ETV Bharat / sukhibhava

ಕಡಿಮೆ ವೇತನ, ಒತ್ತಡದ ಕೆಲಸ ಹೊಂದಿರುವ ಪುರುಷರಲ್ಲಿ ಹೃದಯಾಘಾತ ಅಪಾಯ ಹೆಚ್ಚು!

author img

By ETV Bharat Karnataka Team

Published : Sep 20, 2023, 11:14 AM IST

ಉದ್ಯೋಗ ಸ್ಥಳದಲ್ಲಿ ವ್ಯಕ್ತಿ ಹೊಂದಿರುವ ಕೆಲಸದೊತ್ತಡ ಮತ್ತು ಪಡೆಯುತ್ತಿರುವ ವೇತನವು ಆತನ ಯೋಗಕ್ಷೇಮದ ಮೇಲೆ ಬೀರುವ ಪರಿಣಾಮ ಕುರಿತು ಈ ಅಧ್ಯಯನ ನಡೆಸಲಾಗಿದೆ.

Men who receive low salary and stressful jobs are at higher risk of heart attack
Men who receive low salary and stressful jobs are at higher risk of heart attack

ನ್ಯೂಯಾರ್ಕ್​​: ಒತ್ತಡದಾಯಕ ಉದ್ಯೋಗ ನಿರ್ವಹಣೆಯ ಜೊತೆಗೆ ಕಡಿಮೆ ಸಂಬಳ ಪಡೆಯುವ ಪುರುಷರು ಒತ್ತಡದಾಯಕವಲ್ಲದ ಕೆಲಸ ಮಾಡುವ ವ್ಯಕ್ತಿಗಳಿಗಿಂತ ಹೃದಯಾಘಾತದ ಅಪಾಯವನ್ನು ಎರಡು ಪಟ್ಟು ಹೆಚ್ಚು ಹೊಂದಿರುತ್ತಾರೆ ಎಂದು ಹೊಸ ಅಧ್ಯಯನ ತಿಳಿಸಿದೆ.

ಸರ್ಕ್ಯೂಲೇಷನ್​: ಕಾರ್ಡಿಯೋವಸ್ಕ್ಯೂಲರ್​ ಕ್ವಾಲಿಟಿ ಆ್ಯಂಡ್​ ಔಟ್​ಕಮ್​ ಜರ್ನಲ್​ನಲ್ಲಿ ಈ ಕುರಿತು ವರದಿ ಪ್ರಕಟಿಸಲಾಗಿದೆ. ಉದ್ಯೋಗದ ಒತ್ತಡ ಮತ್ತು ಅವರ ಕೆಲಸದ ಸ್ಥಳದಲ್ಲಿನ ಶ್ರಮದ ಅಸಮತೋಲನವು ಹೃದಯಾಘಾತದ ಅಪಾಯ ಹೆಚ್ಚಿಸುತ್ತದೆ. ಕೆಲಸದ ಸ್ಥಳದಲ್ಲಿ ಗಮನಾರ್ಹ ಸಮಯ ಕಳೆಯುವುದನ್ನು ಗಮನಿಸಿದಾಗ ಕೆಲಸದೊತ್ತಡ ಮತ್ತು ರಕ್ತನಾಳದ ಆರೋಗ್ಯದ ನಡುವಿನ ಸಂಬಂಧವನ್ನು ಅರ್ಥಮಾಡಿಕೊಳ್ಳಬಹುದು. ಇದು ಉದ್ಯೋಗಿಗಳ ಆರೋಗ್ಯಕ್ಕೆ ನಿರ್ಣಾಯಕ ಎಂದು ಕ್ವಿಬೆಕ್​ನ ಸಿಎಚ್​ಯು ಡಿ ಕ್ವಿಬೆಕ್​ ಯುನಿವರ್ಸಿಟಿ ರಿಸರ್ಚ್​ ಸೆಂಟರ್​ನ ಮತಿಲ್ದೆ ಲವಿಗ್ನೆ ರೊಬಿಚೌದ್​​ ಹೇಳಿದ್ದಾರೆ.

ಅಧ್ಯಯನ ತಿಳಿಸುವಂತೆ ಉದ್ಯೋಗದ ಒತ್ತಡ ಅನುಭವಿಸುವ/ ಶ್ರಮದ ಅಸಮತೋಲನ ಹೊಂದಿರುವ ವ್ಯಕ್ತಿ ಒತ್ತಡ ಹೊಂದಿರದ ವ್ಯಕ್ತಿಗಿಂತ ಶೇ 49ರಷ್ಟು ಹೃದಯಾಘಾತದ ಅಪಾಯ ಹೆಚ್ಚು ಅನುಭವಿಸುತ್ತಾನೆ ಎಂದರು. ಮಹಿಳೆಯರ ಕೆಲಸದ ಮಾನಸಿಕ ಒತ್ತಡದ ಪರಿಣಾಮ ಅನಿರ್ದಿಷ್ಟವಾಗಿದೆ ಎಂದು ಇದೇ ವೇಳೆ ಅಧ್ಯಯನ ತೋರಿಸಿದೆ.

ಲವಿಗ್ನೆ- ರೊಬಿಚೌಡ್​ ಪ್ರಕಾರ, ಮಾನಸಿಕ ಒತ್ತಡ ಎಂದರೆ, ಕೆಲಸದ ಸ್ಥಳದಲ್ಲಿ ವ್ಯಕ್ತಿ ಹೆಚ್ಚಿನ ಉದ್ಯೋಗದ ಬೇಡಿಕೆ ಹೊಂದಿರುವ ಜೊತೆಗೆ ಕಡಿಮೆ ನಿಯಂತ್ರಣ ಹೊಂದಿರುವುದಾಗಿದೆ. ಶ್ರಮದ ಪ್ರತಿಫಲದ ಅಸಮಾತೋಲನ ಎಂದರೆ, ಉದ್ಯೋಗ ಕೆಲಸಕ್ಕೆ ಹೆಚ್ಚು ಶ್ರಮವಹಿಸುವುದು. ಆದರೆ ಅದಕ್ಕೆ ತಕ್ಕಂತೆ ಅವರು ಪ್ರತಿಫಲ ಪಡೆಯದೇ ಹೋಗುವ ವಿದ್ಯಮಾನ.

ಈ ಅಧ್ಯಯನದ ಸಂಬಂಧ ಸಂಶೋಧಕರು 6,500 ಉದ್ಯೋಗಿಗಳನ್ನು ಅಧ್ಯಯನ ಮಾಡಿದ್ದಾರೆ. ಭಾಗಿಯಾದವರ ಸರಾಸರಿ ವಯೋಮಾನ 45 ವರ್ಷವಾಗಿದ್ದು, ಇವರಲ್ಲಿ ಯಾವುದೇ ಹೃದಯ ಸಮಸ್ಯೆ ಕಂಡುಬಂದಿಲ್ಲ. 2000ದಿಂದ 2018ರವರೆಗೆ 18 ವರ್ಷಗಳ ಕಾಲ ಇವರನ್ನು ಅಧ್ಯಯನ ಮಾಡಲಾಗಿದೆ. ಉದ್ಯೋಗ ಒತ್ತದ ಶ್ರಮದ ಪ್ರತಿಫಲದ ಅಸಮಾತೋಲನವನ್ನು ಪ್ರಶ್ನಾವಳಿಗಳು ಮತ್ತು ಆರೋಗ್ಯ ದತ್ತಾಂಶದ ಬಳಕೆ ಮಾಡಿಕೊಂಡು ಹೃದಯ ಮಾಹಿತಿ ಪಡೆಯಲಾಗಿದೆ.

ಕೆಲಸದ ವಾತಾವರಣದಿಂದ ಒತ್ತಡವನ್ನು ಕಡಿಮೆ ಮಾಡುವ ಗುರಿ ಹೊಂದಿರುವ ಮಧ್ಯಸ್ಥಿಕೆಗಳು ಪುರುಷರಿಗೆ ವಿಶೇಷವಾಗಿ ಪರಿಣಾಮಕಾರಿಯಾಗಬಹುದು. ಮಹಿಳೆಯರಿಗೆ ಧನಾತ್ಮಕ ಪರಿಣಾಮಗಳನ್ನು ಬೀರಬಹುದು ಎಂದು ಅಧ್ಯಯನದ ಫಲಿತಾಂಶ ತೋರಿಸಿದೆ. ಅಲ್ಲದೇ, ಒತ್ತಡದಂತಹ ಅಂಶಗಳು ಖಿನ್ನತೆಯಂತಹ ಆರೋಗ್ಯ ಸಮಸ್ಯೆಯೊಂದಿಗೆ ಸಮಸ್ಯೆ ಹೊಂದಿರುವುದನ್ನು ಕಾಣಬಹುದು ಎಂದು ರೋಬಿಚೌಡ್​ ತಿಳಿಸಿದ್ದಾರೆ. (ಐಎಎನ್​ಎಸ್​)

ಇದನ್ನೂ ಓದಿ: ಯುಕೆಯಲ್ಲಿ ಕೋವಿಡ್ ಉಲ್ಬಣ​; 65 ವರ್ಷ ಮೇಲ್ಪಟ್ಟವರಿಗೆ ಬೂಸ್ಟರ್​ ಪಡೆಯುವಂತೆ ಮನವಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.