ವಿಜಯಪುರ: ಸರ್ಕಾರಿ ನೌಕರಿ ಕೊಡಿಸುವುದಾಗಿ ಹೇಳಿ ಹಣ ಪಡೆಯಲು ಬಂದಿದ್ದ ವ್ಯಕ್ತಿ ಪೊಲೀಸ್​​ ವಶಕ್ಕೆ

author img

By

Published : Sep 23, 2022, 11:19 AM IST

Man took police custody

ಸರ್ಕಾರಿ ಕೆಲಸ ಕೊಡಿಸುವುದಾಗಿ ಹೇಳಿ ಹಣ ಪಡೆಯಲು ಬಂದಿದ್ದ ವ್ಯಕ್ತಿಯನ್ನು ಯುವಕರು ಗಾಂಧಿಚೌಕ್ ಠಾಣೆ ಪೊಲೀಸರಿಗೆ ಒಪ್ಪಿಸಿದ್ದಾರೆೆ.

ವಿಜಯಪುರ: ಸರ್ಕಾರಿ ನೌಕರಿ ಕೊಡಿಸುವುದಾಗಿ ಹೇಳಿ ಹಣ ಪಡೆಯಲು ಬಂದಿದ್ದ ವ್ಯಕ್ತಿಯನ್ನು ಯುವಕರು ಹಿಡಿದು ಪೊಲೀಸರಿಗೊಪ್ಪಿಸಿರುವ ಘಟನೆ ಜಿಲ್ಲೆಯ ‌ಸ್ಯಾಟಲೈಟ್ ಬಸ್ ನಿಲ್ದಾಣದ ಬಳಿ ನಡೆದಿದೆ.

ಹಣ ಪಡೆಯಲು ಬಂದಿದ್ದ ವ್ಯಕ್ತಿ ಪೊಲೀಸ್​​ ವಶಕ್ಕೆ

ಹೋಂ ಗಾರ್ಡ್ ಶಾಂತೇಶ್ ಕೊರ್ತಿ ಎಂಬಾತ ಸರ್ಕಾರಿ ಕೆಲಸ ಕೊಡಿಸುವುದಾಗಿ ಹೇಳಿ 8 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದ ಎಂದು ಆರೋಪಿಸಲಾಗಿದೆ. ಹಣ ನೀಡುವುದಾಗಿ ಕರೆಸಿದ ಯುವಕರು ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಶ್ರೀಕಾಂತ್​ ಎಂಬುವವರ ಬಳಿ ಹಣ ಪಡೆಯಲು ಶಾಂತೇಶ್ ಕೊರ್ತಿ ಬಂದಿದ್ದ. ಮುಂಗಡವಾಗಿ 2 ಲಕ್ಷ ಹಣ ಪಡೆಯುವಾಗ ಆರೋಪಿಯನ್ನು ಯುವಕರು ಗಾಂಧಿಚೌಕ್ ಠಾಣೆ ಪೊಲೀಸರಿಗೆ ಒಪ್ಪಿಸಿದ್ದಾರೆೆ. ಕೃಷ್ಣ ಎನ್ನುವವರ ಸೂಚನೆ ಮೇರೆಗೆ ಹಣ ಪಡೆಯಲು ಬಂದಿದ್ದಾಗಿ ಆರೋಪಿ ಶಾಂತೇಶ್ ಪೊಲೀಸರಿಗೆ ತಿಳಿಸಿದ್ದಾನೆ.

ಇದನ್ನೂ ಓದಿ: ನೇಪಾಳದಲ್ಲಿ ಪ್ರತ್ಯೇಕ ಬಸ್​ ಅಪಘಾತ: 12 ಸಾವು, 30ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.