ETV Bharat / state

ಕೋವಿಡ್​​​ ಲಸಿಕೆ ನೀಡುವಲ್ಲಿ ಗೊಂದಲ: ಎರಡನೇ ಡೋಸ್​​ ಸಿಗದೆ ಜನರ ಪರದಾಟ

author img

By

Published : May 25, 2021, 10:28 AM IST

ಲಸಿಕೆಯ ಮೊದಲ ಡೋಸ್​​ ಹಾಕುವಾಗ ಆರೋಗ್ಯ ಇಲಾಖೆ ಅಧಿಕಾರಿಗಳು ಜನರ ಮೊಬೈಲ್ ನಂಬರ್​ ಪಡೆದುಕೊಂಡಿದ್ದರು. ಎರಡನೇ ಲಸಿಕೆ ದಿನವನ್ನು ಮೆಸೇಜ್ ಮೂಲಕ ತಿಳಿಸುವುದಾಗಿ ಹೇಳಲಾಗಿತ್ತು.

ಕೋವಿಡ್​​​ ಲಸಿಕೆ
vaccination

ವಿಜಯಪುರ: ಜಿಲ್ಲೆಯಲ್ಲಿ ಮಹಾಮಾರಿ ಕೊರೊನಾ ನಿಯಂತ್ರಣಕ್ಕೆ ಬರುತ್ತಿದೆ. ಆದರೆ ಲಸಿಕೆ ಹಾಕಿಕೊಳ್ಳುವವರಲ್ಲಿ ಗೊಂದಲ ಮಾತ್ರ ಮುಂದುವರೆದಿದೆ.

ಕೋವಿನ್ ಆ್ಯಪ್‍ನಲ್ಲಿ ಸಾರ್ವಜನಿಕರು ತಮ್ಮ ಹೆಸರನ್ನು ನೋಂದಣಿ ಮಾಡಿಕೊಳ್ಳಬೇಕು. ಲಸಿಕೆ ಪಡೆಯುವ ಪ್ರತಿಯೊಬ್ಬರು ನೋಂದಣಿ ವೇಳೆ ಹೆಸರು, ವಿಳಾಸ, ಆಧಾರ್ ಕಾರ್ಡ್ ನಂಬರ್, ಮೊಬೈಲ್‍ ನಂಬರ್ ಹೀಗೆ ಸಂಪೂರ್ಣ ಮಾಹಿತಿ ನೀಡಬೇಕು. ನಂತರ ಸರ್ಕಾರವೇ ಲಸಿಕೆಯ ಮೊದಲ ಡೋಸ್ ಯಾವಾಗ, ಎಲ್ಲಿ, ಯಾವ ಸಮಯಕ್ಕೆ ಎಂಬುದರ ಬಗ್ಗೆ ನೋಂದಣಿ ಮಾಡಿಕೊಂಡವರ ಮೊಬೈಲ್​ ನಂಬರ್​ಗೆ ಸಂದೇಶ ರವಾನಿಸುತ್ತದೆ. ಆ ಪ್ರಕಾರ ಜನರು ಹೋಗಿ ಲಸಿಕೆ ಹಾಕಿಸಿಕೊಳ್ಳಬೇಕು.

ಲಸಿಕೆಯ ಎರಡನೇ ಡೋಸ್​​ ವಿಚಾರವಾಗಿ ವಿಜಯಪುರ ಜನತೆಯ ಪರದಾಟ

ಆದ್ರೆ ಲಸಿಕೆ ಸಂಬಂಧ ಜಿಲ್ಲೆಯ ಜನರಲ್ಲಿ ಕೆಲ ಗೊಂದಲಗಳಿವೆ. ಮೊದಲು ಲಸಿಕೆ ಹಾಕಿಸಿಕೊಂಡವರಿಗೆ ಎರಡನೇ ಡೋಸ್​​ ಯಾವಾಗ ಹಾಕಿಸಿಕೊಳ್ಳಬೇಕು ಎನ್ನುವ ಸ್ಪಷ್ಟತೆ ಇಲ್ಲ. ಮೊದಲು ಲಸಿಕೆ ಹಾಕುವಾಗ ಆರೋಗ್ಯ ಇಲಾಖೆ ಅಧಿಕಾರಿಗಳು ಜನರ ಮೊಬೈಲ್ ನಂಬರ್​ ಪಡೆದುಕೊಂಡಿದ್ದರು. ಎರಡನೇ ಲಸಿಕೆ ದಿನವನ್ನು ಮೆಸೇಜ್ ಮೂಲಕ ತಿಳಿಸುವುದಾಗಿ ಹೇಳಿದ್ದರು. ಆದರೆ ಸಾಕಷ್ಟು ಜನರಿಗೆ ಎರಡನೇ ಲಸಿಕೆ ಪಡೆಯುವ ಸಮಯ ಬಂದಿದ್ದರೂ ಮೆಸೇಜ್ ಮಾತ್ರ ಬರದೇ ಕೋವಿಡ್​​ ಮೊದಲ ಡೋಸ್​​ ಪಡೆದವರು ಪರದಾಡುವಂತಾಗಿದೆ.

ಇದನ್ನೂ ಓದಿ: ಬೆಳಗಾವಿಯಲ್ಲಿ ಚುರುಕುಗೊಂಡ ಲಸಿಕಾಕರಣ ಪ್ರಕ್ರಿಯೆ

ಜಿಲ್ಲಾಡಳಿತದ ಪ್ರಕಾರ, ಮಾರ್ಚ್ 1ರಿಂದ ಮೇ. 17ರವರೆಗೆ ಒಟ್ಟು 2,39,420 ಜನರು ಲಸಿಕೆ ಪಡೆದುಕೊಂಡಿದ್ದಾರೆ. ಲಸಿಕೆಯ ಮೊದಲ ಡೋಸ್​​ ಪಡೆದವರ ಸಂಖ್ಯೆ 2,01,844 ಇದೆ. ಎರಡನೇ ಡೋಸ್ ತೆಗೆದುಕೊಂಡವರ ಸಂಖ್ಯೆ ಕೇವಲ 45,082 ಮಾತ್ರ. ಸಾಕಷ್ಟು ಜನರಿಗೆ ಸರಿಯಾದ ಸಮಯಕ್ಕೆ ಮಾಹಿತಿ ಲಭ್ಯವಾಗದ ಕಾರಣ ತೊಂದರೆ ಅನುಭವಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.