ETV Bharat / state

ಟ್ರ್ಯಾಕ್ಟರ್ ಪಲ್ಟಿ: ಚಾಲಕ ಸ್ಥಳದಲ್ಲಿಯೇ ಸಾವು!

author img

By

Published : Mar 13, 2021, 11:43 AM IST

Updated : Mar 13, 2021, 12:44 PM IST

ಟ್ರ್ಯಾಕ್ಟರ್ ಪಲ್ಟಿಯಾಗಿ ಚಾಲಕ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಮುದ್ದೇಬಿಹಾಳ ತಾಲೂಕಿನ ಹಂಡರಗಲ್ ರಸ್ತೆಯ ಯರಝರಿ ಕ್ರಾಸ್ ಬಳಿ ನಡೆದಿದೆ.

tractor palty
ಟ್ರ್ಯಾಕ್ಟರ್ ಪಲ್ಟಿ: ಚಾಲಕ ಸ್ಥಳದಲ್ಲಿಯೇ ಸಾವು

ಮುದ್ದೇಬಿಹಾಳ: ಅಮವಾಸ್ಯೆಯಂದು ಪೂಜೆ ಮಾಡಲು ಟ್ರ್ಯಾಕ್ಟರ್ ತೆಗೆದುಕೊಂಡು ಹೋಗಿ ವಾಪಸ್ ಬರುವಾಗ ಟ್ರ್ಯಾಕ್ಟರ್ ಪಲ್ಟಿಯಾಗಿ ಚಾಲಕ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಶುಕ್ರವಾರ ತಾಲೂಕಿನ ಹಂಡರಗಲ್ ರಸ್ತೆಯ ಯರಝರಿ ಕ್ರಾಸ್ ಬಳಿ ನಡೆದಿದೆ.

ಯರಝರಿ ಗ್ರಾಮದ ನಿವಾಸಿ ಶಿವಪ್ಪ ಬೀರಪ್ಪ ಗುರಿಕಾರ (19 ) ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ. ಘಟನಾ ಸ್ಥಳಕ್ಕೆ ‌ಪಿಎಸ್​ಐ ಎಂ.ಬಿ. ಬಿರಾದಾರ ಭೇಟಿ‌ ನೀಡಿ ಪರಿಶೀಲನೆ ನಡೆಸಿದ್ದಾರೆ.

ಈ ಸಂಬಂಧ ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Last Updated : Mar 13, 2021, 12:44 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.