ETV Bharat / sukhibhava

ನೈಸರ್ಗಿಕ ವಿಪತ್ತುಗಳಿಂದ ಯುವಜನತೆಯ ಶಿಕ್ಷಣದ ಮೇಲೆ ಗಾಢ ಪರಿಣಾಮ

author img

By

Published : Jul 4, 2023, 11:13 AM IST

ನೈಸರ್ಗಿಕ ವಿಪತ್ತಿನಂತಹ ಆಘಾತಗಳಿಂದ ಕುಟುಂಬದ ಆದಾಯ ಕಳೆದುಕೊಳ್ಳುವ ಯುವಜನತೆ ವಿದ್ಯಾಭ್ಯಾಸದಿಂದ ದೂರಾಗಿ ಅನಿವಾರ್ಯವಾಗಿ ದುಡಿಮೆಗೆ ಮುಂದಾಗುತ್ತಾರೆ.

natural disasters traumas  can have a lasting impact on the education of young people
natural disasters traumas can have a lasting impact on the education of young people

ವಾಷಿಂಗ್ಟನ್​: ನೈಸರ್ಗಿಕ ವಿಪತ್ತಿನಂತಹ ಒತ್ತಡದ ಅನುಭವಗಳು ಯುವ ಜನರ ವಿದ್ಯಾಭ್ಯಾಸ ಮತ್ತು ಆಹಾರ ಭದ್ರತೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ಸಂಶೋಧನೆ ತಿಳಿಸಿದೆ. ಪೆರುವಿನ ದತ್ತಾಂಶವನ್ನು ಬಳಕೆ ಮಾಡಿ ಪೆನ್ನ್​​ ಸ್ಟೇಟ್​ ಕಾಲೇಜ್​ ಆಫ್​ ಅಗ್ರಿಕಲ್ಚರ್​​ ಸೈನ್ಸ್​​ ಈ ಅಧ್ಯಯನ ನಡೆಸಿದೆ. ಈ ವೇಳೆ ನೈಸರ್ಗಿಕ ವಿಪತ್ತುಗಳಿಂದ ಕುಟುಂಬ ಕಳೆದುಕೊಳ್ಳುವುದು, ಕುಟುಂದ ಆಧಾಯ ಕಳೆದುಕೊಳ್ಳುವುದು ಯುವ ಜನರ ಮೇಲೆ ಆಘಾತದ ಅನುಭವ ಮೂಡಿಸುತ್ತದೆ ಎಂದಿದ್ದಾರೆ. ಆಹಾರ ಭದ್ರತೆ ಕಡಿಮೆಯೂ ಆರಂಭಿಕ ಜೀವನದಲ್ಲಿ ಕಾಲಾನಂತರದಲ್ಲಿ ಕಡಿಮೆ ಓದುವಿಕೆ ಮತ್ತು ಶಬ್ದಕೋಶ ಪರೀಕ್ಷೆಯ ಅಂಕಗಳೊಂದಿಗೆ ಸಂಬಂಧ ಹೊಂದಿದೆ. ಈ ಕುರಿತು ಅಧ್ಯಯನವನ್ನು ಜರ್ನಲ್​ ಪಾಪ್ಯೂಲೆಷನ್​ ರಿಸರ್ಚ್​ ಅಂಡ್​ ಪಾಲಿಸಿ ರಿವ್ಯೂನಲ್ಲಿ ಪ್ರಕಟಿಸಲಾಗಿದೆ.

ಕ್ಯಾರೊಲಿನ್ ರೆಯೆಸ್ ಅಧ್ಯಯನವನ್ನು ನಡೆಸಿದ್ದು, ಫಲಿತಾಂಶವೂ ಮಾರ್ಗದರ್ಶನ ನಿಯಮಕ್ಕೆ ಸಹಾಯ ಮಾಡುವ ಜೊತೆಗೆ ಆಘಾತದ ಪರಿಣಾಮವನ್ನು ಕಿರಿದಾಗಿಸುವ ಗುರಿ ಹೊಂದಿದೆ ಎಂದರು. ಹವಾಮಾನ ಬದಲಾವಣೆ ಗಂಭೀರ ಹವಾಮಾನ ಘಟನೆಗೆ ಕಾರಣವಾಗುವ ಜೊತೆಗೆ ಆರ್ಥಿಕ ಬಿಕ್ಕಟ್ಟು ಮತ್ತು ಸಾಂಕ್ರಾಮಿಕವೂ ಕುಟುಂಬಗಳ ಮೇಲೆ ಸವಾಲು ಉಂಟುಮಾಡುತ್ತದೆ. ಈ ಆಘಾತಗಳ ಪರಿಣಾಮಗಳನ್ನು ಕಡಿಮೆ ಮಾಡಲು ಸಹಾಯ ಮಾಡುವ ನೀತಿಗಳಿಗೆ ಇದು ನಿರ್ಣಾಯಕವಾಗಿದೆ. ಹಣ ವರ್ಗಾವಣೆ, ಸಾಮಾಜಿಕ ರಕ್ಷಣೆಗಳ ವಿಸ್ತರಣೆ, ವ್ಯಾಪಕವಾಗಿ ಲಭ್ಯವಿರುವ ವಿಮಾ ಕಾರ್ಯಕ್ರಮಗಳನ್ನು ಇವು ಒಳಗೊಂಡಿರಬಹುದು.

ಆಘಾತಕ್ಕೆ ಒಳಗಾಗುವ ಮಕ್ಕಳಲ್ಲಿ ಆರೋಗ್ಯ ಮತ್ತು ಕಲಿಕೆ ಮೇಲೆ ಗಾಢ ಪರಿಣಾಮ ಬೀರಬಹುದು. ಉದಾಹರಣೆಗೆ ಮಕ್ಕಳು ತಮ್ಮ ಒಡಹುಟ್ಟಿದವರು ಅಥವಾ ಪೋಷಕರಿಗೆ ಸಹಾಯ ಮಾಡುವ ಕಾರಣ ಅವರು ಶಾಲೆಯಿಂದ ವಿಮುಖರಾಗಬಹುದು. ಇದರಿಂದ ಯುವ ಜನತೆ ಶಾಲೆಯ ಬಗ್ಗೆ ಗಮನ ಕಡಿಮೆ ಹರಿಸಬಹುದು ಅಥವಾ ಶಾಲೆಯನ್ನೇ ಬಿಡಬೇಕಾಗಬಹುದು.

ಸಂಶೋಧಕರ ಪ್ರಕಾರ, ಈ ಹಿಂದಿನ ಅಧ್ಯಯನದಲ್ಲೂ ಮನೆಯ ಸದಸ್ಯರ ಆಘಾತದಿಂದ ಮಕ್ಕಳು ದುರ್ಬಲಗೊಳ್ಳುತ್ತಾರೆ ಎಂಬುದು ಪತ್ತೆಯಾಗಿದೆ. ಯುವ ಮಕ್ಕಳು ಇದರಿಂದ ಭಾಗಶಃ ಆಘಾತಕ್ಕೆ ಒಳಗಾಗಬಹುದು. ಆರಂಭಿಕ ಜೀವನದಲ್ಲಿ ಎದುರಾಗುವ ಆಘಾತಗಳು ದೈಹಿಕ ಮತ್ತು ಅರಿವಿನ ಅಭಿವೃದ್ಧಿ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.

ಗ್ರಾಮೀಣವಾಸಿಗಳ ಮಕ್ಕಳು ಇಂತಹ ನೈಸರ್ಗಿಕ ಆಘಾತಗಳಿಂದ ಹೆಚ್ಚುವರಿ ಆಘಾತಕ್ಕೆ ಒಳಗಾಗಬಹುದು. ಬರಗಾಲ ಕುಟುಂಬದ ಆದಾಯದ ಮೇಲೆ ಪರಿಣಾಮ ಬೀರಿದರೆ ಮಕ್ಕಳು, ಒತ್ತಾಯಪೂರ್ವಕವಾಗಿ ಶಾಲೆ ತೊರೆದು ಮನೆಯ ಆದಾಯದ ಮಾರ್ಗ ಹುಡುಕಬಹುದು. ಈ ಮಧ್ಯೆ ಶಾಲೆಗಳಲ್ಲಿನ ಹಾಜರಾತಿಗಳು ಇತ್ತೀಚಿನ ವರ್ಷಗಳಲ್ಲಿ ಸುಧಾರಣೆ ಕಂಡಿದೆ. ಆದಾಗ್ಯೂ 2018ರಲ್ಲಿ ವಿಶ್ವಾದ್ಯಂತ ಶಾಲಾ ವಯಸ್ಸಿನ ಮಕ್ಕಳಲ್ಲಿ ಸುಮಾರು ಐದನೇ ಒಂದು ಭಾಗದಷ್ಟು ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ.

ಶಿಕ್ಷಣ ಮತ್ತು ಆರಂಭಿಕ ಕೆಲಸದ ಅನುಭವಗಳು ಭವಿಷ್ಯದ ಆರ್ಥಿಕ ಮತ್ತು ಸಾಮಾಜಿಕ ಯಶಸ್ಸಿನ ಮೇಲೆ ಪರಿಣಾಮ ಬೀರುತ್ತದೆ. ಆಘಾತಕ್ಕೆ ಒಳಗಾಗುವುದು ಜೀವಿತಾವಧಿಯಲ್ಲಿ ಕಷ್ಟಗಳನ್ನು ಉಂಟುಮಾಡುವ ಸಂದರ್ಭಗಳನ್ನು ಉಂಟು ಮಾಡಬಹುದು ಎಂದು ಅಧ್ಯಯನ ಲೇಖಕಿ ರೆಯೆಸ್​ ತಿಳಿಸಿದ್ದಾರೆ.

ಇದನ್ನೂ ಓದಿ: ಪೋಷಕರು ಮಗುವಿಗೆ ಹೆಚ್ಚು ಗಮನ ನೀಡಬೇಕೇ? ಏನನ್ನುತ್ತದೆ ಅಧ್ಯಯನ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.