ETV Bharat / sukhibhava

ಆಪತ್ಭಾಂದವ ವ್ಯಾಕ್ಸಿನ್​: ಒಂದು ಡೋಸ್​ ಲಸಿಕೆ ಪಡೆದ್ರೆ ಸೋಂಕಿನ ವೇಗ ಅರ್ಧ ಕ್ಷೀಣ - ವರದಿ

author img

By

Published : Apr 29, 2021, 6:36 PM IST

ವ್ಯಾಕ್ಸಿನೇಷನ್ ಜನರು ಸೋಂಕಿಗೆ ಒಳಗಾಗುವುದನ್ನು ತಡೆಯುತ್ತದೆ ಎಂಬುದಕ್ಕೆ ಪುರಾವೆಗಳು ಈಗಾಗಲೇ ಹೆಚ್ಚಾಗುತ್ತಿವೆ. ಲಸಿಕೆ ಪಡೆದ ಜನರು ಸೋಂಕಿಗೆ ಒಳಗಾಗಿದ್ದರೂ ಸಹ, ಅವರು ಸಾಂಕ್ರಾಮಿಕ ರೋಗಕ್ಕೆ ತುತ್ತಾಗುವ ಸಾಧ್ಯತೆ ಕಡಿಮೆ ಹಾಗೂ ಸೋಂಕನ್ನು ಇತರರಿಗೆ ತಲುಪಿಸುವುದು ಕಡಿಮೆ ಇದೆ ಎಂಬುದು ಅಧ್ಯಯನದಿಂದ ತಿಳಿದುಬಂದಿದೆ.

vaccine
vaccine

ಲಸಿಕೆ ಹಾಕದವರೊಂದಿಗೆ ಹೋಲಿಸಿದರೆ ಕನಿಷ್ಠ ಮೂರು ವಾರಗಳ ನಂತರ ಸೋಂಕಿಗೆ ಒಳಗಾದವರು ಒಂದೇ ಸೂರಿನಡಿ ವಾಸಿಸುವ ಜನರಿಗೆ 38 ಪ್ರತಿಶತ ಮತ್ತು 49 ಪ್ರತಿಶತದಷ್ಟು ಕಡಿಮೆ ವೈರಸ್ ಹರಡುವ ಸಾಧ್ಯತೆಯಿದೆ ಎಂಬುದು ಅಧ್ಯಯನದಿಂದ ತಿಳಿದುಬಂದಿದೆ ಎಂದು ಕ್ಸಿನ್ಹುವಾ ವರದಿ ಮಾಡಿದೆ.

ಸಂಶೋಧನೆಯಲ್ಲಿ ಸೇರ್ಪಡೆಗೊಂಡ ಜನರು ಫೈಝರ್ ಅಥವಾ ಅಸ್ಟ್ರಾಜೆನೆಕಾ ಲಸಿಕೆಗಳ ಒಂದೇ ಡೋಸ್​ ಪಡೆದಿದ್ದಾರೆ. ಸಾಂಕ್ರಾಮಿಕ ರೋಗ ನಿಯಂತ್ರಣದಲ್ಲಿ ನಿವೃತ್ತ ಸಲಹೆಗಾರ ಪೀಟರ್ ಇಂಗ್ಲಿಷ್ ಸ್ಕೈ ನ್ಯೂಸ್‌ಗೆ ಈ ಸಂಶೋಧನೆಗಳು 'ಅತ್ಯಂತ ಉತ್ತೇಜನಕಾರಿಯಾಗಿವೆ ಎಂದು ಹೇಳಿದ್ದಾರೆ.

ವ್ಯಾಕ್ಸಿನೇಷನ್ ಜನರು ಸೋಂಕಿಗೆ ಒಳಗಾಗುವುದನ್ನು ತಡೆಯುತ್ತದೆ ಎಂಬುದಕ್ಕೆ ಪುರಾವೆಗಳು ಈಗಾಗಲೇ ಹೆಚ್ಚಾಗುತ್ತಿವೆ. ಲಸಿಕೆ ಪಡೆದ ಜನರು ಸೋಂಕಿಗೆ ಒಳಗಾಗಿದ್ದರೂ ಸಹ, ಅವರು ಸಾಂಕ್ರಾಮಿಕ ರೋಗಕ್ಕೆ ತುತ್ತಾಗುವ ಸಾಧ್ಯತೆ ಕಡಿಮೆ ಹಾಗೂ ಸೋಂಕನ್ನು ಇತರರಿಗೆ ತಲುಪಿಸುವುದು ಕಡಿಮೆ ಇದೆ ಎಂಬುದನ್ನು ಈ ಅಧ್ಯಯನವು ತೋರಿಸುತ್ತದೆ. ಇದು ಅತ್ಯಂತ ಪ್ರೋತ್ಸಾಹದಾಯಕ ಸಂಶೋಧನೆ ಆಗಿದೆ ಎಂದು ಹೇಳಿದರು.

ಲಸಿಕೆ ಹಾಕಿದ ವ್ಯಕ್ತಿಗೆ ಸಂಬಂಧಿಸಿದ 24,000 ಮನೆಗಳಲ್ಲಿ 57,000ಕ್ಕೂ ಹೆಚ್ಚು ಜನರು ವಾಸಿಸುತ್ತಿದ್ದಾರೆ. ಲಸಿಕೆ ಹಾಕದ ಸುಮಾರು 1 ಮಿಲಿಯನ್ ಜನರ ಸಂಪರ್ಕಗಳೊಂದಿಗೆ ಅವರನ್ನು ಹೋಲಿಸಲಾಗಿದೆ. ಇತ್ತೀಚಿನ ಅಧಿಕೃತ ಅಂಕಿಅಂಶಗಳ ಪ್ರಕಾರ, 33.8 ದಶಲಕ್ಷಕ್ಕೂ ಹೆಚ್ಚು ಜನರಿಗೆ ಮೊದಲ ಲಸಿಕೆ ಡೋಸ್​ ನೀಡಲಾಗಿದೆ.

42 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರನ್ನು ಸೇರ್ಪಡೆಯನ್ನು ವ್ಯಾಕ್ಸಿನೇಷನ್ ಕಾರ್ಯಕ್ರಮ ವಿಸ್ತರಿಸಿದ್ದರಿಂದ ಬ್ರಿಟನ್‌ನ ಕಾಲು ಭಾಗದಷ್ಟು ವಯಸ್ಕರಿಗೆ ಸಂಪೂರ್ಣವಾಗಿ ಲಸಿಕೆ ಹಾಕಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.