ETV Bharat / sukhibhava

ತ್ವಚೆಯ ತೇವಾಂಶ ಕಾಪಾಡಲು ಅಗತ್ಯ ಈ ಶೀಟ್​ ಮಾಸ್ಕ್​; ಬಳಕೆ ಹೇಗೆ?

author img

By

Published : Apr 14, 2023, 2:52 PM IST

ಮುಖದ ತ್ವಚೆಯ ಆರೋಗ್ಯ ಮತ್ತು ಕಾಂತಿ ಕಾಪಾಡಲು ಈ ಶೀಟ್​ ಮಾಸ್ಕ್ ಬಳಸಬಹುದು.

sheet mask is necessary to maintain skin moisture; How to use?
sheet mask is necessary to maintain skin moisture; How to use?

ಸೌಂದರ್ಯವರ್ಧಕಗಳ ಬಳಕೆ ಕೇವಲ ಹೆಣ್ಣು ಮಕ್ಕಳಿಗೆ ಮಾತ್ರ ಎಂಬ ಸೀಮಿತ ಕಲ್ಪನೆ ಈಗಿಲ್ಲ. ಇಂದು ಪುರುಷರು ಕೂಡ ಚರ್ಮದ ಆರೋಗ್ಯ ಕಾಳಜಿಯಲ್ಲಿ ಅಷ್ಟೇ ಪ್ರಮಾಣದ ಪ್ರಯತ್ನ ಮಾಡುತ್ತಿದ್ದಾರೆ. ಸಾಮಾನ್ಯವಾಗಿ ಮಹಿಳೆಯರು ತಮ್ಮ ತ್ವಚೆಯ ಅಂದ ಕಾಯ್ದುಕೊಳ್ಳಲು ಸಲೂನ್​ ಅಥವಾ ಇನ್ನಿತರ ಚಿಕಿತ್ಸೆ, ನೈಸರ್ಗಿಕ ಉತ್ಪನ್ನ ಬಳಕೆ ಅಥವಾ ಮಾರುಕಟ್ಟೆಯಲ್ಲಿ ಲಭ್ಯವಾಗುವ ಸೌಂದರ್ಯ ವರ್ಧಕಗಳನ್ನು ಬಳಸುತ್ತಾರೆ. ಪುರುಷ ಮತ್ತು ಮಹಿಳೆಯರ ಚರ್ಮದ ಆರೋಗ್ಯವನ್ನು ಕಾಪಾಡುವಂತೆ ಅನೇಕ ಉತ್ಪನ್ನಗಳಿಂದು ಮಾರುಕಟ್ಟೆಯಲ್ಲಿ ಲಭ್ಯವಿದೆ.

ಅನೇಕ ಸ್ಕೀನ್​ ಕೇರ್​ ಉತ್ಪನ್ನಗಳು ಒಂದು ಮಾರುಕಟ್ಟೆಯಲ್ಲಿ ಲಭ್ಯವಿದ್ದರೂ, ಇದರಲ್ಲಿ ಕಳೆದ ಕೆಲವು ವರ್ಷದಿಂದ ಹೆಚ್ಚಾಗಿ ಜನರು ಆರಿಸುತ್ತಿರುವುದು ಶೀಟ್​ ಮಾಸ್ಕ್​. ಮುಖದ ತ್ವಚೆಯ ಆರೋಗ್ಯ ಮತ್ತು ಕಾಂತಿ ಕಾಪಾಡುವ ಈ ಶೀಟ್​ ಮಾಸ್ಕ್​ಗಳನ್ನು ಪುರುಷ ಮತ್ತು ಮಹಿಳೆಯರಿಬ್ಬರೂ ಬಳಕೆ ಮಾಡುತ್ತಿದ್ದಾರೆ. ಈ ಶೀಟ್​ ಅನ್ನು ಸೆರಂನಲ್ಲಿ ನೆನೆಸಿಟ್ಟಿರುವುದರಿಂದ ಮುಖದ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ. ಇದು ಚರ್ಮವನ್ನು ಮಾಶ್ಚರೈಸರ್​ ಮಾಡುವ ಜೊತೆಗೆ ಕಾಂತಿ ಹೆಚ್ಚಿಸುತ್ತದೆ.

ಈ ಕುರಿತು ಮಾತನಾಡಿರುವ ಆರ್ಗನಿಕ್​ ಸೌಂದರ್ಯ ಉತ್ಪನ್ನಗಳ ಸಂಸ್ಥೆಯ ಸಿಇಒ ಮತ್ತು ಸೌಂದರ್ಯ ತಜ್ಞೆ ನಂದಿತಾ, ಮಾರುಕಟ್ಟೆಯಲ್ಲಿ ಸ್ಕಿನ್​ ಕೇರ್​ ಉತ್ಪನ್ನಗಳು ಇನ್ನಿತರ ಉತ್ಪನ್ನಗಳಿಂದ ಪ್ರಗತಿದಾಯಕ. ಇದು ಜಾಗತೀಕರಣದ ಕಾಲಮಾನ. ಸ್ಕೀನ್​ಕೇರ್​ಗಳು ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದ ಮಹತ್ವ ಹೊಂದಿದೆ. ಒಂದು ದೇಶದ ಜನರು ಬಳಕೆ ಮಾಡುವ ಸೌಂದರ್ಯವರ್ಧಕದ ಕುರಿತು ಸಂಪೂರ್ಣ ಮಾಹಿತಿಯನ್ನು ಜಗತ್ತು ಹೊಂದಿದೆ. ಅದೇ ರೀತಿ ಶೀಟ್​​ ಮಾಸ್ಕ್​. ಶೀಟ್​ ಮಾಸ್ಕ್​ ಇದು ಕೊರಿಯನ್​- ಜಪಾನೀಸ್​ ಸೌಂದರ್ಯ ಚಿಕಿತ್ಸೆಯಾಗಿದ್ದು, ಇದು ಇಂದು ಪ್ರಪಂಚಾದ್ಯಂತ ಜನಪ್ರಿಯಗೊಂಡಿದೆ.

ಏನಿದು ಶೀಟ್​ ಮಾಸ್ಕ್?​​: ಶೀಟ್​ ಮಾಸ್ಕ್​ ಅನ್ನು ನಿರ್ದಿಷ್ಟ ರೀತಿಯ ಫೈಬರ್​ ಅಥವಾ ಜೆಲ್​ನಿಂದ ಮಾಡಲಾಗಿರುತ್ತದೆ. ಇದನ್ನು ಸೆರಂನಲ್ಲಿ ನೆನೆಸಿಡಲಾಗುವುದು. ಇದು ಮುಖದ ಆಕೃತಿಗೆ ಸರಿಹೊಂದುವ ರೀತಿಯಲ್ಲಿದೆ. ಈ ಸೆರಂ ಅಗತ್ಯ ಪ್ರಮುಖ ವಿಟಮಿನ್​, ನೈಸರ್ಗಿಕ ಎಣ್ಣೆ ಮತ್ತು ಇನ್ನಿತರ ಚರ್ಮದ ಪೌಷ್ಟಿಕಾಂಶದ ಗುಣಗಳಿಂದ ಕೂಡಿರುತ್ತದೆ. ಚರ್ಮಕ್ಕೆ ಮಾಶ್ಚರೈಸರ್​ ಜೊತೆಗೆ ಪೋಷಕಾಂಶವನ್ನು ಒದಗಿಸುತ್ತದೆ.

ಇದು ಏಕ ಬಳಕೆ ಮಾಸ್ಕ್​ ಆಗಿರುತ್ತದೆ. ಒಮ್ಮೆ ಬಳಕೆ ಮಾಡಿದರೆ ಮರು ಬಳಕೆಗೆ ಬರುವುದಿಲ್ಲ. ಈ ರೀತಿಯ ಮಾಸ್ಕ್​ಗಳನ್ನು ಮುಖದ ಮೇಲೆ 15 ನಿಮಿಷಗಳ ಕಾಲ ಹಾಗೆಯೇ ಬಿಡಗೇಕು. ಬಳಿಕ ಅದನ್ನು ತೆಗೆಯಬೇಕು. ಮಾಸ್ಕ್​ ತೆಗೆದ ಬಳಿಕ ಮುಖ ತೊಳೆಯದೇ ಮುಖಕ್ಕೆ ಅಂಟಿಕೊಂಡಿರುವ ಸೆರಂ ಅನ್ನು ಚೆನ್ನಾಗಿ ಮಸಾಜ್​ ಮಾಡಬೇಕು. ಇದರಿಂದ ಸೆರಂನ ಅತಿ ಹೆಚ್ಚಿನ ಲಾಭ ಪಡೆಯಬಹುದು. ಸದ್ಯ, ಮಾರುಕಟ್ಟೆಯಲ್ಲಿ ಎಲ್ಲಾ ಚರ್ಮದ ವಿಧಕ್ಕೆ ಅನುಗುಣವಾಗಿ ಈ ಶೀಟ್​ ಮಾಸ್ಕ್​ ಲಭ್ಯವಿದೆ.

ಈ ಶೀಟ್​ ಮಾಸ್ಕ್​ ಪ್ರಯೋಜನ ಕುರಿತು ಮಾತನಾಡಿರುವ ನಂದಿತ, ಇದು ಚರ್ಮದ ಮಾಶ್ಚರೈಸರ್​ ಕಾಪಾಡುತ್ತದೆ. ಚರ್ಮಕ್ಕೆ ಮೆತ್ತುವ ಧೂಳಿನ ಸಮಸ್ಯೆ, ಅದರಲ್ಲೂ ಬೇಸಿಗೆಯ ಬಿಸಿಲಿನಿಂದ, ಹೆಚ್ಚು ಎಸಿ ಬಳಕೆಯಿಂದ ಆಗುವ ಚರ್ಮದ ಸಮಸ್ಯೆ ನಿವಾರಣೆ ಮಾಡುತ್ತದೆ. ಜೊತೆಗೆ ಮೇಕಪ್​ ಬಳಕೆ ಮಾಡುವುದರಿಂದ ಚರ್ಮದಲ್ಲಿನ ನೈಸರ್ಗಿಕ ಮಾಶ್ಚರೈಸರ್​ ಕಡಿಮೆ ಆಗುತ್ತದೆ. ಇದರಿಂದ ಚರ್ಮ ಮತ್ತಷ್ಟು ಒಣಗುತ್ತದೆ. ಇದರಿಂದ ಚರ್ಮದ ಕಾಂತಿ ಕಡಿಮೆಯಾಗಿ ಅವಧಿಗೆ ಮೊದಲು ಸುಕ್ಕು ಪ್ರಾರಂಭವಾಗುತ್ತದೆ. ಇದರಿಂದ ಮುಕ್ತಿಯನ್ನು ಫೇಸ್​ ಮಾಸ್ಕ್​ ನೀಡುತ್ತದೆ. ಇದು ಚರ್ಮವನ್ನು ಹೈಡ್ರೇಟ್​ ಮಾಡಿ ಪೋಷಣೆ ಮಾಡುತ್ತದೆ.

ಕೇವಲ ತ್ವಚೆಯ ತೇವಾಂಶ ಕಾಪಾಡುವ ಮಾಸ್ಕ್​ ಅಲ್ಲದೇ, ಡಿಟೊಕ್ಸಿಫೈಯಿಂಗ್​ ಮತ್ತು ಟ್ಯಾನ್​ ಚರ್ಮಕ್ಕೆ ಸೂಕ್ತವಾದ ಮಾಸ್ಕ್​ ಅನ್ನು ಮಾರುಕಟ್ಟೆಯಲ್ಲಿ ಕಾಣಬಹುದು. ಇದು ಚರ್ಮವನ್ನು ಡಿಟೊಕ್ಸಿನ್​ ಮಾಡುವುದರ ಜೊತೆಗೆ ಮೃದು ಮತ್ತು ಹೊಳಪು ನೀಡುತ್ತದೆ. ಚರ್ಮದ ಸುಕ್ಕು ಕಡಿಮೆ ಮಾಡಿ, ಚರ್ಮದಲ್ಲಿ ಒಂದೇ ಬಣ್ಣ ಕಾಪಾಡಲು ಸಹಾಯ ಮಾಡುತ್ತದೆ.

ಶೀಟ್​ ಮಾಸ್ಕ್​ ಬಳಕೆ ಮಾಡುವಾಗ ಈ ವಿಚಾರ ನೆನಪಿರಲಿ..: ಶೀಟ್​ ಮಾಸ್ಕ್​ ಬಳಕೆ ಮಾಡುವ ಮೊದಲು ಮುಖವನ್ನು ಚೆನ್ನಾಗಿ ತೊಳೆಯಬೇಕು. ಶೀಟ್​ ಮಾಸ್ಕ್​ನಲ್ಲಿ ಸ್ವಚ್ಛ ತ್ವಚೆಯ ಮೇಲೆ ಮಾತ್ರ ಬಳಕೆ ಮಾಡಬೇಕು. ನಿಮ್ಮ ತ್ವಚೆಯ ಗುಣಮಟ್ಟಕ್ಕೆ ಅನುಗುಣವಾಗಿ ಶೀಟ್​ ಮಾಸ್ಕ್​ ಬಳಸಿ. ಶೀಟ್​ ಮಾಸ್ಕ್​ ಅನ್ನು 15 ರಿಂದ 20 ನಿಮಿಷ ಮುಖದ ಮೇಲೆ ಬಿಡಬೇಕು. ಪ್ಯಾಕೆಟ್​ನಲ್ಲಿರುವ ಸೆರಂನಿಂದ ಕತ್ತು ಮತ್ತು ಕೈಗಳಿಗೆ ಮಸಾಜ್​ ಮಾಡಿ. ಮಾಸ್ಕ್​ ತೆಗೆದ ಬಳಿಕ ವೃತ್ತಾಕಾರವಾಗಿ ಮಸಾಜ್​ ಮಾಡಬೇಕು. ಇದರಿಂದ ಸೆರಂ ತ್ವಚೆಯ ಆಳಕ್ಕಿಳಿಯುತ್ತದೆ. ಶೀಟ್​ ಮಾಸ್ಕ್​ ತೆಗೆದ ನಂತರ ಮುಖ ತೊಳೆಯಬೇಡಿ. ಶೀಟ್​ ಮಾಸ್ಕ್​ ಹಾಕಿ ರಾತ್ರಿಯಿಡೀ ಮಲಗಬೇಡಿ.

ಇದನ್ನೂ ಓದಿ: ದೇಹದ ದಣಿವು ಜೊತೆಗೆ ಚರ್ಮದ ಅಂದ ಹೆಚ್ಚಿಸಲು ಸ್ನಾನದಲ್ಲಿ ಈ ವಸ್ತುಗಳನ್ನು ಸೇರಿಸಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.