ETV Bharat / sukhibhava

ಹೃದಯಕ್ಕೆ ಹಾನಿ; ಮಕ್ಕಳ ಮೊಬೈಲ್, ಟಿವಿ​​​​​ ವೀಕ್ಷಣೆಗೆ ಬೇಕಿದೆ ಕಡಿವಾಣ.. ಇಲ್ಲದಿದ್ದರೆ ಆಗುವ ಅವಾಂತರ ಹೇಳೋಕಾಗಲ್ಲ!

author img

By ETV Bharat Karnataka Team

Published : Oct 25, 2023, 10:45 AM IST

Updated : Oct 25, 2023, 12:39 PM IST

ಮಕ್ಕಳು ಅಧಿಕ ಕಾಲ ಸ್ಕ್ರೀನ್​ ಟೈಂನಲ್ಲಿ ಕಳೆಯುವುದರಿಂದ ಆಗುವ ಹಾನಿ ಬಗ್ಗೆ ಈಗಾಗಲೇ ಅನೇಕ ಸಂಶೋಧನೆಗಳು ಎಚ್ಚರಿಸಿವೆ.

Children's screen time needs to be cut down for many reason
Children's screen time needs to be cut down for many reason

ಬಾರ್ಸಿಲೋನಾ​: ಬಾಲ್ಯದಲ್ಲಿ ದೀರ್ಘಕಾಲ ಮೊಬೈಲ್​ ಅಥವಾ ಲಾಪ್​ಟಾಪ್​ ಸೇರಿದಂತೆ ಸ್ಕ್ರೀನ್​ಗಳಲ್ಲಿ ಮಕ್ಕಳ ಕಳೆಯುತ್ತಿರುವ ಸಮಯದ ಕುರಿತು ಇತ್ತೀಚಿನ ವರ್ಷಗಳಲ್ಲಿ ಅಧಿಕ ಸಂಶೋಧನೆಗಳು ನಡೆಯುತ್ತಿವೆ. ಈ ಅಧ್ಯಯನಗಳಲ್ಲಿ ಅಧಿಕ ಕಾಲ ಸ್ಕ್ರೀನ್​ ಟೈಂ ವೀಕ್ಷಣೆ( ಮೊಬೈಲ್​) ಮಗುವಿನ ನರದ ಅಭಿವೃದ್ಧಿ ಮತ್ತು ಸಾಮಾಜೀಕರಣದ ಮೇಲೆ ಪರಿಣಾಮ ಬೀರುತ್ತದೆ ಎಂದು ಸೂಚಿಸಿದೆ.

ಮಕ್ಕಳು ಅಧಿಕ ಕಾಲ ಸ್ಕ್ರೀನ್​ನಲ್ಲಿ ಕಳೆಯುವುದರಿಂದ ತಮ್ಮ ಸುತ್ತಮುತ್ತಲಿನ ಪರಿಸರದೊಂದಿಗೆ ಸಂಬಂಧವನ್ನು ಕಡಿದುಕೊಳ್ಳುತ್ತಾರೆ. ಈ ಚಟವೂ ಅನೇಕ ಬಾರಿ ಮಾನಸಿಕ ಆರೋಗ್ಯ ವೃತ್ತಿಪರರ ಮೇಲ್ವಿಚಾರಣೆ ನಡೆಸುವಂತೆ ಆಗುತ್ತದೆ. ಜೊತೆಗೆ ಹೆಚ್ಚಿನ ಮೊಬೈಲ್​ ಬಳಕೆ ನರ ಅರಿವಿನ (ನ್ಯೂರೋಕಾಂಗ್ನಿಟಿವ್​) ಕಲಿಕೆ ಅಸ್ವಸ್ಥತೆಯನ್ನು ಬಾಲ್ಯದ ಆರಂಭದ ಅವಧಿಯಲ್ಲಿ ಉಂಟು ಮಾಡುತ್ತದೆ. ಇದಕ್ಕಿಂತ ಹೆಚ್ಚಾಗಿ ಮಕ್ಕಳು ಮತ್ತು ಪ್ರೌಢರು ಅಧಿಕ ಕಾಲ ಟಿವಿ, ವಿಡಿಯೋ ಗೇಮ್​, ಮೊಬೈಲ್​ ಫೋನ್​ ಮತ್ತು ಟ್ಯಾಬ್ಲೆಟ್​​ಗಳನ್ನು ಬಳಸುವುದರಿಂದ ಅವರಲ್ಲಿ ಜಢ ಜೀವನಶೈಲಿ ಉಂಟಾಗುತ್ತದೆ.

ಮಕ್ಕಳು ಸ್ಕ್ರೀ ಟೈಂನಲ್ಲಿ ಹೆಚ್ಚಿನ ಕಾಲ ಕಳೆಯುವುದರಿಂದ ಅವರಲ್ಲಿ ಜಢ ಜೀವನಶೈಲಿ ಅಭಿವೃದ್ಧಿ ಆಗುತ್ತದೆ ಎಂಬುದು ಈಗಾಗಲೇ ಸಾಬೀತಾಗಿದೆ. ಇದೀಗ, ಇದಕ್ಕೆ ಹೊಸ ಆಯಾಮ ಸಿಕ್ಕಿದ್ದು, ಮಕ್ಕಳು ದೂರದರ್ಶನ, ವಿಡಿಯೋ ಗೇಮ್‌ಗಳು ಮತ್ತು ಮೊಬೈಲ್ ಫೋನ್‌ಗಳ ಮುಂದೆ ಕಳೆಯುವ ಸಮಯವನ್ನು ಸೀಮಿತಗೊಳಿಸುವುದಕ್ಕೆ ಕಾರಣ ಸಿಕ್ಕಿದೆ.

ಕುಯೋಪಿಯೊದಲ್ಲಿನ ಈಸ್ಟರ್ನ್ ಫಿನ್‌ಲ್ಯಾಂಡ್ ವಿಶ್ವವಿದ್ಯಾಲಯದಲ್ಲಿ ಆಂಡ್ರ್ಯೂ ಅಗ್ಬಾಜೆ ನೇತೃತ್ವದಲ್ಲಿ ನಡೆದ ಸಂಶೋಧನೆಯಲ್ಲಿ, ಬಾಲ್ಯದಲ್ಲಿ ಮಕ್ಕಳಲ್ಲಿ ಅಭಿವೃದ್ಧಿಯಾಗುವ ಜಢ ಜೀವನಶೈಲಿಯು ಅವರಲ್ಲಿ ಹೃದಯದ ಹಾನಿ ಅಪಾಯವನ್ನು ಹೆಚ್ಚಿಸುತ್ತದೆ ಎಂದಿದ್ದಾರೆ. ಬಾಲ್ಯದಲ್ಲಿನ ಹೆಚ್ಚಿನ ಚಟುವಟಿಕೆಯಿಂದ ಕೂಡಿರದಿರುವಿಕೆಯು ನಂತರದ ಜೀವನದಲ್ಲಿ ಅವರ ರಕ್ತದೊತ್ತಡವು ಸಾಮಾನ್ಯವಾಗಿದ್ದರೂ ಅವರಲ್ಲಿ ಹೃದಯಾಘಾತ ಮತ್ತು ಪಾರ್ಶ್ವವಾಯುವಿನಂತಹ ಅಪಾಯಕ್ಕೆ ಕಾರಣವಾಗಬಹುದು.

ಹೃದಯದ ತೂಕ ಹೆಚ್ಚಿಸುವ ಸ್ಕ್ರೀನ್​ ಟೈಂ: ಈ ಅಧ್ಯಯನಕ್ಕಾಗಿ 1990-91ರಲ್ಲಿ ಜನಿಸಿದ 14,500 ವಯಸ್ಕರ ಜೀವನ ಶೈಲಿಯಲ್ಲಿ ಟ್ರ್ಯಾಕ್​ ಮಾಡಿ ಜಢ ಜೀವನಶೈಲಿ ಹೃದಯದ ಮೇಲೆ ಬೀರುವ ಪರಿಣಾಮವನ್ನು ವಿಶ್ಲೇಷಿಸಲಾಗಿದೆ. ಅಧ್ಯಯನದಲ್ಲಿ ಶೇ 55ರಷ್ಟು ಬಾಲಕಿಯರಾದರೆ, ಶೇ 45ರಷ್ಟು ಬಾಲಕರಿದ್ದಾರೆ. 11ನೇ ವಯಸ್ಸಿನಲ್ಲಿ ಸ್ಮಾರ್ಟ್​ ವಾಚ್​ ಧರಿಸುವ ಮೂಲಕ 7 ದಿನಗಳ ಕಾಲ ಅವರ ಚಟುವಟಿಕೆಯನ್ನು ನಿರ್ವಹಣೆ ಮಾಡಲಾಯಿತು.

15ನೇ ವಯಸ್ಸು ಮತ್ತು 24ನೇ ವಯಸ್ಸಿಗೆ ಮತ್ತೊಮ್ಮೆ ಅವರನ್ನು ಪರೀಕ್ಷಿಸಲಾಯಿತು. ಈ ವೇಳೆ, ಅವರ ಎಕೋಕಾರ್ಡಿಯೋಗ್ರಾಫಕಲ್​ ವಿಶ್ಲೇಷಣೆ ನಡೆಸಲಾಯಿತು. ಎತ್ತರ, ಲಿಂಗ, ರಕ್ತದೊತ್ತಡ, ದೇಹದ ಕೊಬ್ಬು, ತಂಬಾಕು ಬಳಕೆ, ದೈಹಿಕ ಚಟುವಟಿಕೆ ಮತ್ತು ಸಾಮಾಜಿಕ ಆರ್ಥಿಕ ಸ್ಥಿತಿಗೆ ಸರಿಹೊಂದಿಸಲಾಯಿತು.

ಅಧ್ಯಯನದ ಫಲಿತಾಂಶದಲ್ಲಿ ಸ್ಕ್ರೀನ್​ ಮುಂದೆ ಅವರು ಜಢವಾಗಿ ಕಳೆದಿದ್ದಾರೆ. ಅತ್ಯಂತ ಗಂಭೀರವಾಗಿ, ಎಕೋಕಾರ್ಡಿಯೋಗ್ರಫಿಯು ಯುವ ಜನರಲ್ಲಿ ಹೃದಯದ ತೂಕದಲ್ಲಿ ಹೆಚ್ಚಳವನ್ನು ದಾಖಲಿಸಿದೆ, ಇದು ಜಡವಾಗಿ ಕಳೆದ ಸಮಯಕ್ಕೆ ನೇರವಾಗಿ ಸಂಬಂಧಿಸಿದೆ ಎಂದು ತೋರಿಸಿದೆ. ಅವರು ವಯಸ್ಕ ಅವಧಿ ತಲುಪಿದಾಗ ಅವರಲ್ಲಿ ಹೃದಯಾಘಾತ ಮತ್ತು ಪಾರ್ಶ್ವವಾಯು ಹೆಚ್ಚಿಸಿದೆ ಎಂದು ತೋರಿಸಿದೆ. (ಪಿಟಿಐ)

ಇದನ್ನೂ ಓದಿ: ಮಕ್ಕಳಲ್ಲಿ 3 ದಿನ ಇರುತ್ತೆ ಒಮಿಕ್ರಾನ್ ಕೋವಿಡ್​-19 ಸೋಂಕು: ಸಂಶೋಧನಾ ವರದಿ

Last Updated : Oct 25, 2023, 12:39 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.