ETV Bharat / sukhibhava

ದೇಶದಲ್ಲಿ 10 ವರ್ಷಗಳಲ್ಲಿ ಮೂರು ಪಟ್ಟು ಹೆಚ್ಚಾದ ಅಂಗಾಂಗ ದಾನ

author img

By

Published : May 4, 2023, 10:24 AM IST

ಅಂಗಾಂಗ ದಾನದ ಜಾಗೃತಿ ಜನರಲ್ಲಿ ಹೆಚ್ಚುತ್ತಿದೆ. ಮೃತ ವ್ಯಕ್ತಿಗಳ ಅಂಗಾಂಗಗಳ ದಾನಕ್ಕೆ ಕುಟುಂಬಗಳು ಮುಂದಾಗುತ್ತಿವೆ.

Organ donations tripled in 10 years
Organ donations tripled in 10 years

ನವದೆಹಲಿ: ದೇಶದಲ್ಲಿ ಅಂಗಾಂಗ ಕಸಿ ಪ್ರಕ್ರಿಯೆಯಲ್ಲಿ ಗಮನಾರ್ಹ ಏರಿಕೆ ಕಂಡಿದೆ. 2013ರಲ್ಲಿ 5,000 ದಷ್ಟಿದ್ದ ಅಂಗಾಂಗ ಕಸಿ ಪ್ರಕರಣಗಳು 2022ರಲ್ಲಿ 15,000ಕ್ಕೂ ಮೀರಿ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್​ ಮಾಂಡವಿಯಾ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆದ ಅಂಗಾಂಗ ದಾನ ನೀತಿಯ ಪರಿಶೀಲನಾ ಸಭೆಯಲ್ಲಿ ಬಹಿರಂಗಪಡಿಸಲಾಗಿದೆ.

ರಾಷ್ಟ್ರೀಯ, ಪ್ರಾದೇಶಿಕ ಮತ್ತು ರಾಜ್ಯ ಮಟ್ಟದಲ್ಲಿ ಅಂಗ ಮತ್ತು ಅಂಗಾಂಶ ಕಸಿ ಸಂಸ್ಥೆಯ ಜಾಲದ ಮೂಲಕ ಸಮನ್ವಯತೆ ನಡೆಸಿ, ಮೃತ ದಾನಿಗಳ ಅಂಗಾಂಗಗಳನ್ನು ಬಳಸಲಾಗುತ್ತಿದೆ. 2016ರಲ್ಲಿ 930 ಮೃತ ದಾನಿಗಳಿಗೆ 2,265 ಅಂಗಾಂಶಗಳನ್ನು ಬಳಸಲಾಗಿದೆ. 2022ರಲ್ಲಿ 904 ಮೃತ ದಾನಿಗಳಿಂದ 2,765 ಅಂಗಾಂಶಗಳನ್ನು ಕಸಿಗೆ ಪಡೆಯಲಾಗಿದೆ ಎಂದು ಮಾಂಡವಿಯಾ ತಿಳಿಸಿದರು.

ಅಧಿಕೃತ ದತ್ತಾಂಶದ ಅನುಸಾರ, ಮಾರ್ಚ್​ 20, 2023ರವರೆಗೆ ದೇಶದಲ್ಲಿ ಅಂಗಾಂಶ ದಾನಕ್ಕೆ ದಾಖಲು ಮಾಡಿಕೊಂಡಿರುವವರ ಸಂಖ್ಯೆ 4,49,760. ಅಂಗಾಂಗ ದಾನ ಮತ್ತು ಅಂಗಾಂಗ ಕಸಿ ವಲಯವನ್ನು ಸುಧಾರಣೆ ನಡೆಸಲು ದೂರದೃಷ್ಟಿಯ ರಚನಾತ್ಮಕ ಬದಲಾವಣೆ ನಡೆಸಲಾಗುತ್ತಿದೆ. ಈ ಸಂಬಂಧ ನಿರ್ದೇಶನ ನೀಡಿದ ಅವರು, ಹಿರಿಯ ಅಧಿಕಾರಿಗಳೊಂದಿಗೆ ಕಸಿ ಕುರಿತು ಮಹತ್ವದ ಸಭೆ ನಡೆಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ತಮ್ಮ 99ನೇ ಮನ್​ ಕೀ ಬಾತ್​ ಕಾರ್ಯಕ್ರಮದಲ್ಲಿ ಅಂಗಾಂಗ ದಾನಕ್ಕೆ ಜನರಿಗೆ ಕರೆ ನೀಡಿದ್ದರು. ಜನರ ಜೀವ ಉಳಿಸುವಲ್ಲಿ ಉತ್ಕೃಷ್ಟ ಕೆಲಸವಾದ ಅಂಗಾಂಗ ದಾನಕ್ಕೆ ದೇಶದ ಜನರು ಮುಂದಾಗಬೇಕು ಎಂದಿದ್ದರು. ಪ್ರಧಾನಿ ಮೋದಿ ಮಾತು ಅನೇಕ ಮಂದಿಯನ್ನು ಪ್ರೇರೇಪಿಸಿದೆ ಎಂದು ಇದೇ ವೇಳೆ ಮಾಂಡವಿಯಾ ಹೇಳಿದ್ದಾರೆ.

ಅಂಗಾಂಗ ದಾನ ಮತ್ತು ಕಸಿ ಪ್ರಕ್ರಿಯೆ ಕಡೆಗೆ ಮತ್ತಷ್ಟು ನೀತಿ ಸುಧಾರಣೆಗೆ ಅಂತಾರಾಷ್ಟ್ರೀಯ ಮಾನದಂಡಗಳಿಂದ ಕಲಿಕೆಗಳನ್ನು ಅಳವಡಿಸಿಕೊಳ್ಳುವಂತೆ ಸೂಚಿಸಿದ್ದಾರೆ. ದಾನ ಕೆಲಸದಲ್ಲಿ ನೊಟೊ ಕಾರ್ಯ ನಿರ್ವಹಿಸುತ್ತಿದೆ. ಇದು ಆಸ್ಪತ್ರೆಗಳಲ್ಲಿ ಅಂಗಾಂಗ ದಾನ ಅಳವಡಿಕೆ ಕುರಿತು ಮತ್ತು ಕಸಿ ಕಾರ್ಯಕ್ರಮದ ಅನುಷ್ಟಾನ ಕುರಿತು ಹಂತ ಹಂತವಾಗಿ ಮಾರ್ಗದರ್ಶನ ನೀಡುತ್ತದೆ. ಇತ್ತೀಚೆಗೆ ಕೇಂದ್ರ ಸರ್ಕಾರ ಕೂಡ ಅಂಗಾಂಗ ದಾನಕ್ಕೆ ಮುಂದಾಗುವ ಕೇಂದ್ರ ಸರ್ಕಾರಿ ಉದ್ಯೋಗಿಗೆ 42 ದಿನ ವಿಶೇಷ ಸಾಂದರ್ಭಿಕ ರಜೆ ನೀಡಿದೆ.

ಏನಿದು ಅಂಗಾಂಗ ದಾನ?: ಅಕಾಲಿಕ ಮೃತ ವ್ಯಕ್ತಿ ಅಥವಾ ಮಿದುಳು ನಿಷ್ಕ್ರಿಯಗೊಂಡ ಜೀವಂತ ಅಂಗಾಂಗಗಳನ್ನು ಅಂಗಾಂಗ ದೋಷ ಅಥವಾ ಸಮಸ್ಯೆಗಳಿಂದ ಬಳಲುತ್ತಿರುವ ವ್ಯಕ್ತಿಗೆ ಹೊಂದಿಸಿ, ಅವರಿಗೆ ಮರು ಜೀವ ನೀಡುವುದು. ಮೃತ ವ್ಯಕ್ತಿಯೊಬ್ಬನಿಂದ ಕನಿಷ್ಟ ಆರು ಮಂದಿ ವಿವಿಧ ಅಂಗಾಂಗಗಳ ಸಮಸ್ಯೆಯಿಂದ ಬಳಲುತ್ತಿರುವ ಮಂದಿ ಬದುಕಬಹುದು.

ಇದನ್ನೂ ಓದಿ: ಶಾಖದ ಅಲೆಗಳಿಂದ ಅಸ್ತಮಾ ಉಲ್ಬಣ.. ಇದರಿಂದ ಬಚಾವ್​ ಆಗಲು ತಜ್ಞರು ನೀಡಿರುವ ಸಲಹೆಗಳೇನು?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.