ETV Bharat / state

ಹ್ಯುಂಡೈ ಕಾರು ಓಡಿಸೋಕೆ ನನಗೆ ನಾಚಿಕೆ ಆಗ್ತಿದೆ.. ಕಂಪನಿ ವಿರುದ್ಧ ವಿಜಯಪುರ ನಿವಾಸಿಯ ಆಕ್ರೋಶ

author img

By

Published : Feb 13, 2022, 7:44 PM IST

Updated : Feb 13, 2022, 8:39 PM IST

ಕಾಶ್ಮೀರ ವಿಚಾರದಲ್ಲಿ ಮೂಗು ತೂರಿಸಿದ್ದ ಬಹುರಾಷ್ಟ್ರೀಯ ಹ್ಯುಂಡೈ ಕಂಪನಿ ವಿರುದ್ಧ ವಿಜಯಪುರದ ಯುವಕ ಆಕ್ರೋಶ ವ್ಯಕ್ತಪಡಿಸಿದ್ದಾನೆ..

vijayapura man outrage on Hyundai company
ಹ್ಯುಂಡೈ ಕಂಪನಿ ವಿರುದ್ಧ ವಿಜಯಪುರ ನಿವಾಸಿಯ ಆಕ್ರೋಶ

ವಿಜಯಪುರ : ಕಾಶ್ಮೀರ ವಿಚಾರದಲ್ಲಿ ಮೂಗು ತೂರಿಸಿದ್ದ ಬಹುರಾಷ್ಟ್ರೀಯ ಹ್ಯುಂಡೈ ಕಂಪನಿ ವಿರುದ್ಧ ವಿಜಯಪುರದ ಯುವಕನೊಬ್ಬ ವಿಶಿಷ್ಟ ರೀತಿಯಲ್ಲಿ ಸೆಡ್ಡು ಹೊಡೆದಿದ್ದಾನೆ. ತಾನು ಖರೀದಿಸಿದ ಹ್ಯುಂಡೈ ಕಾರಿನ ಹಿಂಬದಿ ದೇಶ ವಿರೋಧಿ ಹೇಳಿಕೆ ನೀಡಿರುವ ಕಂಪನಿ ವಿರುದ್ಧ ಪೋಸ್ಟ್ ಅಂಟಿಸಿದ್ದಾನೆ.

ದೇಶ ವಿರೋಧಿ ಟ್ವೀಟ್ ಮಾಡಿದ ಹೊಂಡೈ ಕಂಪನಿ ವಿರುದ್ಧ ವಿಜಯಪುರ ನಗರ ನಿವಾಸಿ ಸಂತೋಷ ಚೌಧರಿ ತನ್ನದೇ ಶೈಲಿಯಲ್ಲಿ ಈ ಯುವಕ ಸೇಡು ತೀರಿಸಿಕೊಳ್ಳುತ್ತಿದ್ದಾನೆ. "ಹ್ಯುಂಡೈ ಕಂಪನಿ ಕಾರು ಓಡಿಸೋಕೆ ನನಗೆ ನಾಚಿಕೆ ಆಗ್ತಿದೆ, ಇದೊಂದು ದೇಶ ವಿರೋಧಿ ಕಂಪನಿ, #ಜೈಹಿಂದ್'' ಎಂದು ಬರೆದಿರುವ ಪೇಪರ್ ಅನ್ನು ಕಾರ್‌ಗೆ ಅಂಟಿಸಿ ರಾಷ್ಟ್ರಪ್ರೇಮ ಮೆರೆಯುವ ಮೂಲಕ ಎಲ್ಲರ ಗಮನ ಸೆಳೆದಿದ್ದಾನೆ.

ತನ್ನ ಹ್ಯುಂಡೈ i20 ಕಾರಿನ ಮುಂದೆ ಹಾಗೂ ಹಿಂದೆ ದೊಡ್ಡ ಸ್ಟಿಕ್ಕರ್ ಹಾಕಿ, ಹ್ಯುಂಡೈ ಕಾರಿನ ಲೋಗೋಗಳಿಗೂ ಕಪ್ಪು ಪಟ್ಟಿ ಅಂಟಿಸಿ ಆಕ್ರೋಶ ವ್ಯಕ್ತಪಡಿಸಿದ್ದಾನೆ. ತನ್ನ ದೇಶಕ್ಕೆ ಯಾರಾದರೂ ಅವಮಾನ ಮಾಡಿದರೆ ಸುಮ್ಮನಿರಲ್ಲ ಎಂದು ಆಕ್ರೋಶ ಹೊರ ಹಾಕಿದ್ದಾನೆ.

ಇದನ್ನೂ ಓದಿ: ಸದ್ಯಕ್ಕೆ ಕಾಂಗ್ರೆಸ್​ಗೆ ರಾಜೀನಾಮೆ ನೀಡುವುದಿಲ್ಲ: ಯೂಟರ್ನ್ ಹೊಡೆದ ಸಿಎಂ ಇಬ್ರಾಹಿಂ..

ತನ್ನ ಹ್ಯುಂಡೈ ಕಾರ್ ಅನ್ನು ಕಂಪನಿಗೆ ಪುಕ್ಸಟ್ಟೆಯಾಗಿ ವಾಪಸ್​ ಕೊಟ್ಟು ಬಿಡ್ತೀನಿ‌ ಎಂದು ಸಂತೋಷ ಚೌಧರಿ ಹೇಳಿಕೊಂಡಿದ್ದಾರೆ. ಕಂಪನಿಗೆ ನಾಚಿಕೆಯಾಗಲಿ ಎಂದು ಇದೇ ರೀತಿ ಸ್ಟಿಕ್ಕರ್​ ಅಂಟಿಸಿ ಕಾರಿನಲ್ಲಿ ಸಂಚರಿಸುತ್ತಿದ್ದಾನೆ. ಈ‌‌ ಮೂಲಕ ದೇಶ ವಿರೋಧಿ ಟ್ವೀಟ್ ಮಾಡಿದ ಕಂಪನಿಗೆ ಬುದ್ಧಿ‌ ಕಲಿಸಲು ಗ್ರಾಹಕ ಸಂತೋಷ ಚೌಧರಿ ಮುಂದಾಗಿದ್ದಾರೆ.

Last Updated :Feb 13, 2022, 8:39 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.