ್ದಾರೆ. ​(ಐಎಎನ್​ಎಸ್​)

ಇದನ್ನೂ ಓದಿ: ಪ್ರತಿದಿನ ಒಂದೇ ಸಮಯಕ್ಕೆ ವ್ಯಾಯಾಮ ಮಾಡಿ: ಲಾಭವೇನು ಗೊತ್ತೇ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.