ETV Bharat / state

ರಫೇಲ್ ಯುದ್ಧ ವಿಮಾನದ ಪೈಲಟ್​ ಆಗಿ ವಿಜಯಪುರದ ವಿಂಗ್ ಕಮಾಂಡರ್ ಆಯ್ಕೆ!

author img

By

Published : Jul 29, 2020, 9:30 AM IST

Updated : Jul 29, 2020, 10:17 AM IST

ಫ್ರಾನ್ಸ್​ನಿಂದ ಭಾರತಕ್ಕೆ ಬಂದು, ಸೇನೆಗೆ ಸೇರ್ಪಡೆಯಾದ ರಫೇಲ್ ಯುದ್ಧ ವಿಮಾನಕ್ಕೆ ವಿಜಯಪುರ ಸೈನಿಕ ಶಾಲೆಯಲ್ಲಿ ಕಲಿತಿದ್ದ ವಿದ್ಯಾರ್ಥಿಯೊಬ್ಬರು ಪೈಲಟ್ ಆಗಿ ಆಯ್ಕೆಯಾಗಿದ್ದು, ಕರ್ನಾಟಕ ರಾಜ್ಯಕ್ಕೆ ಹೆಮ್ಮೆ ತಂದಿದೆ.

Rafael fighter  jet
ಅರುಣ ಕುಮಾರ

ವಿಜಯಪುರ: ಇತ್ತೀಚೆಗಷ್ಟೆ ಫ್ರಾನ್ಸ್​ನಿಂದ ಭಾರತ ಬಂದು, ಸೇನೆಗೆ ಸೇರ್ಪಡೆಯಾದ ರಫೇಲ್ ಯುದ್ಧ ವಿಮಾನಕ್ಕೆ ವಿವಿಧ ಸೈನಿಕ ಶಾಲೆಯ ನಾಲ್ವರು ಕಮಾಂಡರ್​ಗಳು ಆಯ್ಕೆಯಾಗಿದ್ದಾರೆ. ಅದರಲ್ಲೂ ವಿಜಯಪುರ ಸೈನಿಕ ಶಾಲೆಯಲ್ಲಿ ಕಲಿತಿದ್ದ ವಿದ್ಯಾರ್ಥಿಯೊಬ್ಬರು ಪೈಲಟ್ ಆಗಿ ಆಯ್ಕೆಯಾಗಿದ್ದು, ಕರ್ನಾಟಕ ರಾಜ್ಯಕ್ಕೆ ಹೆಮ್ಮೆ ತಂದಿದೆ.

ಭಾರತೀಯ ವಾಯುಸೇನೆಯಲ್ಲಿ ವಿಂಗ್ ಕಮಾಂಡರ್ ಆಗಿದ್ದ ಅರುಣ್​ ಕುಮಾರ ಅವರಿಗೆ ಈ ಅವಕಾಶ ದೊರಕಿದೆ. 35 ವರ್ಷದ ಅರುಣ ಕುಮಾರ ವಿಜಯಪುರದ ಸೈನಿಕ‌ ಶಾಲೆಯ ವಿದ್ಯಾರ್ಥಿಯಾಗಿದ್ದರು ಎಂಬುದು ಹೆಮ್ಮೆಯ ವಿಚಾರ.

Rafael fighter  jet
ಅರುಣ್​ ಕುಮಾರ

ಇವರು 1995 ರಿಂದ 2001ರ ಬ್ಯಾಚ್ ವಿದ್ಯಾರ್ಥಿಯಾಗಿದ್ದರು. ಅರುಣ ಕುಮಾರ ಜನವರಿ 2002ರಲ್ಲಿ ಎನ್​ಡಿಎ (ನ್ಯಾಷನಲ್ ಡಿಫೆನ್ಸ್ ಅಕಾಡೆಮಿ) ಗೆ ಸೇರ್ಪಡೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ತಂದೆ ಎನ್ ಪ್ರಸಾದ ಸಹ ಏರ್​ಫೋರ್ಸ್​ನಲ್ಲಿ ವಾರಂಟ್ ಆಫೀಸರ್ ಆಗಿ ಸೇವೆ ಸಲ್ಲಿಸಿದ್ದಾರೆ.

ಅರುಣ್​ ಕುಮಾರ ವಿಜಯಪುರದ ಸೈನಿಕ ಶಾಲೆಯಲ್ಲಿ ಚುರುಕಿನ ವಿದ್ಯಾರ್ಥಿಯಾಗಿದ್ದರು. ಎಲ್ಲರ ಅಚ್ಚುಮೆಚ್ಚಿನ ಸ್ನೇಹಿತರಾಗಿದ್ದ ಇವರು, ಸೈನಿಕ ಶಾಲೆಯ ಪ್ರಾಂಶುಪಾಲರು ಹಾಗೂ ಸಿಬ್ಬಂದಿಗೆ ಪ್ರೀತಿಪಾತ್ರರಾಗಿದ್ದರು. ಇವರ ಸಾಧನೆಗೆ ಎಲ್ಲ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.

Last Updated : Jul 29, 2020, 10:17 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.