ETV Bharat / sukhibhava

Air pollution: ಭಾರತೀಯರ ಜೀವಿತಾವಧಿಯನ್ನು 5 ವರ್ಷ ಕಡಿಮೆ ಮಾಡಿದೆ ವಾಯುಮಾಲಿನ್ಯ; ಅಧ್ಯಯನ

author img

By ETV Bharat Karnataka Team

Published : Aug 30, 2023, 4:12 PM IST

ಭಾರತೀಯರು ಹೆಚ್ಚಿನ ಸಂಖ್ಯೆಯಲ್ಲಿ ವಾಯುಮಾಲಿನ್ಯದ ಪರಿಣಾಮಕ್ಕೆ ಒಳಗಾಗಿದ್ದು, ಅವರ ಜೀವಿತಾವಧಿಯನ್ನು ಕಡಿತ ಮಾಡಿದೆ.

Air pollution reduces life expectancy of Indians by 5 years
Air pollution reduces life expectancy of Indians by 5 years

ನವದೆಹಲಿ: ಭಾರತೀಯರ ಜೀವಿತಾವಧಿಯನ್ನು ವಾಯು ಮಾಲಿನ್ಯ 5 ವರ್ಷ 3 ತಿಂಗಳು ಕಡಿಮೆ ಮಾಡಿದೆ ಎಂದು ಶಿಕಾಗೋ ಯುನಿವರ್ಸಿಟಿಯ ಎನರ್ಜಿ ಪಾಲಿಸಿ ಇನ್ಸ್​ಟಿಟ್ಯೂಟ್​ ವರದಿ ಮಾಡಿದೆ. ಅದರಲ್ಲೂ ಭಾರತದ ಕೆಲವು ಪ್ರದೇಶದಲ್ಲಿ ಈ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದೆ. ದೆಹಲಿಯಲ್ಲಿ ವಾಸಿಸುವ ಜನರ ಜೀವಿತಾವಧಿಯನ್ನು ಇದು 11.9ರಷ್ಟು ತಗ್ಗಿಸಿದೆ ಎಂದು ತಿಳಿಸಿರುವ ಸಂಶೋಧನೆ, ಇದಕ್ಕೆ 2023ರ ವಾಯು ಗುಣಮಟ್ಟ ಜೀವನ ಸೂಚ್ಯಂಕದ ವರದಿಯನ್ನು ಪ್ರತಿಪಾದಿಸಿದೆ.

ವಿಶ್ವದಲ್ಲೇ ಹೆಚ್ಚು ಮಾಲಿನ್ಯ ಹೊಂದಿರುವ ನಗರದಲ್ಲಿ ಭಾರತ ಎರಡನೇ ದೇಶವಾಗಿದೆ. ಗಾಳಿಯಲ್ಲಿನ ಮಾಲಿನ್ಯ ಕಣ (ಪಿಎಂ2.5) ಆಗಿದೆ. ಇದು ವಿಶ್ವ ಆರೋಗ್ಯ ಸಂಸ್ಥೆ ಮಾರ್ಗದರ್ಶನದ 5 µg/m3 ತಲುಪಿದ್ದು, ಭಾರತೀಯರ ಜೀವಿತಾವಧಿಯನ್ನು 5.3ರಷ್ಟು ಕಡಿಮೆ ಮಾಡಿದೆ ಎಂದು ವರದಿ ತಿಳಿಸಿದೆ.

ಭಾರತದಲ್ಲಿ 1.3 ಬಿಲಿಯನ್​ ಮಂದಿ ವಾಸಿಸುತ್ತಿದ್ದು, ವಿಶ್ವ ಆರೋಗ್ಯ ಸಂಸ್ಥೆಯ ಮಾರ್ಗದರ್ಶನ ಅನುಸಾರದ ಸರಾಸರಿ ಮಾಲಿನ್ಯ ಕಣದ ಮಟ್ಟವನ್ನು ಇದು ಮೀರಿಸಿದೆ. ಶೇ 67.4ರಷ್ಟು ಜನಸಂಖ್ಯೆ ರಾಷ್ಟ್ರೀಯ ವಾಯು ಗುಣಮಟ್ಟದ ಸ್ಯಾಂಡರ್ಡ್​​ 40 µg/m3 ಮೀರಿದ ಪ್ರದೇಶದಲ್ಲಿ ಜೀವಿಸುತ್ತಿದ್ದಾರೆ. ಮಾಲಿನ್ಯವೂ ಭಾರತದಲ್ಲಿ ಜನರ ಆರೋಗ್ಯದ ಮೇಲೆ ದೊಡ್ಡ ಅಪಾಯವನ್ನು ಹೊಂದಿದೆ ಎಂದು ಅಧ್ಯಯನ ತಿಳಿಸಿದೆ. ಎಕ್ಯೂಎಲ್​ಐ ಎಂಬುದು ಮಾಲಿನ್ಯದ ಸೂಚಕವಾಗಿದ್ದು, ಇದು ಜೀವಿತಾವಧಿ ಮೇಲೆ ವಾಯು ಮಾಲಿನ್ಯದ ಪರಿಣಾಮವನ್ನು ತೋರಿಸುತ್ತದೆ.

ಶಿಕಾಗೋ ಯುನಿವರ್ಸಿಟಿಯ ಮಿಲ್ಟನ್​ ಫ್ರೈರೈಡ್​ಮ್ಯಾನ್​​ ಡಿಸ್ಟಿಂಗ್ವಿಷ್ಡ್​​ ಸರ್ವೀಸ್​ ಪ್ರೊಫೆಸರ್​ ಮೈಕೆಲ್​ ಗ್ರೀನ್​ ಸ್ಟೋನ್​ ಮತ್ತು ಅವರ ತಂಡ ಎನರ್ಜಿ ಮತ್ತು ಶಿಕಾಗೋ ಯುನಿವರ್ಸಿಟಿಯ ಎನರ್ಜಿ ಪಾಲಿಸಿ ಇನ್ಸ್​​ಟಿಟ್ಯೂಟ್​ ಇದನ್ನು ಅಭಿವೃದ್ಧಿ ಪಡಿಸಿದೆ. ಎಕ್ಯೂಎಲ್​ಐ ಸಂಶೋಧನೆಯಲ್ಲಿ ವ್ಯಕ್ತಿಯೊಬ್ಬ ದೀರ್ಘಕಾಲ ಮಾಲಿನ್ಯಕ್ಕೆ ಒಳಗಾಗುವುದು ಮತ್ತು ಜೀವಿತಾವಧಿಯ ನಡುವಿನ ಸಾಂದರ್ಭಿಕ ಸಂಬಂಧವನ್ನು ಪ್ರಮಾಣಿಕರಿಸಿದೆ.

ವರದಿಯೂ ದೇಶದ ಹೆಚ್ಚು ಮಾಲಿನ್ಯ ಪ್ರದೇಶಗಳನ್ನು ವರದಿ ಮಾಡಿದೆ. ಉತ್ತರ ಬಯಲು ಪ್ರದೇಶದ ಜನರ 521.2 ಮಿಲಿಯನ್​ ನಿವಾಸಿಗಳು ಅಥವಾ ಭಾರತದ ಶೇ 38.9ರಷ್ಟು ಜನಸಂಖ್ಯೆಯ ಜೀವಿತಾವಧಿಯನ್ನು ಡಬ್ಲ್ಯೂಎಚ್​ಒ ಮಾರ್ಗದರ್ಶನ ಸಂಬಂಧ 8 ವರ್ಷ ಕಡಿಮೆ ಮಾಡಿದೆ.

ಇದಕ್ಕೆ ತತ್ವಿರುದ್ಧವಾಗಿ ಹೃದ್ರೋಗ ಸಮಸ್ಯೆಗಳು ಭಾರತೀಯ ಜೀವಿತಾವಧಿಯನ್ನು 4.5ರಷ್ಟು ಕಡಿಮೆ ಮಾಡಿದೆ. ಮಕ್ಕಳು ಮತ್ತು ತಾಯಂದಿರ ಅಪೌಷ್ಟಿಕತೆಯೂ 1.8ರಷ್ಟು ಕಡಿಮೆ ಮಾಡಿದೆ. ಭಾರತೀಯರು ಡಬ್ಲ್ಯೂಎಚ್​ಒ ಮಾರ್ಗದರ್ಶನವನ್ನು ತಲುಪಬೇಕು ಎಂದರೆ ಮಾಲಿನ್ಯವನ್ನು ತಗ್ಗಿಸಬೇಕಿದೆ. ದೆಹಲಿಯು ಅತ್ಯಂತ ಹೆಚ್ಚು ವಾಯು ಮಾಲಿನ್ಯಕ್ಕೆ ಒಳಗಾದ ಪ್ರದೇಶವಾಗಿದ್ದು, ಇಲ್ಲಿ 11.9ರಷ್ಟು ಜೀವಿತಾವಧಿ ತಗ್ಗಿದೆ ಎಂದು ವರದಿ ತಿಳಿಸಿದೆ.

ದೆಹಲಿ ಬಳಿಕ ಪಶ್ಚಿಮ ಬಂಗಾಳದ ನಾರ್ತ್​ 24 ಪರಗಣ ಎರಡನೇ ಮಾಲಿನ್ಯ ಪ್ರದೇಶವಾಗಿದ್ದು, ಇಲ್ಲಿನ ಜನರ ಜೀವಿತಾವಧಿ 5.6 ಕಡಿಮೆಯಾಗಿದೆ. 2019ರಲ್ಲಿ ಭಾರತವು ಮಾಲಿನ್ಯದ ವಿರುದ್ಧ ಸಮರ ಘೋಷಿಸಿತು. ಇದರ ಸಲುವಾಗಿ ನ್ಯಾಷನಲ್​ ಕ್ಲೀನ್​​ ಏರ್​ ಪ್ರೋಗ್ರಾಂ (ಎನ್​ಸಿಎಪಿ)ಯನ್ನು ಉದ್ಘಾಟಿಸಿ, ಮಾಲಿನ್ಯದ ಕಣವನ್ನು ಕಡಿಮೆ ಮಾಡುವ ಉದ್ದೇಶ ಹೊಂದಿತು. ಎನ್​ಸಿಎಪಿ ಗುರಿ ಮಾಲಿನ್ಯವನ್ನು 2017ರಿಂದ 2024ರವರೆಗೆ 20-30ರಷ್ಟು ಮಾಲಿನ್ಯ ಕಣವನ್ನು ಕಡಿಮೆ ಮಾಡುವ ಗುರಿ ಹೊಂದಲಾಗಿತ್ತು. (ಎಎನ್​ಐ)

ಇದನ್ನೂ ಓದಿ: ಜಾಗತಿಕ ತಾಪಮಾನ 2 ಡಿಗ್ರಿ ಸೆಲ್ಸಿಯಸ್ ಹೆಚ್ಚಾದರೂ 1 ಕೋಟಿ ಜನರ ಸಾವಿಗೆ ಕಾರಣವಾಗಬಹುದು; ಅಧ್ಯಯನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.