ETV Bharat / state

ಜನಸಂಕಲ್ಪ ಯಾತ್ರೆ ವಿಜಯ ಸಂಕಲ್ಪವಾಗಿ ಪರಿವರ್ತನೆ: ಸಿಎಂ ಬಸವರಾಜ ಬೊಮ್ಮಾಯಿ ವಿಶ್ವಾಸ

author img

By

Published : Oct 19, 2022, 3:23 PM IST

ಕಾಂಗ್ರೆಸ್ ನವರಿಗೆ ಮಾಡಲು ಉದ್ಯೋಗವಿಲ್ಲ, ಅವರು ಮಾತನಾಡುತ್ತಾರೆ. ಮಾತನಾಡಲಿ. ನಮಗೆ ಜವಾಬ್ದಾರಿ ಇದೆ. ಜನಪರ ಕಾಳಜಿ ಇದೆ. ನಾವು ಮಾತನಾಡುವುದಕ್ಕಿಂತ ಕೆಲಸ ಮಾಡುತ್ತಿದ್ದೇವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಕೈ ನಾಯಕರಿಗೆ ಟಾಂಗ್ ನೀಡಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಯಾದಗಿರಿ: ಜನತೆಗೆ ದೀಪಾವಳಿ ಶುಭಾಶಯಗಳನ್ನ ತಿಳಿಸಿ, ಜನಸಂಕಲ್ಪ ಯಾತ್ರೆ ಯಾದಗಿರಿ ಜಿಲ್ಲೆಯಲ್ಲಿ ಶಾಸಕ ರಾಜೂಗೌಡ ಅವರ ಕ್ಷೇತ್ರದಿಂದ ಪ್ರಾರಂಭ ಮಾಡುತ್ತಿದ್ದು, ಅಭೂತಪೂರ್ವ ಜನ ಬೆಂಬಲ ಸಿಗುತ್ತಿದೆ. ಈ ಹಿಂದೆ ರಾಯಚೂರು, ಕೊಪ್ಪಳ, ವಿಜಯನಗರ, ಬಳ್ಳಾರಿ, ಬೀದರ್ ಜಿಲ್ಲೆಯಲ್ಲಿ ಅತ್ಯಂತ ಯಶಸ್ವಿಯಾಗಿದೆ. ಜನತೆಯಿಂದ ಪ್ರೋತ್ಸಾಹ ದೊರೆಯುತ್ತಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾತನಾಡಿದರು

ಹೀಗಾಗಿ ಮುಂಬರುವ ದಿನಗಳಲ್ಲಿ ರಾಜ್ಯವನ್ನು ಸುತ್ತುತ್ತಿದ್ದ ಸಂದರ್ಭದಲ್ಲಿ ಜನಸಂಕಲ್ಪ ಯಾತ್ರೆ ವಿಜಯ ಸಂಕಲ್ಪವಾಗಿ ಪರಿವರ್ತನೆಯಾಗುತ್ತದೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದರು.

ಹುಣಸಗಿ ಪಟ್ಟಣದಲ್ಲಿ ಹಮ್ಮಿಕೊಂಡ ಜನಸಂಕಲ್ಪ ಯಾತ್ರೆ ಸಮಾವೇಶಕ್ಕೆ ಕಲಬುರಗಿಯಿಂದ ಹೆಲಿಕಾಪ್ಟರ್ ಮೂಲಕ ಆಗಮಿಸಿ, ಹೆಲಿಪ್ಯಾಡ್ ಮೈದಾನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರು ಗುಂಡಿ ಪ್ರಕರಣವನ್ನ ತನಿಖೆಗೆ ಒಪ್ಪಿಸಲಾಗಿದೆ. ಗುಂಡಿ ಮುಚ್ಚಿಸಲು ಹೇಳಿದ್ದೇನೆ. ಕುಮಾರಸ್ವಾಮಿ ಹಿಂದೆ ಆಡಳಿತ ಕಾಲದಲ್ಲಿ ಆಗಲೂ ಗುಂಡಿ ಬಿದ್ದಿದ್ದವು. ಅವರು ಆರೋಪ ಮಾಡುವುದರಲ್ಲಿ ಹುರಳಿಲ್ಲ ಎಂದರು.

ಸರ್ಕಾರದ ಹಗರಣಗಳು ಅವರಿಗೂ ಗೊತ್ತಾಗಲಿ: ಸಿಎಂಗೆ ಧಮ್ ಇದ್ದರೆ ಸಿದ್ದರಾಮಯ್ಯ ಮೇಲಿನ ಆರೋಪಗಳನ್ನ ತನಿಖೆ ಮಾಡಿಸಲಿ ಅನ್ನೋ ಹೆಚ್​​​​ಡಿಕೆ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಈಗಾಗಲೇ ಪಿಎಸ್​ಐ ಹಗರಣದಲ್ಲಿ ಸಿಐಡಿಯವರು ಆರೋಪಿಗಳನ್ನು ತನಿಖೆಗೆ ಬಂಧಿಸಿದ್ದಾರೆ. ತನಿಖೆ ಕೈಗೊಂಡು ಕ್ರಮ ಕೈಗೊಳ್ಳಲಾಗುತ್ತಿದೆ. ರಾಹುಲ್ ಗಾಂಧಿ ಅವರು ಕಣ್ಣು ತೆರೆದು ನೋಡಲಿ ಅಂತ ಅವರಿಗೆ ಫೈಲ್ ಕೊಡುತ್ತೇವೆ. ಸಿದ್ದರಾಮಯ್ಯ ಸರ್ಕಾರದ ಹಗರಣಗಳು ಅವರಿಗೂ ಗೊತ್ತಾಗಲಿ ಎಂದು ಹೇಳಿದರು.

ನಾವು ಮಾತನಾಡುವುದಕ್ಕಿಂತ ಕೆಲಸ ಮಾಡುತ್ತಿದ್ದೇವೆ: ಪೇ ಸಿಎಂ, ಸೇ ಸಿಎಂ ಅಭಿಯಾನ ವಿಚಾರ ಕುರಿತು ಮಾತನಾಡಿದ ಅವರು, ಕಾಂಗ್ರೆಸ್ ನವರಿಗೆ ಮಾಡಲು ಉದ್ಯೋಗವಿಲ್ಲ, ಅವರು ಮಾತನಾಡುತ್ತಾರೆ. ಮಾತನಾಡಲಿ. ನಮಗೆ ಜವಾಬ್ದಾರಿ ಇದೆ. ಜನಪರ ಕಾಳಜಿ ಇದೆ. ನಾವು ಮಾತನಾಡುವುದಕ್ಕಿಂತ ಕೆಲಸ ಮಾಡುತ್ತಿದ್ದೇವೆ. ಕೆಲಸದ ಮೂಲಕ ಮಾತನಾಡುತ್ತೇವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.

ಓದಿ: ಮಲ್ಲಿಕಾರ್ಜುನ ಖರ್ಗೆ ಕಾಂಗ್ರೆಸ್ ಅಧ್ಯಕ್ಷ: ಪಕ್ಷ ನಿಷ್ಠೆ, ಹೋರಾಟ, ಪ್ರಾಮಾಣಿಕತೆಗೆ ಸಂದ ಗೌರವ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.