ETV Bharat / state

ಸಿಂದಗಿ ಬೈಎಲೆಕ್ಷನ್​ ಫಲಿತಾಂಶ.. ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ 31,185 ಮತಗಳ ಅಂತರದಿಂದ ಭರ್ಜರಿ ಗೆಲುವು

author img

By

Published : Nov 2, 2021, 7:14 AM IST

Updated : Nov 2, 2021, 5:14 PM IST

ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ ಗೆಲುವು
ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ ಗೆಲುವು

17:11 November 02

12:50 November 02

ಮಾಜಿ ಸಚಿವ ಎಂ.ಸಿ.ಮನಗೂಳಿ ನಿಧನದ ಹಿನ್ನೆಲೆಯಲ್ಲಿ ನಡೆದ ಸಿಂದಗಿ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ ಭರ್ಜರಿ ಜಯ ಗಳಿಸಿದ್ದಾರೆ. ದಾಖಲೆಯ 31,185 ಮತಗಳ‌ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿ ಅಶೋಕ ಮನಗೂಳಿ ಅವರನ್ನು ಸೋಲಿಸಿದ್ದಾರೆ.

ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ 93865, ಕಾಂಗ್ರೆಸ್ ಅಭ್ಯರ್ಥಿ ಅಶೋಕ ಮನಗೂಳಿ 62680 ಹಾಗೂ ಜೆಡಿಎಸ್ ಅಭ್ಯರ್ಥಿ ನಾಜಿಯಾ ಅಂಗಡಿ 4353 ಮತ ಪಡೆದುಕೊಂಡರು. ಒಟ್ಟು 1031 ನೋಟಾ ಮತಗಳು ಬಂದಿವೆ. ಮೂವರು ಪಕ್ಷೇತರ ಅಭ್ಯರ್ಥಿಗಳಿಗಿಂತ ಹೆಚ್ಚು ನೋಟಾ ಬಿದ್ದಿರುವುದು ವಿಶೇಷ.

ಪಕ್ಷೇತರ ಅಭ್ಯರ್ಥಿಗಳ ಮತಗಳಿಕೆ: ಪಕ್ಷೇತರ ಅಭ್ಯರ್ಥಿಗಳಾದ ಡಾ. ಸುನೀಲಕುಮಾರ ಹಬ್ಬಿ 925, ಮುಲ್ಲಾ 513 ಹಾಗೂ ದೀಪಿಕಾ 415 ಮತ ಬಂದಿವೆ. 

12:18 November 02

ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ 22 ನೇ ಸುತ್ತಿನಲ್ಲಿ 92,581 ಮತಗಳನ್ನು ಪಡೆದರೆ, ಕಾಂಗ್ರೆಸ್​ನ ಅಶೋಕ ಮನಗೂಳಿ 61,735 ಜೆಡಿಎಸ್ ಅಭ್ಯರ್ಥಿ ನಾಜಿಯಾ ಅಂಗಡಿ 4,248 ಮತಗಳನ್ನು ಪಡೆದಿದ್ದಾರೆ. ಬಿಜೆಪಿ ಅಭ್ಯರ್ಥಿ 30,846  ಮುನ್ನಡೆಯಲ್ಲಿ ಗೆಲುವು ತಮ್ಮದಾಗಿಸಿಕೊಂಡಿದ್ದಾರೆ.  

12:12 November 02

21 ನೇ ಸುತ್ತು ಮುಕ್ತಾಯಗೊಂಡಿದ್ದು, ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ ಬರೋಬ್ಬರಿ 88,744 ಮತಗಳನ್ನು ಪಡೆದರೆ, ಕಾಂಗ್ರೆಸ್​ನ  ಅಶೋಕ ಮನಗೂಳಿ 59,184 ಹಾಗೂ ಜೆಡಿಎಸ್ ಅಭ್ಯರ್ಥಿ ನಾಜಿಯಾ ಅಂಗಡಿ 4,028 ಮತಗಳನ್ನು ಪಡೆದಿದ್ದಾರೆ. ಇನ್ನು ಬಿಜೆಪಿ ಅಭ್ಯರ್ಥಿ 29,560  ಮತಗಳ ಮುನ್ನಡೆಯಲ್ಲಿದ್ದಾರೆ.  

12:04 November 02

ಕಾಂಗ್ರೆಸ್​ ಸೋಲು
ಕಾಂಗ್ರೆಸ್​ ಸೋಲು

20 ನೇ ಸುತ್ತಿನ ಮತ ಎಣೆಕೆ ಕಾರ್ಯ ನಡೆದಿದ್ದು, ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ 86,222, ಕಾಂಗ್ರೆಸ್​ನ ಅಶೋಕ ಮನಗೂಳಿ 57,760, ಜೆಡಿಎಸ್ ಅಭ್ಯರ್ಥಿ ನಾಜಿಯಾ ಅಂಗಡಿ 3,894 ಮತ ಗಳಿಸಿದ್ದಾರೆ. ಹಾಗೆ  ಬಿಜೆಪಿ ಅಭ್ಯರ್ಥಿ 28,462 ಮತಗಳ ಮುನ್ನಡೆಯಲ್ಲಿದ್ದಾರೆ. 

12:04 November 02

ಜೆಡಿಎಸ್​ ಸೋಲು
ಜೆಡಿಎಸ್​ ಸೋಲು

19 ನೇ ಸುತ್ತು ಮುಕ್ತಾಯಗೊಂಡಿದ್ದು, ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ 84,650 ಮತಗಳನ್ನು ಪಡೆದರೆ, ಕಾಂಗ್ರೆಸ್​ನ ಅಶೋಕ ಮನಗೂಳಿ 56,487, ಜೆಡಿಎಸ್ ಅಭ್ಯರ್ಥಿ ನಾಜಿಯಾ ಅಂಗಡಿ 3,729 ಮತ ಪಡೆದಿದ್ದಾರೆ.  ಬಿಜೆಪಿ ಅಭ್ಯರ್ಥಿ 28,163  ಭಾರೀ ಮುನ್ನಡೆಯಿಂದ ಗೆಲುವು ತಮ್ಮದಾಗಿಸಿಕೊಂಡಿದ್ದಾರೆ.  

11:54 November 02

ಠೇವಣಿ ಕಳೆದುಕೊಂಡ ಜೆಡಿಎಸ್​

ಇಲ್ಲಿಯವರೆಗೆ 1ಲಕ್ಷ 29ಸಾವಿರ ಮತಗಳ ಎಣಿಕೆಯಾಗಿದ್ದು, ಇನ್ನೂ 4 ಸುತ್ತಿನ ಮತ ಎಣಿಕೆ ನಡೆಯಬೇಕಾಗಿದೆ. ಜೆಡಿಎಸ್ ಅಭ್ಯರ್ಥಿ ನಾಜಿಯಾ ಅಂಗಡಿ ಠೇವಣಿ ಕಳೆದುಕೊಂಡಿದ್ದಾರೆ. 18 ನೇ ಸುತ್ತಿನಲ್ಲಿ  ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ 80,020, ಕಾಂಗ್ರೆಸ್​ನ ಅಶೋಕ ಮನಗೂಳಿ 52,637, ಜೆಡಿಎಸ್ ಅಭ್ಯರ್ಥಿ ನಾಜಿಯಾ ಅಂಗಡಿ 3,428 ಮತಗಳನ್ನು ಪಡೆದಿದ್ದಾರೆ. ಹಾಗೆ ಬಿಜೆಪಿ ಅಭ್ಯರ್ಥಿ 27,387 ಮತಗಳ ಮುನ್ನಡೆ  ಸಾಧಿಸಿದ್ದಾರೆ.  

11:49 November 02

ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ ಗೆಲುವು ಬಹುತೇಕ ಖಚಿತವಾಗಿದೆ. ಇವರ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್ ಅಭ್ಯರ್ಥಿ ಅಶೋಕ ಮನಗೂಳಿ ವಿರುದ್ಧ 24566 ಮತಗಳ ಅಂತರ ಹೆಚ್ಚಾಗಿದೆ. 

11:45 November 02

17ನೇ ಸುತ್ತಿನಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ 74,463, ಕಾಂಗ್ರೆಸ್​ನ ಅಶೋಕ ಮನಗೂಳಿ 49,897, ಜೆಡಿಎಸ್ ಅಭ್ಯರ್ಥಿ ನಾಜಿಯಾ ಅಂಗಡಿ 3,116 ಮತಗಳನ್ನು ಪಡೆದಿದ್ದು, ಬಿಜೆಪಿ ಅಭ್ಯರ್ಥಿ 24,566 ಮತಗಳ ಮುನ್ನಡೆಯಲ್ಲಿದ್ದಾರೆ.  

11:40 November 02

16  ನೇ ಸುತ್ತಿನಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ 68,444 ಮತಗಳನ್ನು ಪಡೆದಿದ್ದು,  ಕಾಂಗ್ರೆಸ್​​ನ ಅಶೋಕ ಮನಗೂಳಿ 47,683, ಜೆಡಿಎಸ್ ಅಭ್ಯರ್ಥಿ ನಾಜಿಯಾ ಅಂಗಡಿ 2,965 ಮತ ಪಡೆದಿದ್ದಾರೆ ಹಾಗೆ ಬಿಜೆಪಿ ಅಭ್ಯರ್ಥಿ 20,761 ಮತಗಳ ಮುನ್ನಡೆ ಸಾಧಿಸಿದ್ದಾರೆ. 

11:40 November 02

15 ನೇ ಸುತ್ತಿನಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ 63,676 ಮತ ಪಡೆದರೆ, ಕಾಂಗ್ರೆಸ್​ನ ಅಶೋಕ ಮನಗೂಳಿ 44,831, ಜೆಡಿಎಸ್ ಅಭ್ಯರ್ಥಿ ನಾಜಿಯಾ ಅಂಗಡಿ 2,834 ಮತ ಪಡೆದಿದ್ದಾರೆ. ಬಿಜೆಪಿ ಅಭ್ಯರ್ಥಿ 18,845 ಮತಗಳ ಮುನ್ನಡೆಯಲ್ಲಿದ್ದಾರೆ.  

11:20 November 02

14 ನೇ ಸುತ್ತಿನಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ 60,478, ಕಾಂಗ್ರೆಸ್​​ನ ಅಶೋಕ ಮನಗೂಳಿ 42,166, ಜೆಡಿಎಸ್​ನ ನಾಜಿಯಾ ಅಂಗಡಿ 2,736 ಮತ ಪಡೆದಿದ್ದಾರೆ. ಬಿಜೆಪಿ ಅಭ್ಯರ್ಥಿ 18,312 ಮತಗಳ ಮುನ್ನಡೆಯಲ್ಲಿದ್ದಾರೆ.  

11:14 November 02

13 ನೇ ಸುತ್ತಿನಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ 57,484, ಕಾಂಗ್ರೆಸ್​ನ ಅಶೋಕ ಮನಗೂಳಿ 38,611, ಜೆಡಿಎಸ್ ಅಭ್ಯರ್ಥಿ ನಾಜಿಯಾ ಅಂಗಡಿ 2,538 ಮತಗಳನ್ನು ಪಡೆದಿದ್ದಾರೆ. ಬಿಜೆಪಿ ಅಭ್ಯರ್ಥಿ 18,873 ಮತಗಳ ಮುನ್ನಡೆ ಸಾಧಿಸಿದೆ.  

11:06 November 02

12 ನೇ ಸುತ್ತು ಕೂಡ ಮುಕ್ತಾಯವಾಗಿದ್ದು,  ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ 54,406, ಕಾಂಗ್ರೆಸ್​​ನ ಅಶೋಕ ಮನಗೂಳಿ 34,688, ಜೆಡಿಎಸ್ ಅಭ್ಯರ್ಥಿ ನಾಜಿಯಾ ಅಂಗಡಿ 2,333 ಮತ ಪಡೆದಿದ್ದಾರೆ. ಬಿಜೆಪಿ ಅಭ್ಯರ್ಥಿ 19,718 ಮತಗಳ ಮುನ್ನಡೆಯಲ್ಲಿದ್ದಾರೆ.   

11:06 November 02

ಹನ್ನೊಂದನೇ ಸುತ್ತು ಮುಕ್ತಾಯಗೊಂಡಿದ್ದು, ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ 50,050, ಕಾಂಗ್ರೆಸ್​ನ ಅಶೋಕ ಮನಗೂಳಿ 31,473, ಜೆಡಿಎಸ್ ಅಭ್ಯರ್ಥಿ ನಾಜಿಯಾ ಅಂಗಡಿ 2,067 ಮತಗಳನ್ನು ಪಡೆದಿದ್ದಾರೆ. ಹಾಗೆ ಬಿಜೆಪಿ ಅಭ್ಯರ್ಥಿ 18,577 ಮುನ್ನಡೆ ಸಾಧಿಸಿದ್ದಾರೆ.   

10:55 November 02

10 ನೇ ಸುತ್ತಿನಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ 45,640,  ಕಾಂಗ್ರೆಸ್​ನ ಅಶೋಕ ಮನಗೂಳಿ 28,190, ಜೆಡಿಎಸ್ ಅಭ್ಯರ್ಥಿ ನಾಜಿಯಾ ಅಂಗಡಿ 1,607 ಮತ ಪಡೆದಿದ್ದಾರೆ. ಇನ್ನು  ಬಿಜೆಪಿ ಅಭ್ಯರ್ಥಿ 17,450 ಮತಗಳ ಮುನ್ನಡೆಯಲ್ಲಿದ್ದಾರೆ. 

10:41 November 02

9 ನೇ ಸುತ್ತಿನಲ್ಲಿ  ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ 41,398, ಕಾಂಗ್ರೆಸ್​ನ ಅಶೋಕ ಮನಗೂಳಿ 25,448, ಜೆಡಿಎಸ್ ಅಭ್ಯರ್ಥಿ ನಾಜಿಯಾ ಅಂಗಡಿ 1,498 ಮತ ಪಡೆದಿದ್ದಾರೆ. ಹಾಗೆ  ಬಿಜೆಪಿ ಅಭ್ಯರ್ಥಿ 15,950 ಮತಗಳ ಮುನ್ನಡೆ ಸಾಧಿಸಿದ್ದಾರೆ.  

10:32 November 02

8 ನೇ ಸುತ್ತಿನಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ 37,487,  ಕಾಂಗ್ರೆಸ್​ನ ಅಶೋಕ ಮನಗೂಳಿ 22,343, ಜೆಡಿಎಸ್ ಅಭ್ಯರ್ಥಿ ನಾಜಿಯಾ ಅಂಗಡಿ 1,328 ಮತಗಳನ್ನು ಗಳಿಸಿದ್ದಾರೆ. ಬಿಜೆಪಿ ಅಭ್ಯರ್ಥಿ 14,678 ಮತಗಳ ಮುನ್ನಡೆಯಲ್ಲಿದ್ದಾರೆ.  

10:25 November 02

13325 ಮತಗಳ ಅಂತರದಲ್ಲಿ ಬಿಜೆಪಿ ಅಭ್ಯರ್ಥಿ ಮುನ್ನಡೆ

ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ ಅವರು ಏಳನೇ  ಸುತ್ತಿನಲ್ಲಿ 32,487ಮತ,  ಕಾಂಗ್ರೆಸ್​ನ  ಅಶೋಕ ಮನಗೂಳಿ 19,162, ಜೆಡಿಎಸ್ ಅಭ್ಯರ್ಥಿ ನಾಜಿಯಾ ಅಂಗಡಿ 1,173 ಮತಗಳನ್ನು ಪಡೆದಿದ್ದಾರೆ. ಹಾಗೆ ಬಿಜೆಪಿ ಅಭ್ಯರ್ಥಿ 13,325 ಮತಗಳ ಮುನ್ನಡೆ ಸಾಧಿಸಿದ್ದಾರೆ.  

10:14 November 02

ಆರನೇ ಸುತ್ತಿನಲ್ಲಿ ಜೆಡಿಎಸ್ ಅಭ್ಯರ್ಥಿ ನಾಜಿಯಾ ಅಂಗಡಿಗೆ 941 ಮತ

ಆರನೇ ಸುತ್ತಿನಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ 27,791, ಕಾಂಗ್ರೆಸ್​​ನ ಅಶೋಕ ಮನಗೂಳಿ 16,160, ಜೆಡಿಎಸ್ ಅಭ್ಯರ್ಥಿ ನಾಜಿಯಾ ಅಂಗಡಿ 941 ಮತಗಳನ್ನು ಪಡೆದಿದ್ದು,  ಬಿಜೆಪಿ ಅಭ್ಯರ್ಥಿ 11,637 ಮತಗಳ ಮುನ್ನಡೆಯಲ್ಲಿದ್ದಾರೆ.  

10:03 November 02

ಐದನೇ ಸುತ್ತಿನ ಎಣಿಕೆ ಮುಕ್ತಾಯವಾಗಿದ್ದು, ಈ ಬಾರಿಯೂ ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ 23,314 ಮತಗಳನ್ನು ಪಡೆದರೆ,  ಕಾಂಗ್ರೆಸ್​ನ ಅಶೋಕ ಮನಗೂಳಿ 13,563, ಜೆಡಿಎಸ್ ಅಭ್ಯರ್ಥಿ ನಾಜಿಯಾ ಅಂಗಡಿ 710 ಮತಗಳನ್ನು ಪಡೆದಿದ್ದಾರೆ. ಇನ್ನು ಬಿಜೆಪಿ ಅಭ್ಯರ್ಥಿ 9,751 ಮತಗಳ ಮುನ್ನಡೆಯಲ್ಲಿದ್ದಾರೆ.  

09:45 November 02

ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ 7008 ಮತಗಳ ಮುನ್ನಡೆ

ನಾಲ್ಕನೇ ಸುತ್ತು ಸಹ ಮುಗಿದಿದ್ದು, ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ 18,235, ಕಾಂಗ್ರೆಸ್ ಅಭ್ಯರ್ಥಿ  ಅಶೋಕ ಮನಗೂಳಿ 11,227, ಜೆಡಿಎಸ್ ಅಭ್ಯರ್ಥಿ ನಾಜಿಯಾ ಅಂಗಡಿ 596 ಮತಗಳನ್ನು ಪಡೆದಿದ್ದು, ಬಿಜೆಪಿ ಅಭ್ಯರ್ಥಿ 7,008 ಮತಗಳ ಮುನ್ನಡೆಯಲ್ಲಿದ್ದಾರೆ.  

09:29 November 02

ಮೂರನೇ ಸುತ್ತಿನಲ್ಲೂ ಬಿಜೆಪಿ ಮುನ್ನಡೆ

ಕಾಂಗ್ರೆಸ್​ನ ಅಶೋಕ ಮನಗೂಳಿ
ಕಾಂಗ್ರೆಸ್​ನ ಅಶೋಕ ಮನಗೂಳಿ

ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ ಅವರು ಮೂರನೇ ಸುತ್ತಿನಲ್ಲೂ ಮುನ್ನಡೆ ಸಾಧಿಸಿದ್ದಾರೆ ಈ ಸುತ್ತಿನಲ್ಲಿ ಅವರು 13,081 , ಕಾಂಗ್ರೆಸ್​ನ ಅಶೋಕ ಮನಗೂಳಿ 8,231, ಜೆಡಿಎಸ್ ಅಭ್ಯರ್ಥಿ ನಾಜಿಯಾ ಅಂಗಡಿ 423 ಮತ ಪಡೆದಿದ್ದು, ಬಿಜೆಪಿ ಅಭ್ಯರ್ಥಿ 4,850 ಮತಗಳ ಮುನ್ನಡೆ ಸಾಧಿಸಿದ್ದಾರೆ.  

09:15 November 02

ಎರಡನೇ ಸುತ್ತಿನಲ್ಲೂ ಬಿಜೆಪಿ ಮೇಲುಗೈ

ಜೆಡಿಎಸ್ ಅಭ್ಯರ್ಥಿ ನಾಜಿಯಾ ಅಂಗಡಿಗೆ 282  ಮತ
ಜೆಡಿಎಸ್ ಅಭ್ಯರ್ಥಿ ನಾಜಿಯಾ ಅಂಗಡಿಗೆ 282 ಮತ

ಎರಡನೇ ಸುತ್ತಿನಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ 9,645, ಕಾಂಗ್ರೆಸ್​​ನ ಅಶೋಕ ಮನಗೂಳಿ 5,634, ಜೆಡಿಎಸ್ ಅಭ್ಯರ್ಥಿ ನಾಜಿಯಾ ಅಂಗಡಿ 282 ಮತ ಪಡೆದಿದ್ದಾರೆ. ಈ ಸುತ್ತಿನಲ್ಲಿಯೂ ಬಿಜೆಪಿ ಅಭ್ಯರ್ಥಿ ಮುನ್ನಡೆ ಸಾಧಿಸಿದ್ದಾರೆ.  

08:54 November 02

ಮೊದಲ ಸುತ್ತಿನ ಎಣಿಕೆ ಮುಕ್ತಾಯ
ಮೊದಲ ಸುತ್ತಿನ ಎಣಿಕೆ ಮುಕ್ತಾಯ

ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ 5,255, ಕಾಂಗ್ರೆಸ್​​ನ ಅಶೋಕ ಮನಗೂಳಿಗೆ 2,054, ಜೆಡಿಎಸ್ ಅಭ್ಯರ್ಥಿ ನಾಜಿಯಾ ಅಂಗಡಿಗೆ 73 ಮತ

08:34 November 02

ಕಾಂಗ್ರೆಸ್ ಹಿಂದಿಕ್ಕಿದ ಬಿಜೆಪಿ‌

ಕಾಂಗ್ರೆಸ್ ಅಭ್ಯರ್ಥಿ ಅಶೋಕ ಮನಗೂಳಿ ಹಿಂದಿಕ್ಕಿದ ಬಿಜೆಪಿ‌ ಅಭ್ಯರ್ಥಿ ರಮೇಶ ಭೂಸನೂರ, ಸದ್ಯ ಅಲ್ಪ ಮುನ್ನಡೆ . 

08:28 November 02

ಕಾಂಗ್ರೆಸ್ ಮುನ್ನಡೆ

ಮತದಾನ ಎಣಿಕೆ ಆರಂಭವಾಗಿದ್ದು ಮೊದಲ ಸುತ್ತಿನ ಮತ ಎಣಿಕೆಯಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಿದೆ

07:58 November 02

ಸ್ಟ್ರಾಂಗ್​ ರೂಮ್​ ತೆರೆದ ಜಿಲ್ಲಾಧಿಕಾರಿ, ಎಸ್​ಪಿ

ಸ್ಟ್ರಾಂಗ್​ ರೂಮ್​ ತೆರೆದ ಜಿಲ್ಲಾಧಿಕಾರಿ
ಸ್ಟ್ರಾಂಗ್​ ರೂಮ್​ ತೆರೆದ ಜಿಲ್ಲಾಧಿಕಾರಿ

ಸಿಂದಗಿ ಉಪ ಚುನಾವಣೆ ಫಲಿತಾಂಶ ಕೆಲವೇ ಕ್ಷಣಗಳಲ್ಲಿ ಹೊರಬೀಳಲಿದ್ದು, ವಿಜಯಪುರದ ಸೈನಿಕ ಶಾಲೆಯ ಒಡೆಯರ್​ ಸದನದಲ್ಲಿ ಭದ್ರತೆಯಲ್ಲಿ ಇಟ್ಟಿದ್ದ ಮತ ಪೆಟ್ಟಿಗೆಗಳನ್ನು ಬೆಳಗ್ಗೆ 7.30ಕ್ಕೆ ಜಿಲ್ಲಾಧಿಕಾರಿ ಪಿ.ಸುನೀಲಕುಮಾರ, ಎಸ್ಪಿ ಆನಂದಕುಮಾರ ನೇತೃತ್ವದಲ್ಲಿ ತೆರೆಯಲಾಯಿತು. ಮತ ಎಣಿಕೆ ಹಿನ್ನೆಲೆ ಸೈನಿಕ ಶಾಲೆ ಸುತ್ತಮುತ್ತ ಭಾರಿ ಪೊಲೀಸ್ ಬಂದೋಬಸ್ತ್​​ ನಿಯೋಜಿಸಲಾಗಿದೆ.

06:03 November 02

ಅಭ್ಯರ್ಥಿಗಳ ಹಣೆಬರಹ ಇಂದು ಬಹಿರಂಗ

ಸಿಂದಗಿ ಕ್ಷೇತ್ರದ ಮತ ಎಣಿಕೆಗೆ ಸಕಲ ಸಿದ್ಧತೆ
ಸಿಂದಗಿ ಕ್ಷೇತ್ರದ ಮತ ಎಣಿಕೆಗೆ ಸಕಲ ಸಿದ್ಧತೆ

ವಿಜಯಪುರದ ಸಿಂದಗಿ ಕ್ಷೇತ್ರದ ಮತ ಎಣಿಕೆ ಪ್ರಕ್ರಿಯೆ ಆರಂಭಗೊಂಡಿದೆ. ವಿಜಯಪುರ ನಗರದ ಸೈನಿಕ ಶಾಲೆಯ ಆವರಣದ ಒಡೆಯರ್ ಹೌಸ್​ನಲ್ಲಿ ಮತ ಎಣಿಕೆ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.  

ಈ  ವಿಧಾನಸಭಾ ಕ್ಷೇತ್ರಕ್ಕೆ ಅಕ್ಟೋಬರ್ 30 ರಂದು ಉಪಚುನಾವಣೆ ನಡೆದಿತ್ತು. ಬೆಳಿಗ್ಗೆ 7 ರಿಂದ ಸಂಜೆ 7 ಗಂಟೆ ವರೆಗೆ ಮತದಾನ ನಡೆದಿತ್ತು. ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಮೂರು ಪಕ್ಷಗಳು ಗೆಲ್ಲುವ ಪಣತೊಟ್ಟು ಭರ್ಜರಿ ಪ್ರಚಾರ ಮಾಡಿದ್ದವು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ನಳಿನ್ ಕುಮಾರ್ ಕಟೀಲ್, ಪ್ರಲ್ಹಾದ್ ಜೋಶಿ ಸೇರಿದಂತೆ ಅನೇಕ ಬಿಜೆಪಿ ನಾಯಕರು ಪ್ರಚಾರ ಕಣದಲ್ಲಿ ಪಾಲ್ಗೊಂಡಿದ್ದರು. ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಕಾಂಗ್ರೆಸ್ ಪರವಾಗಿ ಹಾಗೂ ಜೆಡಿಎಸ್ ಪರವಾಗಿ ಹೆಚ್​.ಡಿ. ಕುಮಾರಸ್ವಾಮಿ, ಹೆಚ್.ಡಿ. ದೇವೇಗೌಡ ಅದ್ಧೂರಿ ಪ್ರಚಾರ ಮಾಡಿದ್ದರು. ಮತಯಂತ್ರದಲ್ಲಿ 13 ಅಭ್ಯರ್ಥಿಗಳ ರಾಜಕೀಯ ಭವಿಷ್ಯ ಇಂದು ಲೆಕ್ಕಾಚಾರದಲ್ಲಿದ್ದು, ಹಣೆಬರಹ ಬಹಿರಂಗವಾಗಲಿದೆ.

ಸಿಂದಗಿ ಕ್ಷೇತ್ರದಲ್ಲಿ ಒಟ್ಟು 2,34,437 ಮತದಾರರಿದ್ದಾರೆ. 1,30,939 ಪುರುಷರು, 1,13,466 ಮಹಿಳೆಯರು ಹಾಗು 32 ಮಂದಿ ಇತರೆ ಮತದಾರರಿದ್ದಾರೆ. ಅವರಲ್ಲಿ 85,859 ಪುರುಷರು, 76,990 ಮಹಿಳೆಯರು ಹಾಗು 3 ಇತರೆ ಮತದಾರರು ಸೇರಿ ಒಟ್ಟು 1,62,852 ಮತದಾರರು ತಮ್ಮ ಮತ ಚಲಾಯಿಸಿದ್ದಾರೆ.‌

ಕಳೆದ ಬಾರಿಯ ಸಾರ್ವತ್ರಿಕ ಚುನಾವಣೆಯಲ್ಲಿ ಒಟ್ಟು 2,23,059 ಮತದಾರರಿದ್ದರು. ಅವರಲ್ಲಿ 1,15,455 ಪುರುಷರು, 1,07,604 ಮಹಿಳೆಯರು ಹಾಗು ಇತರೆ 33 ಮತದಾರರಿದ್ದರು. ಆ ಚುನಾವಣೆಯಲ್ಲಿ ಶೇ. 70.85 ಮತದಾನವಾಗಿತ್ತು.2018ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ರಮೇಶ ಭೂಸನೂರ ಜೆಡಿಎಸ್ ಅಭ್ಯರ್ಥಿ ಎಂ.ಸಿ.ಮನಗೂಳಿ ಎದುರು 9,305 ಮತಗಳ ಅಂತರದಿಂದ ಸೋಲು ಅನುಭವಿಸಿದ್ದರು. ಈ ಬಾರಿ ಮತ್ತೆ ಭೂಸನೂರ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.

ಕಳೆದ ಚುನಾವಣೆಯಲ್ಲಿ ಗೆದ್ದಿದ್ದ ಜೆಡಿಎಸ್ ಅಭ್ಯರ್ಥಿ ಎಂ.ಸಿ.ಮನಗೂಳಿ ಪುತ್ರ ಅಶೋಕ ಮನಗೂಳಿ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿ ಕಣದಲ್ಲಿದ್ದಾರೆ. ಹೊಸ ಅಭ್ಯರ್ಥಿಯಾಗಿ ಜೆಡಿಎಸ್​​ನಿಂದ ಅಲ್ಪಸಂಖ್ಯಾತ ಮಹಿಳೆ ನಾಜಿಯಾ ಅಂಗಡಿ ಕಣದಲ್ಲಿದ್ದಾರೆ.

Last Updated : Nov 2, 2021, 5:14 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.