ETV Bharat / state

ಬಿಸಿ ಊಟ ಸರಿಯಿಲ್ಲ ಎಂದು ಅಡುಗೆ ಸಿಬ್ಬಂದಿ ಮೇಲೆ ಎಸ್​ಡಿಎಂಸಿ ಅಧ್ಯಕ್ಷನಿಂದ ಹಲ್ಲೆ

author img

By

Published : Aug 26, 2019, 3:35 AM IST

ಎಸ್​ಡಿಎಂಸಿ ಅಧ್ಯಕ್ಷರೊಬ್ಬರು ಅಡುಗೆ ಸಿಬ್ಬಂದಿಯ ಮೇಲೆ ಮಾರಾಣಾಂತಿಕ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಶಹಾಪುರ ತಾಲೂಕಿನ ಗುಂಡಾಪುರ ಗ್ರಾಮದಲ್ಲಿ ಘಟನೆ ನಡೆದಿದೆ.

ಮಾರಾಣಾಂತಿಕ ಹಲ್ಲೆ

ಯಾದಗಿರಿ: ಸರ್ಕಾರಿ ಪ್ರಾಥಮಿಕ ಶಾಲೆಯ ಎಸ್​ಡಿಎಂಸಿ ಅಧ್ಯಕ್ಷರೊಬ್ಬರು ಅಡುಗೆ ಸಿಬ್ಬಂದಿಯ ಮೇಲೆ ಮಾರಾಣಾಂತಿಕ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ.

ಜಿಲ್ಲೆಯ ಶಹಾಪುರ ತಾಲೂಕಿನ ಗುಂಡಾಪುರ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಎಸ್​ಡಿಎಂಸಿ ಅಧ್ಯಕ್ಷ ಭೀಮಣ್ಣ ಎಂಬುವವರು ಅಡುಗೆ ಸಿಬ್ಬಂದಿ ಕಮಲಬಾಯಿ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ ಎಂದು ದೂರು ದಾಖಲಾಗಿದೆ.

ಮಧ್ಯಾಹ್ನದ ಸಮಯದಲ್ಲಿ ಬಿಸಿಯೂಟ ಸರಿಯಾಗಿ ಮಾಡಿಲ್ಲ ಎಂದು ಅಡುಗೆ ಸಿಬ್ಬಂದಿ ಕಮಲಬಾಯಿ ಜೊತೆ ಭೀಮಣ್ಣ ಜಗಳವಾಡಿದ್ದಾರೆ. ಬಳಿಕ ಇದೇ ವಿಚಾರವಾಗಿ ಭೀಮಣ್ಣ ಗುಂಪು ಕಟ್ಟಿಕೊಂಡು ಬಂದು ರಾತ್ರಿ ಸಮಯದಲ್ಲಿ ಕಮಲಾಬಾಯಿ ಮನೆ ಮೇಲೆ ದಾಳಿ ಮಾಡಿದ್ದಲ್ಲದೇ, ಅವರ ಮೇಲೆ ಮಾರಣಾಂತಿಕ ಹಲ್ಲೆಗೈಯ್ದಿದ್ದಾರೆಂದು ದೂರಲಾಗಿದೆ..

ಹಲ್ಲೆಗೊಳಗಾದ ಅಡುಗೆ ಸಿಬ್ಬಂದಿ ಕಮಲಬಾಯಿ ಪತಿ ಹಾಗೂ ಕುಟುಂಬಸ್ಥರನ್ನು ಚಿಕಿತ್ಸೆಗೆಂದು ಕಲಬುರಗಿ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಕುರಿತು ಗೋಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Intro:ಯಾದಗಿರಿ : ಸರಕಾರಿ ಪ್ರಾಥಮಿಕ ಶಾಲಾ ಎಸ್ ಡಿ ಎಸ್ ಸಿ ಅಧ್ಯಕ್ಷನಿಂದ ಅಡುಗೆ ಸಿಬ್ಬಂದಿಯ ಮೇಲೆ ಮಾರಾಣಾಂತೀಕ ಹಲ್ಲೆ ನಡೆದಿರುವ ಘಟನೆ ನಡೆದಿದೆ.

ಜಿಲ್ಲೆಯ ಶಹಾಪುರ ತಾಲೂಕಿನ ಗುಂಡಾಪುರ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಯ ಎಸ್ ಡಿ ಎಮ್ ಸಿ ಅಧ್ಯಕ್ಷ ಭೀಮಣ್ಣ ಅಡುಗೆ ಸಿಬ್ಬಂದಿ ಕಮಲಬಾಯಿ ಮೇಲೆ ಮಾರಣಾಂತೀಕವಾಗಿ ಹಲ್ಲೆ ನಡೆಸಿದ್ದಾನೆ.

ಮಧ್ಯಾಹ್ನ ಸಮಯದಲ್ಲಿ ಬಿಸಿಯೂಟ ತಡವಾಗಿ ಮಾಡಲಾಗಿದೆ ಆರೋಪಿಸಿ ಕ್ಷುಲಕ ಕಾರಣಕ್ಕೆ ಅಡುಗೆ ಸಿಬ್ಬಂದಿ ಕಮಲಬಾಯಿ ಜೊತೆ ಜಗಳವಾಡಿದ್ದಾನೆ.




Body:ಈ ವಿಚಾರವನ್ನೆ ಮುಂದಿಟ್ಟ್ಕೊಂಡ ಎಸ ಡಿ ಎಮ್ ಸಿ ಅಧ್ಯಕ್ಷ ಭೀಮಣ್ಣ ಗುಂಪು ಕಟ್ಟಿಕೊಂಡು ರಾತ್ರಿ ಸಮಯದಲ್ಲಿ ಕಮಲಾಬಾಯಿ ಮನೆ ಮೇಲೆ ದಾಳಿ ಮಾಡಿದ್ದಾನೆ . ಈ ಕುರಿತು ಗೋಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸ್ ಇನ್ಸಪೆಕ್ಟರ್ ತಿಳಿಸಿದ್ದಾರೆ.



Conclusion:
ಅಡುಗೆ ಸಿಬ್ಬಂದಿ ಕಮಲಬಾಯಿ ಪತಿ ಹಾಗೂ ಕುಟುಂಬಸ್ಥರು ಹಲ್ಲೆಗೊಳಗಾದ ಹಿನ್ನೆಲೆ ಚಿಕಿತ್ಸೆಗೆಂದು ಕಲಬುರಗಿ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ತಿಳಿದು ಬಂದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.