ವಿಜಯಪುರ : ಶಿಶು ಮಾರಾಟ ಪ್ರಕರಣ ಏನಾಗಿದೆ ಅಂತಾ ಜಿಲ್ಲಾಧಿಕಾರಿಗಳು ಹೇಳ್ತಾರೆ ಕೇಳಿ..

author img

By

Published : Sep 22, 2021, 5:00 PM IST

child-sale case

ಸದ್ಯ ಹುಷಾರಿಲ್ಲದ ಕಾರಣ ಮಗುವನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಹೀಗಾಗಿ, ಪ್ರಕರಣ ಬೆಳಕಿಗೆ ಬಂದಿದೆ. ತಾಯಿ ರೇಣುಕಾ ಹಾಗೂ ಆಟೋಡ್ರೈವರ್​ ಇಬ್ಬರನ್ನೂ ಈ ಪ್ರಕರಣದ ಸೂತ್ರಧಾರರು ಎಂದು‌ ತೀರ್ಮಾನಿಸಿ ಇಬ್ಬರ ವಿರುದ್ದವೂ ಪ್ರಕರಣ ದಾಖಲಿಸಲಾಗಿದೆ..

ವಿಜಯಪುರ : ಕೊನೆಗೂ ಮಗು ಮಾರಾಟ ಪ್ರಕರಣ ಸುಖಾಂತ್ಯ ಕಂಡಿದೆ. ಇದೀಗ ಮಗುವನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಮಗುವಿನ ತಾಯಿ ಹಾಗೂ ದೇವರ ಹಿಪ್ಪರಗಿಯ ಆಟೋ ಡ್ರೈವರ್ ಮೇಲೆ ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದಾರೆ.

ಶಿಶು ಮಾರಾಟ ಪ್ರಕರಣದ ಕುರಿತು ಜಿಲ್ಲಾಧಿಕಾರಿ ಪಿ. ಸುನೀಲ್​ ಕುಮಾರ್ ಮಾತು

ಈ ಕುರಿತು ಜಿಲ್ಲಾಧಿಕಾರಿ ಪಿ ಸುನೀಲ್​ ಕುಮಾರ್​ ಮಾತನಾಡಿ, ಜಿಲ್ಲೆಯ ತಿಕೋಟಾ ಗ್ರಾಮದ ಬಿಜ್ಜರಗಿಯ ರೇಣುಕಾ ಶಿವಾನಂದ ಕಾಂಬಳೆ ದಂಪತಿಗೆ ಆ.19ರಂದು ಸಹಜ ಹೆರಿಗೆಯಾಗಿ ರೇಣುಕಾ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ನಂತರ ಮಗುವನ್ನು ಬಿಟ್ಟು ಹೋಗಬೇಕು ಎಂದು ಆಸ್ಪತ್ರೆಯಲ್ಲಿ ಕೆಲವರ ಜತೆ ಅವಳು ಮಾತನಾಡಿದ್ದಾಳೆ. ಇದು ಆಟೋ ಡ್ರೈವರ್ ಕಿವಿಗೆ ಬಿದ್ದಿದೆ ಎಂದರು.

ಓದಿ: ಮಗು ಮಾರಾಟ ಕೇಸ್​: ನಾಲ್ಕು ದಿನ ಕಳೆದರೂ ಸಿಗದ ಆರೋಪಿ ಬಂಧನಕ್ಕೆ ತೀವ್ರ ಶೋಧ

ಹೀಗಾಗಿ, ನೇರವಾಗಿ ಗರ್ಭಿಣಿ ರೇಣುಕಾ ಜತೆ ಮಾತನಾಡಿ ಅ.26ರಂದು 6000 ಸಾವಿರ ದುಡ್ಡು ಕೊಟ್ಟು ಮಗುವನ್ನು ಖರೀದಿಸಿ ಹೋಗಿದ್ದ.‌ ನಂತರ ಪ್ರಕರಣ ಬೆಳಕಿಗೆ ಬಂದ ಮೇಲೆ ಮಕ್ಕಳ ಹಕ್ಕು ರಕ್ಷಣಾ ವೇದಿಕೆ ಈ ಸಂಬಂಧ ಪ್ರಕರಣ ದಾಖಲಿಸಿತ್ತು. ಆಟೋ ಡ್ರೈವರ್​ ಸವದತ್ತಿ ಅವರ ಸಂಬಂಧಿಗೆ ಮಗು ನೀಡಿದ್ದನು.‌

ಸದ್ಯ ಹುಷಾರಿಲ್ಲದ ಕಾರಣ ಮಗುವನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಹೀಗಾಗಿ, ಪ್ರಕರಣ ಬೆಳಕಿಗೆ ಬಂದಿದೆ. ತಾಯಿ ರೇಣುಕಾ ಹಾಗೂ ಆಟೋಡ್ರೈವರ್​ ಇಬ್ಬರನ್ನೂ ಈ ಪ್ರಕರಣದ ಸೂತ್ರಧಾರರು ಎಂದು‌ ತೀರ್ಮಾನಿಸಿ ಇಬ್ಬರ ವಿರುದ್ದವೂ ಪ್ರಕರಣ ದಾಖಲಿಸಲಾಗಿದೆ ಎಂದರು.

ಓದಿ: ಮಗು ಮಾರಾಟದ ಬಳಿಕ ಕಂದ ಬೇಕೇಬೇಕು ಎಂದು ದೂರು ದಾಖಲಿಸಿದ ತಾಯಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.