ETV Bharat / state

ವಿಶ್ವ ಜನಸಂಖ್ಯಾ ದಿನ: ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಜಾಗೃತಿ ಜಾಥಾ

author img

By

Published : Jan 18, 2020, 8:24 AM IST

ವಿಶ್ವ ಜನಸಂಖ್ಯಾ ದಿನಾಚರಣೆ ನಿಮಿತ್ತ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಜಾಗೃತಿ ಜಾಥಾ ಕಾರ್ಯಕ್ರಮ ವಿಜಯಪುರ ಜಿಲ್ಲೆಯಲ್ಲಿ ಹಮ್ಮಿಕೊಳ್ಳಲಾಗಿತ್ತು.

World Population Day
ಜಾಗೃತಿ ಜಾಥಾ

ವಿಜಯಪುರ: ವಿಶ್ವ ಜನಸಂಖ್ಯಾ ದಿನಾಚರಣೆ ನಿಮಿತ್ತ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಜಾಗೃತಿ ಜಾಥಾ ಕಾರ್ಯಕ್ರಮವನ್ನು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್​​, ಆರೋಗ್ಯ ಇಲಾಖೆ ಹಾಗೂ ಬಬಲೇಶ್ವರ ಶಾಂತವೀರ ಕಾಲೇಜು ಎನ್.ಎಸ್.ಎಸ್. ಘಟಕದ ಆಶ್ರಯದಲ್ಲಿ ಜಿಲ್ಲೆಯಲ್ಲಿ ಹಮ್ಮಿಕೊಳ್ಳಲಾಗಿತ್ತು.

ಜನಸಂಖ್ಯಾ ಜಾಗೃತಿ ಜಾಥಾಕ್ಕೆ ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಆರ್.ಭಾಗವಾನ್​ ಹಾಗೂ ಪ್ರಾಂಶುಪಾಲ ಬಬಲೇಶ್ವರ ಶಾಂತವೀರ ಕಾಲೇಜು ಪ್ರಾಂಶುಪಾಲ ವಿ.ಆರ್.ಚೌಧರಿ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಎನ್.ಆರ್.ಭಗವಾನ್​​ ಮಾತನಾಡಿ, ಜನಸಂಖ್ಯಾ ಹೆಚ್ಚಳದಿಂದ ದೇಶದ ಪ್ರಗತಿ ಕುಂಠಿತವಾಗುವುದಲ್ಲದೇ, ಜನದಟ್ಟಣೆಯಿಂದ ಆರ್ಥಿಕತೆ ಕುಸಿತ, ಬೀದಿ ಬೀದಿಗಳಲ್ಲಿ ಕೊಳಚೆ ಪ್ರದೇಶ ಉದ್ಭವಿಸುವುದು. ಇದರಿಂದ ಅನಾರೋಗ್ಯ ಹೆಚ್ಚಳ ಮತ್ತು ನಿರುದ್ಯೋಗ ಸಮಸ್ಯೆ ಮತ್ತಷ್ಟು ಹೆಚ್ಚಾಗುತ್ತದೆ. ಹಾಗಾಗಿ ಜನಸಂಖ್ಯೆ ನಿಯಂತ್ರಿಸಿ ನೆಮ್ಮದಿಯ ಬದುಕು ಕಂಡುಕೊಳ್ಳಬೇಕು ಎಂದು ಸಲಹೆ ನೀಡಿದರು.

ಇನ್ನು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ತಾಲೂಕಿನ ಆರೋಗ್ಯ ಅಧಿಕಾರಿ ಡಾ.ಕವಿತಾ ಮಾತನಾಡಿ, ಅನಾರೋಗ್ಯದ 10 ಮಕ್ಕಳಿಗೆ ಜನ್ಮ ನೀಡುವುದಕ್ಕಿಂತ ಆರೋಗ್ಯಯುತ ಒಂದು ಮಗು ಜನಿಸಿದರೆ ದೇಶದ ಸಂಪತ್ತು ವೃದ್ದಿಯಾಗುತ್ತದೆ, ಆರೋಗ್ಯವಂತ ಒಂದು ಮಗುವಿನಿಂದ ದೇಶಕ್ಕೆ ಮಾರಕವಾಗುವ ಬಡತನ, ನಿರುದ್ಯೋಗ ಇವುಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಬಹುದಾಗಿದೆ ಎಂದರು.

ಜನಸಂಖ್ಯೆ ನಿಯಂತ್ರಣಕ್ಕೆ ಶಾಶ್ವತ ಪರಿಹಾರಕ್ಕಾಗಿ ಟೋಬೇಕ್ಟಮಿ, ಲೇಪ್ರಸ್ಕೋಪಿಕ್, ಎನ್.ಎಸ್.ವಿ ವಿಧಾನಗಳನ್ನು ಹಾಗೂ ತಾತ್ಕಾಲಿಕ ವಿಧಾನಗಳಾದ ಐಯುಡಿ, ಒಪಿ, ನಿರೋಧ, ಚುಚ್ಚುಮದ್ದುಗಳ ಬಗ್ಗೆ ತಿಳಿಸಿ ಇವುಗಳಿಂದ ಜನಸಂಖ್ಯೆ ನಿಯಂತ್ರಣ ಮಾಡಬಹುದು ಎಂದು ತಿಳಿಸಿದರು.

ಇನ್ನು ಜಾಥಾ ಕಾರ್ಯಕ್ರಮದಲ್ಲಿ ಎನ್.ಎಸ್.ಎಸ್ ಅಧಿಕಾರಿಗಳಾದ ಡಾ.ಎಮ್.ಸಿ.ನಿಗಶೆಟ್ಟಿ, ಡಾ.ಎಸ್.ಐ.ಬಿರಾದಾರ ಸೇರಿದಂತೆ ಮುಂತಾದವರು ಪಾಲ್ಗೊಂಡಿದ್ದರು.

Intro:ವಿಜಯಪುರ Body:ವಿಜಯಪುರ: ಮಿತಿಮೀರಿದ ಜನಸಂಖ್ಯೆ ಕುಟುಂಬದೊಂದಿಗೆ ಆರಂಭವಾಗುವ ಸಮಸ್ಯೆ ಇಡೀ ದೇಶಕ್ಕೆ ಮಾರಕವಾಗಿ ಅಭಿವೃದ್ಧಿ ಕುಂಟಿತವಾಗುತ್ತದೆ ಎಂದು ತಾಲೂಕು
ಆರೋಗ್ಯ ಶಿಕ್ಷಣಾಧಿಕಾರಿ ಎನ್.ಆರ್.ಭಾಗವಾನ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಆರೋಗ್ಯ ಇಲಾಖೆ ಹಾಗೂ ಬಬಲೇಶ್ವರ ಶಾಂತವೀರ ಕಾಲೇಜು ಎನ್.ಎಸ್.ಎಸ್. ಘಟಕದ ಆಶ್ರಯದಲ್ಲಿ ವಿಶ್ವ ಜನಸಂಖ್ಯೆ ದಿನಾಚರಣೆ ಅಂಗವಾಗಿ ಬಬಲೇಶ್ವರದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಪ್ರಾಸ್ಥಾವಿಕವಾಗಿ ಮಾತನಾಡಿದ ಅವರು, ಜನಸಂಖ್ಯೆ ಹೆಚ್ಚಳದಿಂದ ಎಲ್ಲ ವಿಧದಲ್ಲಿಯೂ ಸಮಸ್ಯೆ ಅನುಭವಿಸಬೇಕಾಗುತ್ತದೆ. ಜನಸಂಖ್ಯೆಯಿಂದ ಆರ್ಥಿಕ ಹೊರೆ ಜೀವನ ಶೈಲಿ ಹಾಗೂ ವಿದ್ಯಾಭ್ಯಾಸಕ್ಕೆ, ಬಡತನಕ್ಕೆ ಪ್ರಮುಖ ಕಾರಣವಾಗಿದೆ. ದೇಶದ ಪ್ರಗತಿ ಕುಂಠಿತವಾಗುವುದಲ್ಲದೆ, ಜನದಟ್ಟಣೆಯಿಂದ ಆರ್ಥಿಕತೆ ಕುಸಿತ, ಬೀದಿ ಬೀದಿಗಳಲ್ಲಿ ಕೊಳಚೆ ಪ್ರದೇಶ ಉದ್ಭವಿಸುವುದು ಇದರಿಂದ ಅನಾರೊಗ್ಯ ಹೆಚ್ಚಳ ಮತ್ತು ನಿರುದ್ಯೋಗ ಸಮಸ್ಯೆ ಮತ್ತಷ್ಟು ಹೆಚ್ಚಳವಾಗುತ್ತದೆ. ಕಾರಣ ಜನಸಂಖ್ಯೆಯನ್ನು ನಿಯಂತ್ರಿಸಿ ನೆಮ್ಮದಿಯ ಬದುಕನ್ನು ಕಂಡುಕೊಳ್ಳಬೇಕು ಎಂದು ಸಲಹೆ ನೀಡಿದರು.
ಪ್ರಸಕ್ತ ವರ್ಷದ ಇಲಾಖೆಯ ಘೋಷಣೆಯಾದ ``ಕುಟುಂಬ ಕಲ್ಯಾಣ ನಿಭಾಯಿಸುವ ಜವಾಬ್ದಾರಿ’’ ಎಂಬ ಘೋಷಣೆಯ ಹಿನ್ನೆಲೆಯಲ್ಲಿ ತಾಯಿ ಮತ್ತು ಮಗುವಿನ ಆರೋಗ್ಯದ ಪೂರ್ಣ ತಯಾರಿ, ಜನಸಂಖ್ಯಾ ತಡೆಯಲು ಇರುವ ಮಾರ್ಗೊಪಾಯಗಳು, ಜನಸಂಖ್ಯೆ ಹೆಚ್ಚಳದಿಂದ ಸಾಮಾಜಿಕ, ರಾಜಕೀಯ ಹಾಗೂ ಆರ್ಥಿಕ ಸಮಸ್ಯೆಗಳ ಕುರಿತ ಸವಿಸ್ತಾರವಾಗಿ ವಿವರಿಸಿದರು.
ಸಮಾರಂಭದಲ್ಲಿ ಉಪಸ್ಥಿತರಿದ್ದ ತಾಲೂಕಾ ಆರೋಗ್ಯ ಅಧಿಕಾರಿ ಡಾ.ಕವಿತಾ ಮಾತನಾಡಿ, ಅನಾರೋಗ್ಯದ 10 ಮಕ್ಕಳನ್ನು ಹಡೆಯುವದಕ್ಕಿಂತ ಆರೋಗ್ಯಯುತ ಒಂದು ಮಗು ದೇಶದ ಸಂಪತ್ತು ಆಗುತ್ತದೆ, ಆರೋಗ್ಯವಂತ ಒಂದು ಮಗುವಿನಿಂದ ದೇಶಕ್ಕೆ ಮಾರಕವಾಗುವ ಬಡತನ, ನಿರುದ್ಯೋಗ ಇವುಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಬಹುದಾಗಿದೆ. ಜನಸಂಖ್ಯೆ ನಿಯಂತ್ರಣಕ್ಕೆ ಶಾಶ್ವತ ಪರಿಹಾರಕ್ಕಾಗಿ ಟೋಬೇಕ್ಟಮಿ, ಲೇಪ್ರಸ್ಕೋಪಿಕ್, ಎನ್.ಎಸ್.ವಿ ವಿಧಾನಗಳನ್ನು ಹಾಗೂ ತಾತ್ಕಾಲಿಕ ವಿಧಾನಗಳಾದ ಐಯುಡಿ, ಓಪಿ,ನಿರೋಧ, ಚುಚ್ಚುಮದ್ದುಗಳ ಬಗ್ಗೆ ತಿಳಿಸಿ ಇವುಗಳಿಂದ ಜನಸಂಖ್ಯೆ ನಿಯಂತ್ರಣ ಮಾಡಬಹುದು ಎಂದರು. ಮನೆಗೊಂದು ಮಗು ದೇಶಕ್ಕೆ ನಗು ಇದರಿಂದ ತಂದೆ ತಾಯಿ ಆರೋಗ್ಯದ ಜೊತೆಗೆ ಕುಟುಂಬ ಸಂತೋಷದಿಂದ ಇರುತ್ತದೆ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಬಬಲೇಶ್ವರ ಶಾಂತವೀರ ಕಾಲೇಜು ಪ್ರಾಂಶುಪಾಲ ವಿ.ಆರ್.ಚೌಧರಿ, ವಿಶ್ವದ ಜನಸಂಖ್ಯೆಯಲ್ಲಿ ಭಾರತ 2ನೇ ಪ್ರಬಲ ರಾಷ್ಟ್ರವಾಗಿ ಹೊರಹೊಮ್ಮಿದ್ದು ಈಗಿರುವ ಅಂಕಿ ಅಂಶಗಳ ಏರಿಳಿತದ ಲೆಕ್ಕಾಚಾರಲದಲ್ಲಿ ಭಾರತ ದೇಶ ಜನಸಂಖ್ಯೆಯಲ್ಲಿ ಪ್ರಥಮ ಸ್ಥಾನ ದಕ್ಕಿಸಿಕೊಳ್ಳಲಿದೆ. ಆದರೆ, ಜನಸಂಖ್ಯೆ ನಿಯಂತ್ರಣದಲ್ಲಿ ನಾವು ತಾತ್ಕಾಲಿಕ ವಿಧಾನಗಳನ್ನು ಅಳವಡಿಸಿಕೊಳ್ಳುವುದು ಅವಶ್ಯಕವಾಗಿದೆ. ಒಂದು ಅಥವಾ ಎರಡು ಮಕ್ಕಳನ್ನು ಪಡೆದು ಚಿಕ್ಕ ಸಂಸಾರದೊಂದಿಗೆ ಉತ್ತಮ ವಿದ್ಯಾಭ್ಯಾಸ ಕೊಡಿಸಿ ಒಳ್ಳೆಯ ನಾಗರಿಕರನ್ನಾಗಿ ಮಾಡಲು ಪ್ರಯತ್ನ ಪಟ್ಟರೆ ಆ ಮಕ್ಕಳೆ ದೇಶದ ಸಂಪತ್ತು ಆಗುತ್ತಾರೆ ಎಂದು ಅಭಿಪ್ರಾಯ ಪಟ್ಟರು.
ಎನ್.ಎಸ್.ಎಸ್. ಅಧಿಕಾರಿಗಳಾದ ಡಾ.ಎಮ್.ಸಿ.ನಿಗಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.ಡಾ.ಎಸ್.ಐ.ಬಿರಾದಾರ ವಂದಿಸಿದರು.
ಇದಕ್ಕೂ ಮುನ್ನ ನಗದಲ್ಲಿ ಹಮ್ಮಿಕೊಂಡಿದ್ದ ಜನಸಂಖ್ಯೆ ಜಾಗೃತಿ ಜಾಥಕ್ಕೆ ತಾಲೂಕು ಆರೋಗ್ಯ ಅಧಿಕಾರಿ ಹಾಗೂ ಪ್ರಾಂಶುಪಾಲರು ಚಾಲನೆ ನೀಡಿದರು.Conclusion:ವಿಜಯಪುರ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.