ETV Bharat / sukhibhava

ಈ ಬಾರಿಯ ಹೋಳಿ ಕಾಮ ದಹನಕ್ಕೆ ಶುಭ ಮೂಹೂರ್ತ ಯಾವುದು ಗೊತ್ತಾ..?

author img

By

Published : Mar 1, 2023, 5:59 PM IST

Updated : Mar 1, 2023, 6:12 PM IST

ಹೋಳಿ ಹಬ್ಬ ಹತ್ತಿರ ಬರುತ್ತಿದೆ. ಹೀಗಿರುವಾಗ ಹೋಳಿ ಹಬ್ಬ ಯಾವಾಗ, ಹೋಳಿಯ ಕಾಮ ದಹನ ಯಾವಾಗ ಎಂದು ತಿಳಿಯಲು ಎಲ್ಲರೂ ಕಾತರರಾಗಿದ್ದಾರೆ. ಈ ಬಗ್ಗೆ ವಿದ್ವಾಂಸರು ಮತ್ತು ಜ್ಯೋತಿಷಿಗಳು ಏನು ಹೇಳುತ್ತಾರೆಂದು ತಿಳಿಯೋಣ ಬನ್ನಿ.

varanasi holi festival
ಹೋಳಿ ಹಬ್ಬ

ವಾರಾಣಸಿ (ಉತ್ತರ ಪ್ರದೇಶ): ಹೋಳಿ ಹಬ್ಬ ಸಮೀಪಿಸಿದ್ದು, ಈ ಬಾರಿ ಹೋಳಿ ವಿಚಾರದಲ್ಲಿ ಗೊಂದಲ ಸೃಷ್ಟಿಯಾಗಿದೆ. ಏಕೆಂದರೆ ಕೆಲವರು ಮಾರ್ಚ್​ 7 ರಂದು ಮತ್ತು ಇನ್ನೂ ಕೆಲವರು ಮಾರ್ಚ್ 8ರಂದು ಹೋಳಿ ಹಬ್ಬವನ್ನು ಆಚರಿಸುವ ಬಗ್ಗೆ ಮಾತನಾಡುತ್ತಿದ್ದಾರೆ. ಆದರೆ, ಹೋಳಿ ಹಿನ್ನೆಲೆ ಕಾಮ ದಹನದ ಮರುದಿನ ಮಾತ್ರ ಹೋಳಿ ಹಬ್ಬ ಮಾನ್ಯವಾಗಿದೆ. ಹೌದು, ಈ ಬಾರಿಯೂ ಇದೇ ಪದ್ಧತಿಯಂತೆ ಹೋಳಿ ಆಚರಿಸಲು ನಿರ್ಧರಿಸಲಾಗಿದೆ.

ಕಾಶಿಯ ವಿವಿಧ ವಿದ್ವಾಂಸರು ಮತ್ತು ಜ್ಯೋತಿಷಿಗಳು ಈ ಬಗ್ಗೆ ಒಂದೇ ಅಭಿಪ್ರಾಯವನ್ನು ಹೊಂದಿದ್ದಾರೆ. ಮಾರ್ಚ್ 6ರಂದು ಭದ್ರಾ ನೆರಳಿನ ಕಾರಣ, ಹೋಳಿಕಾ ದಹನವು ತಡರಾತ್ರಿ ನಡೆಯುತ್ತದೆ. ಮರುದಿನ ಅಂದ್ರೆ ಮಾರ್ಚ್ 7 ರಂದು ಹೋಳಿ ಹಬ್ಬವನ್ನು ಆಚರಿಸಲಾಗುತ್ತದೆ. ಆದರೆ, ಇದರಲ್ಲಿ ಕೆಲವು ಕಾರಣಗಳು ಮತ್ತು ಷರತ್ತುಗಳಿವೆ. ಅವುಗಳ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳೋಣ ಬನ್ನಿ.

varanasi holi festival
ಹೋಳಿ ಕಾಮ ದಹನದ ದೃಶ್ಯ- ಸಾಂದರ್ಭಿಕ ಚಿತ್ರ

ಧರ್ಮಗ್ರಂಥಗಳು ಏನು ಹೇಳುತ್ತವೆ?: ಧರ್ಮಸಿಂಧು ಮತ್ತು ಇತರ ಸನಾತನಿ ಪಂಚಾಂಗ ಸೇರಿದಂತೆ ಹೋಳಿ ಬಗ್ಗೆ ಧರ್ಮಗ್ರಂಥಗಳು ಏನು ಹೇಳುತ್ತವೆ? ಈ ನಿಟ್ಟಿನಲ್ಲಿ ಕಾಶಿ ಹಿಂದೂ ವಿಶ್ವವಿದ್ಯಾನಿಲಯದ ಜ್ಯೋತಿಷ್ಯ ವಿಭಾಗದ ಹಿರಿಯ ವಿದ್ವಾಂಸರಾದ ಪಂಡಿತ್ ಸುಭಾಷ್ ಪಾಂಡೆ ಅವರು ಭದ್ರಾ ನೆರಳಿನ ಕಾರಣದಿಂದ ಈ ಬಾರಿ ಕಾಶಿಯಲ್ಲಿ ಮಾರ್ಚ್ 7 ರಂದು ಹಾಗೂ ದೇಶದ ಇತರ ಭಾಗಗಳಲ್ಲಿ ಮಾರ್ಚ್ 8 ರಂದು ಹೋಳಿ ಹಬ್ಬವನ್ನು ಆಚರಿಸಲಾಗುವುದು ಎಂದು ಸ್ಪಷ್ಟವಾಗಿ ಹೇಳುತ್ತಾರೆ.

ಜ್ಯೋತಿಷಿಯ ಹೇಳೋದು ಏನು?: ಹೋಳಿಯ ಕಾಮ ದಹನದ ನಂತರ ಕಾಶಿಯಲ್ಲಿ ಷಷ್ಠಿ ದೇವಿಯನ್ನು ಪೂಜಿಸಲಾಗುತ್ತದೆ. ಅದೇ ದಿನವೇ ಹೋಳಿ ಆಚರಿಸುವ ಸಂಪ್ರದಾಯವಿದೆ. ಇದೇ ಮಾರ್ಚ್ 6ರ ರಾತ್ರಿ ಹೋಳಿಕಾ ದಹನ ಮುಗಿದ ನಂತರ ಹೋಳಿ ಹಬ್ಬವನ್ನು ಆಚರಿಸಲಾಗುತ್ತದೆ. ಮಾ.7ರಂದು ದೇವಿಯ ದರ್ಶನ ಪಡೆದು ಆಚರಿಸಲಾಗುವುದು. ಮಾರ್ಚ್ 8ರಂದು ಬೇರೆ ಕಡೆಗಳಲ್ಲಿ ಹೋಳಿ ಆಚರಿಸುವುದು ಸೂಕ್ತ ಎಂದಾದರೆ, ಎರಡನೇ ದಿನ ಹೋಳಿ ಆಚರಿಸುವುದು ಸಂಪ್ರದಾಯ ಎನ್ನುತ್ತಾರೆ ಜ್ಯೋತಿಷಾಚಾರ್ಯ ಪಂಡಿತ್ ದವಾಗ್ಯ ಕೃಷ್ಣ.

ಸಂಪ್ರದಾಯದ ಪ್ರಕಾರ ಹೋಳಿ ಹಬ್ಬ: ಹೋಳಿ ಕಾಮ ದಹನ, ಹುಣ್ಣಿಮೆಯಾಗಲಿ ಅಥವಾ ಪ್ರತಿಪದವಾಗಲಿ. ಇಂತಹ ಪರಿಸ್ಥಿತಿಯಲ್ಲಿ ಕಾಶಿಯ ಹೋಳಿಯನ್ನು ಮಾರ್ಚ್ 7 ರಂದು ಮಾತ್ರ ಆಚರಿಸಲಾಗುತ್ತದೆ. ವರ್ಣರಂಜಿತ ಹೋಳಿ ಹಬ್ಬವನ್ನು ಈ ಬಾರಿ ಮಾರ್ಚ್ 7 ರಂದು ವಾರಾಣಸಿಯಲ್ಲಿ ಮತ್ತು ಮಾರ್ಚ್ 8 ರಂದು ದೇಶಾದ್ಯಂತ ಆಚರಿಸಲಾಗುತ್ತದೆ. ವಾರಾಣಸಿಯಲ್ಲಿ ಹೋಳಿ ಕಾಮ ದಹನದ ಎರಡನೇ ದಿನದಂದು ಚೌಸ್ತಿ ದೇವಿಯ ಸಂಪ್ರದಾಯದ ಪ್ರಕಾರ ಹೋಳಿ ಹಬ್ಬವನ್ನು ಮಾರ್ಚ್​ 7ರಂದು ಆಚರಿಸಲಾಗುತ್ತದೆ. ಆದರೆ, ಉದಯ ತಿಥಿಯಂದು ಚೈತ್ರ ಕೃಷ್ಣ ಪ್ರತಿಪದದ ಪ್ರಾಮುಖ್ಯತೆಯಿಂದಾಗಿ ಮಾರ್ಚ್ 8 ರಂದು ಆಚರಿಸಲಾಗುತ್ತದೆ. ಕಾಶಿ ಹೊರತುಪಡಿಸಿ ನಾಡಿನಾದ್ಯಂತ ಹೋಳಿ ಹಬ್ಬವನ್ನು ಆಚರಿಸಲಾಗುವುದು. ಮಾರ್ಚ್ 6ರ ಸಂಜೆ 4.18ಕ್ಕೆ ಫಾಲ್ಗುಣ ಶುಕ್ಲ ಪೂರ್ಣಿಮೆ ಪ್ರಾರಂಭವಾಗಿ ಮಾರ್ಚ್ 7ರ ಸಂಜೆ 5.30ಕ್ಕೆ ಮುಕ್ತಾಯಗೊಳ್ಳಲಿದೆ ಎಂದು ಆಚಾರ್ಯ ದವಾಗ್ಯ ಕೃಷ್ಣ ಶಾಸ್ತ್ರಿ ತಿಳಿಸಿದರು.

ಶುಭ ಮುಹೂರ್ತ: ಹೋಳಿ ಕಾಮ ದಹನವನ್ನು ಮಾರ್ಚ್ 6 ರಂದು ಪ್ರದೋಷ ಕಾಲ ವ್ಯಾಪಿನಿ ಪೂರ್ಣಿಮಾದಲ್ಲಿ ಮಾಡಲಾಗುತ್ತದೆ. ಹುಣ್ಣಿಮೆಯು ಭದ್ರಾ ಆಗಿರುವುದರಿಂದ ಹೋಳಿ ಕಾಮ ದಹನದ ಶುಭ ಮುಹೂರ್ತವು ಭದ್ರಾ ರಾತ್ರಿ 12.23ರಿಂದ 1.35ರವರೆಗೆ ಲಭ್ಯವಿರುತ್ತದೆ. ಮಾರ್ಚ್ 7 ರಂದು ಹುಣ್ಣಿಮೆ ಮುಗಿದ ನಂತರ ಸಂಜೆ ಚೈತ್ರ ಕೃಷ್ಣ ಪ್ರತಿಪದವು ಪ್ರಾರಂಭವಾಗುತ್ತಿದೆ. ಆದರೆ, ಉದಯ ತಿಥಿಯಂದು ಹೋಳಿ ಆಚರಿಸಲು ಶಾಸ್ತ್ರೀಯ ತೊಡಕು ಇದೆ. ಇಂತಹ ಪರಿಸ್ಥಿತಿಯಲ್ಲಿ ಮಾರ್ಚ್ 8 ರಂದು ಹೋಳಿ ಆಚರಿಸಲಾಗುತ್ತದೆ.

ಆಚಾರ್ಯ ದವಾಗ್ಯ ಕೃಷ್ಣ ಪ್ರಕಾರ, ಮಾರ್ಚ್ 6 ರಂದು ಭದ್ರ ನಿಶಿತದ ನಂತರ ಹೋಳಿಯ ದಹನ ಕೊನೆಗೊಂಡರೆ, ಭದ್ರ ಮುಖವನ್ನು ಹೊರತುಪಡಿಸಿ ದಹನ ಕಾರ್ಯಕ್ರಮವನ್ನು ಮೊದಲ ದಿನ ಮಾಡಬೇಕು. ಇದರಿಂದ ಹೋಳಿ ಕಾಮ ದಹನ ಈ ವರ್ಷ ಮಾರ್ಚ್ 6ರಂದು ನಡೆಯಲಿದೆ. ಹೋಳಿ ದಹನದ ಪ್ರಾಮುಖ್ಯತೆ ಹೋಳಿ ಹಬ್ಬದಂದು, ಫಾಲ್ಗುಣ ಹುಣ್ಣಿಮೆಯಂದು, ಮರ ಮತ್ತು ಹಸುವಿನ ಸಗಣಿಯಿಂದ ಮಾಡಿದ ಒಲೆ ಹಚ್ಚಿ ಹೋಳಿಗೆ ತಯಾರಿಸುವುದು ವಾಡಿಕೆ. ಹಬ್ಬದಲ್ಲಿ ಜನರು ಪರಸ್ಪರ ಗುಲಾಲ್ ಹಚ್ಚಿ ಸಂಭ್ರಮದ ಹೋಳಿ ಆಚರಿಸುತ್ತಾರೆ.

ಇದನ್ನೂ ಓದಿ: ಆಭರಣ ಪ್ರಿಯರಿಗೆ ಕಹಿ-ಸಿಹಿ ವಿಚಾರ.. ಬಂಗಾರದ ಬೆಲೆ ಏರಿಕೆ, ಬೆಳ್ಳಿ ದರದಲ್ಲಿ ಭಾರಿ ಇಳಿಕೆ

Last Updated :Mar 1, 2023, 6:12 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.