ETV Bharat / sukhibhava

ಯುರೋಪ್ ರಾಷ್ಟ್ರಗಳಲ್ಲಿ ಶ್ವಾಸಕೋಶ ಸೋಂಕು ಪ್ರಕರಣಗಳು ಉಲ್ಬಣ: WHO

author img

By ETV Bharat Karnataka Team

Published : Jan 17, 2024, 3:44 PM IST

World health organization: ಯುರೋಪ್​​ನಲ್ಲಿ ಹವಾಮಾನ ಬದಲಾವಣೆ, ಋತುಮಾನದ ಸೋಂಕು ಸೇರಿದಂತೆ ಕೋವಿಡ್​ 19, ಇನ್ಫುಯೆಂಜಾದಿಂದ ಶ್ವಾಸಕೋಶ ಸಂಬಂಧಿ ಸಮಸ್ಯೆಗಳಲ್ಲಿ ಹೆಚ್ಚಳ ಕಂಡು ಬರುತ್ತಿದೆ. ಈ ಬಗ್ಗೆ ಎಚ್ಚರಿಕೆವಹಿಸುವಂತೆ ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ರವಾನಿಸಿದೆ.

rising cases of respiratory diseases in Europe

ಕೋಪನ್​ಹೇಗನ್( ಡೆನ್ಮಾರ್ಕ್​)​: ಯುರೋಪ್​​ನಲ್ಲಿ ಶ್ವಾಸಕೋಶ ರೋಗಗಳ ಪ್ರಕರಣಗಳು ಉಲ್ಬಣಗೊಳ್ಳುತ್ತಿದ್ದು, ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ವಹಿಸುವಂತೆ ವಿಶ್ವ ಆರೋಗ್ಯ ಸಂಸ್ಥೆ ಅಧಿಕಾರಿಗಳು ಕರೆ ನೀಡಿದ್ದಾರೆ.

ಕೋಪನ್​​ಹೇಗನ್​ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಡಬ್ಲ್ಯೂಎಚ್​ಒನ ಯುರೋಪ್​ನ ಪ್ರಾದೇಶಿಕ ನಿರ್ದೇಶಕರಾಗಿರುವ ಹನ್ಸ್​ ಹೆನ್ರಿ ಪಿ ಕ್ಲುಗೆ, ಇನ್ಫುಯಂಜಾ ಸೋಂಕು ಮತ್ತು ಆಸ್ಪತ್ರೆ ದಾಖಲೀಕರಣ ಹೆಚ್ಚುತ್ತಿದೆ. ಮುಂಬರುವ ವಾರದಲ್ಲಿ ಮತ್ತಷ್ಟು ಪ್ರಕರಣಗಳ ಸಂಖ್ಯೆಗಳಲ್ಲಿ ಏರಿಕೆ ಕಾಣಬಹುದಾಗಿದ್ದು, ಈ ಸಂಬಂಧ ಆರೋಗ್ಯ ವ್ಯವಸ್ಥೆಗಳನ್ನು ಸಿದ್ಧಗೊಳಿಸುವಂತೆ ಕರೆ ನೀಡಿದ್ದಾರೆ.

ನೆದರ್​ಲ್ಯಾಂಡ್​ನಲ್ಲಿ ಶ್ವಾಸಕೋಶದ ಸಮಸ್ಯೆಗಳು ಹೆಚ್ಚಳ ಕಂಡು ಬಂದಿದೆ ಎಂದು ನ್ಯಾಷನಲ್​ ಇನ್ಸಿಟಿಟ್ಯೂಟ್​ ಫಾರ್​ ಪಬ್ಲಿಕ್​ ಹೆಲ್ತ್​ ಅಂಡ್​ ದಿ ಎನ್ವಿರಾನ್​​​​ಮೆಂಟ್​ (ಆರ್​ಐವಿಎಂ) ತಿಳಿಸಿದೆ.

ಕೋವಿಡ್​ 19 ಸೇರಿದಂತೆ, ಇನ್ಫುಯೆಂಜಾ ಸೋಂಕು ಮತ್ತು ಋತುಮಾನದ ಸೋಂಕುಗಳು ಸಾರ್ವಜನಿಕವಾಗಿ ಹೆಚ್ಚಳ ಕಂಡಿದೆ. ಜ್ವರ ರೀತಿಯ ಲಕ್ಷಣ ಹೊಂದಿರುವ ಸೋಂಕುಗಳು ಕಳೆದ ಒಂದು ವಾರದಿಂದ ಹೆಚ್ಚಳ ಕಂಡಿದೆ. ಕಳೆದ ವಾರದಿಂದ ಈ ಪ್ರಕರಣದಲ್ಲಿ ವೈದ್ಯಕೀಯ ದೂರುಗಳಲ್ಲಿ ತೀವ್ರ ಏರಿಕೆ ಕಂಡು ಬಂದಿದೆ, ಇತ್ತೀಚಿನ ದತ್ತಾಂಶ ವರದಿಯಂತೆ ಇನ್ಫುಯೆಂಜಾ ಸೋಂಕಿನ ಪ್ರಕರಣಗಳಲ್ಲಿ ಶೇ 35ರಷ್ಟು ಏರಿಕೆ ಕಂಡಿದೆ ಎಂದು ಆರ್​ಐವಿಎಂ ತಿಳಿಸಿದೆ.

ಇಟಲಿಯ ಆಸ್ಪತ್ರೆಗಳಲ್ಲಿ ಜ್ವರದ ಅಲೆ ಹೆಚ್ಚಾಗಿದ್ದು, ಇದರ ವೈದ್ಯಕೀಯ ಕ್ಷೇತ್ರದಲ್ಲಿ ಒತ್ತಡ ಹೆಚ್ಚಿದೆ. ಕಳೆದ 15 ವರ್ಷದಲ್ಲಿ ಅತಿ ಹೆಚ್ಚಿನ ಪ್ರಕರಣಗಳು ದಾಖಲಾಗುತ್ತಿದೆ ಎಂದು ಇಟಾಲಿಯನ್​ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ. ಋತುಮಾನದ ಜ್ವರ ಪ್ರಕರಣಗಳಲ್ಲಿ ತುರ್ತು ಕೊಠಡಿಗಳ ಸಂಖ್ಯೆಯಲ್ಲಿ ಶೇ 20 ರಿಂದ ಶೇ 30ರಷ್ಟು ಏರಿಕೆ ಕಂಡಿದೆ ಎಂದು ಇಟಾಲಿಯನ್​ ಫೆಡರೇಷನ್​​ ಆಫ್​ ಹೆಲ್ತ್​​ ಅಥಾರಿಟಿಸ್​ ಮತ್ತು ಆಸ್ಪತ್ರೆ (ಎಫ್​ಐಎಎಸ್​ಒ) ವರದಿ ಆಗಿದೆ.

ಈ ನಡುವೆ ಸ್ಪಾನಿಷ್​​ ಸರ್ಕಾರವೂ ಆಸ್ಪತ್ರೆಗಳಲ್ಲಿ ಫೇಸ್​​ಮಾಸ್ಕ್​​ ಬಳಕೆಯನ್ನು ಕಡ್ಡಾಯಗೊಳಿಸಿದೆ. ಸ್ಪೇನ್​ನಲ್ಲಿ ಶ್ವಾಸಕೋಶದ ಅನಾರೋಗ್ಯ ಪ್ರಕರಣದಲ್ಲಿ ಏರಿಕೆ ಕಂಡಿದ್ದು, ಲಕ್ಷದಲ್ಲಿ 952 ಪ್ರಕರಣಗಳು ದಾಖಲಾಗಿದೆ. ಇದು ಸೋಂಕಿನ ತೀವ್ರತೆ ಹೆಚ್ಚಿದೆ ಎಂದು ಆರೋಗ್ಯ ಸಚಿವ ಮೊನಿಕಾ ಗರ್ಸಿಯಾ ಎಚ್ಚರಿಕೆ ಮಾಡಿದೆ.

ಡಬ್ಲೂಎಚ್​ಒ ಯುರೋಪ್​ ಹೊಸ ಅಧ್ಯಯನದ ಪ್ರಕಾರ ಈ ಪ್ರದೇಶದಲ್ಲಿ, ಕೋವಿಡ್​​ 19 ಲಸಿಕೆಯ ಪರಿಣಾಮಕಾರಿ ಮತ್ತು ಸುರಕ್ಷತೆಯಿಂದ 1.4 ಮಿಲಿಯನ್​ ಜನರ ರಕ್ಷಣೆ ಆಗಿದೆ ಎಂದು ಡಬ್ಲ್ಯೂಎಚ್​ಒ ತಿಳಿಸಿದೆ. ಕೋವಿಡ್​ 19 ಉಪತಳಿ ಜೆಎನ್​​.1 ಸೋಂಕು ಪ್ರಾಬಲ್ಯವನ್ನು ಹೊಂದಿ ವೇಗವಾಗಿ ಹರಡುತ್ತಿದೆ. ಹೆಚ್ಚಿದ ತೀವ್ರತೆಯನ್ನು ಸೂಚಿಸುವ ಪುರಾವೆಗಳ ಕೊರತೆಯ ಹೊರತಾಗಿಯೂ, ರೂಪಾಂತರದ ಅನಿರೀಕ್ಷಿತತೆಗೆ ನಿರಂತರ ಮೇಲ್ವಿಚಾರಣೆಯ ಅಗತ್ಯವಿದೆ ಎಂದು ಕ್ಲುಗೆ ತಿಳಿಸಿದ್ದಾರೆ. (ಐಎಎನ್​ಎಸ್​)

ಇದನ್ನೂ ಓದಿ: ಚೀನಾದಲ್ಲಿ ಮತ್ತೆ ಕೋವಿಡ್ ಉಲ್ಬಣ: ಜೆಎನ್​.1 ತಳಿ ವ್ಯಾಪಿಸುವ ಎಚ್ಚರಿಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.