ETV Bharat / sukhibhava

Hepatitis C: ವೇಗವಾಗಿ ಹರಡುತ್ತಿದೆ ಹೆಪೆಟೈಟಿಸ್​ ಸಿ ಸೋಂಕು: ನಿರ್ಲಕ್ಷಿಸಿದರೆ ಜೀವಕ್ಕೆ ಕುತ್ತು

author img

By

Published : Aug 16, 2023, 11:29 AM IST

ಹೆಪೆಟೈಟಿಸ್​ ಸಿ ರೋಗವು ಯಕೃತ್​ ಹಾನಿಗೆ ಕಾರಣವಾಗುತ್ತದೆ. ಈ ಹಿನ್ನಲೆ ರೋಗವನ್ನು ಆರಂಭಿಕ ಹಂತದಲ್ಲೇ ಪತ್ತೆ ಮಾಡುವುದು ಅತ್ಯವಶ್ಯಕ.

hepatitis-c-infection-is-spreading-rapidly-it-leads-to-liver-diseases
hepatitis-c-infection-is-spreading-rapidly-it-leads-to-liver-diseases

ಹೈದರಾಬಾದ್​: ನಗರದಲ್ಲಿ ಹೆಪಟೈಟಿಸ್​ ಸಿ ನೀರಿನಂತೆ ವೇಗವಾಗಿ ಹರಡುತ್ತಿದ್ದು, ಇದು ಯಕೃತ್​ ಸಮಸ್ಯೆಗೆ ಕಾರಣವಾಗುವ ಹಿನ್ನೆಲೆ ಜನರು ಮುನ್ನೆಚ್ಚರಿಕೆವಹಿಸುವುದರ ಜೊತೆಗೆ ಜನರು ಆರೋಗ್ಯದ ಬಗ್ಗೆ ಗಮನಹರಿಸಬೇಕಿದೆ. ತೆಲಂಗಾಣದಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಗಾದ ಪ್ರತಿ 235 ಮಂದಿಯಲ್ಲಿ ಈ ಸೋಂಕು ಕಂಡು ಬಂದಿದೆ.

2022-23ರಲ್ಲಿ ಕೇಂದ್ರ ಸರ್ಕಾರವೂ ಸಂಸತ್ತಿನಲ್ಲಿ ಈ ಹೆಪಟೈಟಿಸ್​ ಸಿ ಕುರಿತು ವರದಿ ಮಂಡಿಸಿತು. ವೈದ್ಯಕೀಯ ಮೂಲಗಳು ಹೇಳುವಂತೆ, ಈ ಅಂಕಿ - ಅಂಶಗಳು ರೋಗದ ತೀವ್ರತೆಯನ್ನು ತಿಳಿಸುತ್ತದೆ. ಈ ರೋಗವೂ ಸೋಂಕಿತ ರಕ್ತದಿಂದ ಹೆಚ್ಚಾಗಿ ಹರಡುತ್ತದೆ. ರಕ್ತದ ವರ್ಗಾವಣೆ ಮಾಡುವಾಗ ಸೂಕ್ತ ಪರೀಕ್ಷೆ ಮಾಡದೇ ಇರುವುದು ಅಪಾಯಕಾರಿಯಾಗಿದೆ. ಸುರಕ್ಷಿತ ಚುಚ್ಚುಮದ್ದಿನ ಪ್ರಕ್ರಿಯೆ ಕೊರತೆ ಮತ್ತು ಇತರರಿಗೆ ಬಳಕೆ ಮಾಡಿದ ಸೂಜಿಗಳ ಬಳಕೆಯಿಂದಾಗಿ ಇದು ಹರಡುವ ಸಾಧ್ಯತೆ ಇದೆ. ಜೊತೆಗೆ ಮದ್ಯಪಾನ ಚಟ ಮತ್ತು ಸ್ಥೂಲಕಾಯವೂ ಈ ರೋಗದ ತೀವ್ರತೆಯನ್ನು ಹೆಚ್ಚಿಸುತ್ತದೆ.

ರೋಗದ ತೀವ್ರತೆ ಹೆಚ್ಚಿದಂತೆ, ರೋಗದ ಲಕ್ಷಣಗಳಾದ ಜ್ವರ, ಆಯಾಸ, ರುಚಿಯ ನಷ್ಟ, ಜಾಂಡೀಸ್​ ಲಕ್ಷಣ, ಕೀಲು ನೋವು, ಆತಂಕ, ಹಸಿವಿನ ನಷ್ಟ, ಹೊಟ್ಟೆ ನೋವು ಕಂಡು ಬರುತ್ತದೆ. ಇವು ಪತ್ತೆಯಾಗದಿದ್ದರೂ ಆರಂಭಿಕ ಹಂತದಲ್ಲೇ ಈ ರೋಗದ ಚಿಕಿತ್ಸೆ ನಡೆಸಬೇಕು. ಇಲ್ಲದೇ ಹೋದಲ್ಲಿ ಪರಿಸ್ಥಿತಿ ಗಂಭೀರವಾಗಿ ಅದು ಮಾರಾಣಾಂತಿಕವಾಗುತ್ತದೆ. ಆದರೆ, ಈ ರೋಗದ ಕುರಿತು ಆರಂಭಿಕ ಹಂತದಲ್ಲಿ ಯಾವುದೇ ಲಕ್ಷಣ ಕಂಡು ಬರುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ, ವೈದ್ಯಕೀಯ ತಜ್ಞರ ಸಲಹೆ ಪಡೆಯುವ ಮೂಲಕ ಮುನ್ನೆಚ್ಚರಿಕೆವಹಿಸಬೇಕು. ಅದರಲ್ಲೂ ರಕ್ತದ ವರ್ಗಾವಣೆ ಮತ್ತು ಇನ್ನಿತರ ರೋಗ ಪತ್ತೆ ಪರೀಕ್ಷೆಗೆ ಒಳಗಾಗುವ ಸಂದರ್ಭದಲ್ಲಿ ಎಚ್ಚರಿಕೆ ತುಂಬಾ ಅಗತ್ಯವಿದೆ.

ಹೀಗಿದೆ ಐಸಿಎಂಆರ್​ ಅಂಕಿ ಅಂಶ: ಐಸಿಎಂಆರ್​​ ತಿಳಿಸಿದಂತೆ, ಈ ಸೋಂಕಿತರಲ್ಲಿ ದೇಶದಲ್ಲಿ ಅಧಿಕ ಮಂದಿ ಲಿವರ್​ ಸಿರೋಸಿಸ್​​ಗೆ ಒಳಗಾಗಿ ಸಾವನ್ನಪ್ಪಿದವರ ಸಂಖ್ಯೆ ಹೆಚ್ಚಿದೆ. ಲಿವರ್​ ಸಿರೋಸಿಸ್​ನ ಸಮಯದಲ್ಲಿ ಯಕೃತ್​ ಸಂಪೂರ್ಣವಾಗಿ ಹಾನಿಗೊಂಡಿರುತ್ತದೆ. ಐಸಿಎಂಆರ್​ ಪ್ರಕಾರ, 2017ರಲ್ಲಿ ಲಿವರ್​ ಸಿರೋಸಿಸ್​​ ಮತ್ತು ಲಿವರ್​ ಸೋಂಕಿನಿಂದಾಗಿ ಅಂದಾಜು 2,20,000 ಜನರು ಸಾವನ್ನಪ್ಪಿದ್ದಾರೆ. ಹೆಪೆಟೈಟಿಸ್​ ಸಿ ಅನ್ನು ನಿರ್ಲಕ್ಷಿಸುವುದು, ಯಕೃತ್​ ಸಮಸ್ಯೆ ಮತ್ತು ಲಿವರ್​​ ಸಿರೋಸಿಸ್​ ಬೆಳವಣಿಗೆ ಅಪಾಯವನ್ನು ಹೆಚ್ಚಿಸುತ್ತದೆ. 2020 ಏಪ್ರಿಲ್​ನಿಂದ 2023 ಮಾರ್ಚ್​ವರೆಗೆ ದೇಶದಲ್ಲಿ 5.82 ಕೋಟಿ ಜನರನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, ಇದರಲ್ಲಿ 1.74 ಲಕ್ಷ ಮಂದಿ ಹೆಪಟೈಟಿಸ್​ ಸಿ ಯಿಂದ ಬಳಲುತ್ತಿರುವುದು ಪತ್ತೆಯಾಗಿದೆ. ಹೆಪೆಟೈಟಿಸ್​ ಬಿ ಗಿಂತ ಹೆಚ್ಚಾಗಿ ರಾಜ್ಯದಲ್ಲಿ ಹೆಪಟೈಟಿಸ್​ ಸಿ ಪತ್ತೆಯಾಗಿದೆ. ವೈದ್ಯಕೀಯ ಪರೀಕ್ಷೆಗೆ ಒಳಗಾದವರಲ್ಲಿ ಹೆಪೆಟೈಟಿಸ್​ ಬಿ 0.05 ರಷ್ಟು ಪತ್ತೆಯಾದರೆ ಹೆಪೆಟೈಟಿಸ್​ ಸ 0.4ರಷ್ಟು ಪತ್ತೆಯಾಗಿದೆ.

ರಾಜ್ಯದಲ್ಲಿ ಕಳೆದ ಮೂರು ವರ್ಷದಲ್ಲಿ ಪತ್ತೆಯಾದ ಹೆಪೆಟೈಟಿಸ್​ ಬಿ ಪ್ರಕರಣಗಳು

ವರ್ಷ ವೈದ್ಯಕೀಯ ಪರೀಕ್ಷೆ ಪತ್ತೆಯಾದ ರೋಗಿಗಳ ಸಂಖ್ಯೆ

2020-21 29.133 111

2021-22 4,88,550 347

2022-23 8,84218 432

ಹೆಪೆಟೈಟಿಸ್​ ಸಿ ಪ್ರಕರಣ

ವರ್ಷ ವೈದ್ಯಕೀಯ ಪರೀಕ್ಷೆ ಪತ್ತೆಯಾದ ರೋಗಿಗಳ ಸಂಖ್ಯೆ

2020-21 6,346 24

2021-22 11,363 130

2022-23 1,64844 710

ಇದನ್ನೂ ಓದಿ: ಲಿವರ್​ ಸಿರೋಸಿ ಸ್​: ಕೊನೆಯ ಹಂತದ ಯಕೃತ್​ ಸಮಸ್ಯೆಗೆ ಕಾರಣವೇನು?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.