ETV Bharat / sukhibhava

ಪದೇ ಪದೆ ಉಗುರು ತುಂಡಾಗುತ್ತದೆಯೇ, ಹೀಗೆ ಮಾಡಿ ಸಾಕು...

author img

By

Published : Aug 12, 2023, 11:38 AM IST

Updated : Aug 12, 2023, 12:45 PM IST

ಇಷ್ಟೆಲ್ಲ ಕಾಳಜಿವಹಿಸಿದರೂ ಉಗುರುಗಳು ಮನೆ ಕೆಲಸ ಅಥವಾ ವಿಟಮಿನ್​ ಕೊರತೆಯಿಂದಾಗಿ ತುಂಡಾಗುತ್ತದೆ

simple-tips-to-strengthen-fingernails
simple-tips-to-strengthen-fingernails

ಕೈಯಲ್ಲಿನ ಉಗುರುಗಳು ಅಂದವನ್ನು ಹೆಚ್ಚಿಸುವ ನಮ್ಮ ಆರೋಗ್ಯವನ್ನು ಕೂಡ ಪ್ರತಿಬಿಂಬಿಸುತ್ತವೆ. ಇದೇ ಕಾರಣಕ್ಕೆ ಈ ಬಗ್ಗೆ ಹೆಚ್ಚಿನ ಗಮನವನ್ನು ನೀಡಬೇಕು ಎಂದು ವೈದ್ಯರು ಸಲಹೆ ನೀಡುತ್ತಾರೆ. ಉಗುರಿನ ಸ್ವಚ್ಛತೆ ಕಾಯ್ದುಕೊಳ್ಳುವುದರಿಂದ ಆರೋಗ್ಯಯುತ ಆಹಾರ ಸೇವಿಸಬಹುದು. ಇನ್ನು ಹುಡುಗಿಯರು ಈ ಬೆರಳಿಗೆ ತುಸು ಹೆಚ್ಚಿನ ಕಾಳಜಿ ವಹಿಸುವುದು ಸಾಮಾನ್ಯ. ಇದಕ್ಕಾಗಿ ವಿಶೇಷ ಕಾಳಜಿವಹಿಸಿ ಅದಕ್ಕೆ ಸುಂದರ ಆಕಾರವನ್ನು ನೀಡುತ್ತಾರೆ. ಕಾಲ ಕಾಲಕ್ಕೆ ಉಗುರಿಗೆ ಬಣ್ಣ ಹಚ್ಚುವುದು. ಅದರ ಆರೈಕೆಗೆ ಗಮನಹರಿಸುತ್ತಾರೆ. ಇಷ್ಟೆಲ್ಲ ಕಾಳಜಿವಹಿಸಿದರೂ ಮನೆ ಕೆಲಸ ಅಥವಾ ವಿಟಮಿನ್​ ಕೊರತೆಯಿಂದಾಗಿ ಉಗುರು ತುಂಡಾಗುತ್ತದೆ. ಈ ರೀತಿ ಉಗುರು ತುಂಡಾಗದಂತೆ ಮುನ್ನೆಚ್ಚರಿಕೆ ವಹಿಸಲು ಕೆಲವು ಸರಳ ಉಪಾಯಗಳಿವೆ.

ಉಗುರಿನ ಅಂದ ಕಾಪಾಡಲು ಅದರ ತಜ್ಞರು ಅಥವಾ ಪಾರ್ಲರ್​ಗಳಿಗೆ ಹೋಗಬೇಕು ಎಂದಿಲ್ಲ. ಮನೆಯಲ್ಲಿಯೇ ಸಿಗುವ ಕೆಲವು ವಸ್ತುಗಳ ಮೂಲಕ ಅದಕ್ಕೆ ಕಾಲ ಕಾಲಕ್ಕೆ ಆರೈಕೆ ನಡೆಸಬಹುದಾಗಿದೆ. ಅಂತಹ ಕೆಲವು ಸಲಹೆಗಳು ಇಲ್ಲಿವೆ.

ಬೆಳುಳ್ಳಿ ಎಣ್ಣೆ: ಬೆಳ್ಳುಳ್ಳಿ ಎಸುಳನ್ನು ಚೆನ್ನಾಗಿ ಜಜ್ಜಿ ಅದನ್ನು ಕೊಬ್ಬರಿ ಎಣ್ಣೆಯಲ್ಲಿ ಹಾಕಿ ಚೆನ್ನಾಗಿ ಕುದಿಸಬೇಕು. ಈ ಎಣ್ಣೆಯನ್ನು ಉಗುರಿಗೆ ಹಾಕಿ ಮಸಾಜ್​ ಮಾಡಬೇಕು. ನಿತ್ಯ ಈ ರೀತಿ ಮಸಾಜ್​ ಮಾಡುವುದರಿಂದ ಉಗುರು ಆರೋಗ್ಯಯುತವಾಗಿ ಬೆಳೆದು ಅದು ಬಲವಾಗುತ್ತದೆ.

ಮೊಟ್ಟೆ ಸಿಪ್ಪೆ: ಮೊಟ್ಟೆ ಸಿಪ್ಪೆಗಳನ್ನು ಎಸೆಯುವ ಬದಲು ಅದನ್ನು ಉಗುರಿಗೆ ಹಾಕುವುದರಿಂದ ಕೂಡ ಅದನ್ನು ಬಲಗೊಳಿಸಬಹುದು. ಇದಕ್ಕೆ ಮಾಡಬೇಕಿರುವುದು ಇಷ್ಟೆ. ಮೊಟ್ಟೆ ಸಿಪ್ಪೆಯನ್ನು ಸ್ವಚ್ಛವಾಗಿ ತೊಳೆದು ಅದನ್ನು ಚೆನ್ನಾಗಿ ಪುಡಿ ಮಾಡಿಕೊಳ್ಳಿ. ಈ ಮಿಶ್ರಣವನ್ನು ನೀರಿನಲ್ಲಿ ಬೆರೆಸಿ ಉಗುರಿಗೆ ಸವರಿ. ಈ ರೀತಿ ಮಾಡುವುದರಿಂದ ಉಗುರು ಶೀಘ್ರವಾಗಿ ಬೆಳೆಯುವ ಜೊತೆಗೆ ತುಂಡಾಗುವುದು ಕೂಡ ತಪ್ಪುತ್ತದೆ.

ನಿಂಬೆ ರಸ: ನಿಂಬೆ ಹಣ್ಣಿನ ರಸವನ್ನು ಕೂಡ ಉಗುರಿಗೆ ಚೆನ್ನಾಗಿ ಹಚ್ಚಿ ಸವರುವುದರಿಂದ ಉತ್ತಮ ಆಕರ್ಷಕ ಉಗುರು ಪಡೆಯಬಹುದು. ನಿಂಬೆಯಲ್ಲಿ ವಿಟಮಿನ್​ ಸಿ ಅಂಶ ಇದ್ದು, ಇದು ಉಗುರಿನಲ್ಲಿರುವ ಬ್ಯಾಕ್ಟೀರಿಯಾಗಳನ್ನು ನಿವಾರಿಸಿ, ಚೆನ್ನಾಗಿ ಬೆಳೆಯಲು ಸಹಾಯ ಮಾಡುತ್ತದೆ. ನಿಂಬೆ ರಸವನ್ನು ಉಗುರಿಗೆ ಹಚ್ಚಿ ಚೆನ್ನಾಗಿ ಮಸಾಜ್​ ಮಾಡಿ ಅರ್ಧ ಗಂಟೆ ಬಳಿಕ ಬೆಚ್ಚಗಿನ ನೀರಿನಲ್ಲಿ ತೊಳೆಯಬೇಕು.

ಕೊಬ್ಬರಿ ಎಣ್ಣೆ: ಕೂದಲ ಜೊತೆಗೆ ಉಗುರಿನ ಬೆಳವಣಿಗೆಯಲ್ಲೂ ಕೊಬ್ಬರಿ ಎಣ್ಣೆ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಇದರಲ್ಲಿ ವಿಟಮಿನ್​ ಇ ಅಂಶ ಇದ್ದು, ಇದರಲ್ಲಿನ ಆ್ಯಂಟಿ ಆಕ್ಸಿಡೆಂಟ್​​ಗಳು ಉಗುರು ಹೊಳೆಯುವಂತೆ ಮಾಡುತ್ತದೆ. ಮಲಗಲು ಹೋಗುವ ಮುನ್ನ ಉಗುರಿಗೆ ಕೊಬ್ಬರಿ ಎಣ್ಣೆಯನ್ನು ಹಚ್ಚುವುದರಿಂದ ಉತ್ತಮ ಫಲಿತಾಂಶ ಪಡೆಯಬಹುದು.

ಸದಾ ಬಣ್ಣ ಹಚ್ಚ ಬೇಡಿ: ಉಗುರಿನ ಅಂದವನ್ನು ನೈಲ್​ ಪಾಲಿಶ್​ ಹೆಚ್ಚಿಸುವುದು ಸುಳ್ಳಲ್ಲ. ಆದರೆ, ಉಗುರಿಗೆ ಯಾವಾಗಲೂ ನೈಲ್​ ಪಾಲೀಶ್​ ಹಚ್ಚುವುದರಿಂದ ಅದು ದುರ್ಬಲವಾಗುತ್ತದೆ. ಈ ಹಿನ್ನಲೆ ನಿರಂತವಾಗಿ ಬಣ್ಣ ಹಚ್ಚುವುದಕ್ಕೆ ಕೊಂಚ ವಿರಾಮ ನೀಡುವುದು ಉತ್ತಮ.

ಸೂಚನೆ: ( ಇದು ಸಾಮಾನ್ಯ ಮಾಹಿತಿಯಾಗಿದ್ದು, ಹೆಚ್ಚಿನ ವಿವರಗಳಿಗಾಗಿ ತಜ್ಞ ವೈದ್ಯರನ್ನ ಭೇಟಿ ಮಾಡಿ)

ಇದನ್ನೂ ಓದಿ: Vitamin D: ವಿಟಮಿನ್​ ಡಿ ಕೊರತೆಯಿಂದ ಮಕ್ಕಳಲ್ಲಿ ಹಲವು ಸಮಸ್ಯೆ

Last Updated : Aug 12, 2023, 12:45 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.