ETV Bharat / sukhibhava

ಅಮೆರಿಕದಲ್ಲಿ ಜೆಎನ್​.1 ಪ್ರಾಬಲ್ಯ : ಶೇ.50ರಷ್ಟು ಕೋವಿಡ್​ ಪ್ರಕರಣ ಏರಿಕೆ

author img

By ETV Bharat Karnataka Team

Published : Dec 29, 2023, 10:48 AM IST

ಕಳೆದ ಎರಡು ವಾರದಿಂದ ಕೋವಿಡ್ ಸೋಂಕು ವೇಗವಾಗಿ ಹರಡುತ್ತಿದ್ದು, 15-29ರಷ್ಟಿದ್ದ ಪ್ರಮಾಣ 39ರಿಂದ 50ಕ್ಕೆ ಏರಿಕೆಯಾಗಿದೆ.

JN1 variant increasing rapidly in us
ಅಮೆರಿಕದಲ್ಲಿ ಜೆಎನ್​.1 ಪ್ರಾಬಲ್ಯ : ಶೇ.50ರಷ್ಟು ಕೋವಿಡ್​ ಪ್ರಕರಣ ಏರಿಕೆ

ನ್ಯೂಯಾರ್ಕ್​​: ವೇಗವಾಗಿ ಹರಡುತ್ತಿರುವ ಓಮ್ರಿಕಾನ್​ನ ಉಪತಳಿ ಜೆಎನ್​.1 ಇದೀಗ ಅಮೆರಿಕದಲ್ಲಿ ಪ್ರಬಲಗೊಂಡಿದ್ದು, ಶೇ. 50ರಷ್ಟು ಮಂದಿ ಸೋಂಕಿಗೆ ಒಳಗಾಗಿದ್ದಾರೆ ಎಂದು ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರ ತಿಳಿಸಿದೆ.

ಈ ತಳಿಯು ವೇಗವಾಗಿ ಹರಡುವ ಹಿನ್ನೆಲೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ ವೇರಿಯೆಂಟ್​ ಆಫ್​ ಇಂಟ್ರೆಸ್ಟ್​​ ಎಂದು ವರ್ಗೀಕರಿಸಿದೆ. ಪ್ರಸ್ತುತ 41 ದೇಶದಲ್ಲಿ ಈ ಸೋಂಕಿದ್ದು, ಮೊದಲ ಬಾರಿಗೆ ಆಗಸ್ಟ್​​ನಲ್ಲಿ ಲಕ್ಸಂಬರ್ಗ್​​ನಲ್ಲಿ ಕಾಣಿಸಿಕೊಂಡಿತ್ತು. ಕಳೆದ ಎರಡು ವಾರದಿಂದ ಈ ಸೋಂಕು ವೇಗವಾಗಿ ಹರಡುತ್ತಿದ್ದು, 15-29ರಷ್ಟಿದ್ದ ಪ್ರಮಾಣ 39-50ರಷ್ಟಕ್ಕೆ ಏರಿಕೆಯಾಗಿದೆ. ಜೆಎನ್​.1 ಸೋಂಕಿನ ಏರಿಕೆಯಲ್ಲಿ ಹೆಚ್ಚಳಕ್ಕೆ ಪ್ರಯಾಣಿಕರು ಹಾಗೂ ತ್ಯಾಜ್ಯ ನೀರು ಕಾರಣವಾಗಿದೆ. ಹೆಚ್ಚಿನ ಪ್ರದೇಶದಲ್ಲಿ ಜೆಎನ್​.1 ಸೋಂಕು ಹರಡುತ್ತಿದೆ.

ಜೆಎನ್​​.1 ಸೋಂಕು ಬಿಎ.2.86 ರೀತಿಯಿದ್ದು, ಹೆಚ್ಚುವರಿ ರೂಪಾಂತರವನ್ನು ಹೊಂದಿದೆ. ಇದು ಪ್ರತಿರಕ್ಷಣಾ ವ್ಯವಸ್ಥೆಯನ್ನು ಕುಗ್ಗಿಸುವ ಗುಣಲಕ್ಷಣ ಹೊಂದಿದೆ. ಸೋಂಕು ಹರಡುವಿಕೆಯಲ್ಲಿ ಜೆಎನ್​.1 ಪಾಲು ಹೆಚ್ಚಿದೆ. ಅಮೆರಿಕದಲ್ಲಿ ಸದ್ಯ ವೈರಸ್​ ವ್ಯಾಪಕವಾಗಿ ಹರಡುತ್ತಿದೆ. ಸಾರ್ಸ್​ ಕೋವ್​ 2 ರೂಪಾಂತರದಲ್ಲಿ ಜೆಎನ್​.1 ರೂಪಾಂತರವೂ ಶೇ. 39ರಿಂದ 50ರ ಪ್ರಮಾಣವನ್ನು ಹೊಂದಿದೆ ಎಂದು ಸಿಡಿಸಿ ಇತ್ತೀಚಿನ ವರದಿಯಲ್ಲಿ ತಿಳಿಸಿದೆ.

ಎರಡು ವಾರದ ಹಿಂದೆ ಸೋಂಕಿನ ಪ್ರಮಾಣ ಶೇ 15 ರಿಂದ 29ರಷ್ಟಿತ್ತು. ಜೆಎನ್​​.1 ಬೆಳವಣಿಗೆ ಮುಂದುವರೆದಿದ್ದು, ಈ ತಳಿಯು ಹೆಚ್ಚಿನ ರೂಪಾಂತರ ಹೊಂದಿದೆ. ಜೆಎನ್​.1 ಸೋಂಕಿನ ಏರಿಕೆಯಿಂದ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಹೆಚ್ಚಳವಾಗಿದೆ. ಈ ಬಗ್ಗೆ ಶೀಘ್ರವಾಗಿ ತಿಳಿದುಕೊಳ್ಳುವುದು ಮುಖ್ಯವಾಗಿದೆ. ಎಕ್ಸ್​​ಬಿಬಿ.1.5ಗೆ ನೀಡಿದ ಬೂಸ್ಟರ್​ ಡೋಸ್​ ಜೆಎನ್​.1 ವಿರುದ್ಧ ಹೋರಾಡಲಿದೆ ಎಂದು ಅಮೆರಿಕದ ಪಿಸಿಶಿಯನ್​- ವಿಜ್ಞಾನಿ ಎರಿಕ್​ ಟೊಪೊಲ್​ ತಿಳಿಸಿದರು.

ಜೆಎನ್​.1 ಜಾಗತಿಕವಾಗಿ ಪ್ರಾಬಲ್ಯದ ಹೊಂದಿರುವುದು ಸೋಂಕಿನ ಹೆಚ್ಚಳಕ್ಕೆ ಕಾರಣವಾಗಿದೆ. ಜೊತೆಗೆ ಕೆಲವು ದೇಶಗಳಲ್ಲಿ ಆಸ್ಪತ್ರೆಗೆ ದಾಖಲು ಮತ್ತು ಸಾವಿಗೆ ಕಾರಣವಾಗುತ್ತಿದೆ. ಡಬ್ಲ್ಯೂಎಚ್​ಒ ಪ್ರಕಾರ, ಹೊಸ ಕೋವಿಡ್​ 19 ಪ್ರಕರಣಗಳು ಕಳೆದೊಂದು ತಿಂಗಳಿನಿಂದ ಜಾಗತಿಕವಾಗಿ ಶೇ 52ರಷ್ಟು ಹೆಚ್ಚಳವಾಗಿದೆ. ವಿಶ್ವಸಂಸ್ಥೆ ಆರೋಗ್ಯ ಮಂಡಳಿ ಕೂಡ ಆಸ್ಪತ್ರೆಗಳಲ್ಲಿ, ಐಸಿಯುಗೆ ದಾಖಲಾಗುವವರು ಮತ್ತು ಜಾಗತಿಕ ಸಾವಿನ ಸಂಖ್ಯೆ ಹೆಚ್ಚಾಗಿದೆ ಎಂದಿದೆ.

ಈ ಜೆಎನ್​.1 ಸೋಂಕು ಭಾರತದಲ್ಲೂ ಏರಿಕೆ ಕಾಣುತ್ತಿದ್ದು, 692 ಹೊಸ ಕೋವಿಡ್​​ ಪ್ರಕರಣಗಳು ಕಂಡು ಬಂದಿದೆ. ಒಟ್ಟಾರೆ ಸಕ್ರಿಯ ಕೋವಿಡ್​ ಪ್ರಕರಣಗಳು 4,097ರಷ್ಟಿದೆ ಎಂದು ಮಂಗಳವಾರ ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ. (ಐಎಎನ್​ಎಸ್​)

ಇದನ್ನೂ ಓದಿ: ಜೀವಿಗಳ ಪ್ರತಿರಕ್ಷಣಾ ವ್ಯವಸ್ಥೆ ತಡೆ ಹಿಡಿಯುವ ಕೋವಿಡ್​ ಪ್ರೋಟಿನ್​ ಪತ್ತೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.