ETV Bharat / state

ಮಂಜೂರಾದ ಮನೆಗಳಿಗೆ ಹಣ ಬಿಡುಗಡೆ ಮಾಡಿ: ವಿಜಯಪುರ ಜಿಲ್ಲಾಡಳಿತಕ್ಕೆ ಮನವಿ ಮನವಿ

author img

By

Published : Jan 22, 2020, 5:52 PM IST

ವಿಜಯಪುರದ ಬೇನಾಳ ಆರ್​.ಎಸ್ ಗ್ರಾಮ ಪಂಚಾಯತ್​ ವ್ಯಾಪ್ತಿಯ ಬಡವರಿಗೆ ಅಂಬೇಡ್ಕರ್ ಹೆಸರಿನಲ್ಲಿ ಮಂಜೂರಾದ ನಿರ್ಮಾಣವಾಗುತ್ತಿರುವ ಮನೆಗಳಿಗೆ ಹಣ ಬಿಡುಗಡೆ ಮಾಡುವಂತೆ ಗ್ರಾಮಸ್ಥರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

vijaypura
ಗ್ರಾಮಸ್ಥರು ಜಿಲ್ಲಾಧಿಕಾರಿಗೆ ಮನವಿ

ವಿಜಯಪುರ: ಜಿಲ್ಲೆಯ ಬೇನಾಳ ಆರ್​.ಎಸ್ ಗ್ರಾಮ ಪಂಚಾಯತ್​ ವ್ಯಾಪ್ತಿಯ ಬಡವರಿಗೆ ಅಂಬೇಡ್ಕರ್ ಹೆಸರಿನಲ್ಲಿ ಮಂಜೂರಾದ ನಿರ್ಮಾಣವಾಗುತ್ತಿರುವ ಮನೆಗಳಿಗೆ ಹಣ ಬಿಡುಗಡೆ ಮಾಡುವಂತೆ ಗ್ರಾಮಸ್ಥರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಅಂಬೇಡ್ಕರ್ ವಸತಿ ಯೋಜನೆಯಡಿ ಮಂಜೂರಾದ ಮನೆಗಳಿಗೆ ಹಣ ಬಿಡುಗಡೆ ಮಾಡುವಂತೆ ಗ್ರಾಮಸ್ಥರಿಂದ ಮನವಿ.

ಅಂಬೇಡ್ಕರ್ ವಸತಿ ಯೋಜನೆಯಡಿಯಲ್ಲಿ ಬೇನಾಳ ಪಂಚಾಯತ್​ ವ್ಯಾಪ್ತಿಗೆ ಬರುವ ಮೂರ್ನಾಲ್ಕು ಹಳ್ಳಿಗಳಿಗೆ 180ಕ್ಕೂ ಅಧಿಕ ಮನೆಗಳು ಕಳೆದ ವರ್ಷ ಮಂಜೂರಾಗಿವೆ. ಇನ್ನು ಫಲಾನುಭವಿಗಳು ಮನೆಗಳ ಕಟ್ಟಡ ಪ್ರಾರಂಭಿಸಿದ್ದರೂ ಇದುವರೆಗೆ ಸಂಬಂಧಿಸಿದ ಅಧಿಕಾರಿಗಳು ಒಂದು ವರ್ಷವಾದರೂ ಹಣ ಬಿಡುಗಡೆ ಮಾಡಿಲ್ಲ ಎಂದು ಗ್ರಾಮಸ್ಥರು ಅಧಿಕಾರಿಗಳ ವಿರುದ್ಧ ಕಿಡಿಕಾರಿದರು.

ಇನ್ನು ಮನೆಗಳ ನಿರ್ಮಾಣಕ್ಕೆ ಫಲಾನುಭವಿಗಳು ಹಣ ಹಾಕಿ‌ ಮನೆಗಳ‌ ನಿರ್ಮಾಣಕ್ಕೆ ಮುಂದಾಗುತ್ತಿದ್ದಾರೆ.‌ ಕೆಲವರು ಹಣ ಮಂಜೂರಾಗದ ಕಾರಣ ಕಟ್ಟಡ ಕಾಮಗಾರಿ ಅರ್ಧಕ್ಕೆ ನಿಲ್ಲಿಸವಂತ ಪರಿಸ್ಥಿತಿ ಬಂದಿದೆ. ಇತ್ತ ಅಧಿಕಾರಿಗಳು ಮನೆಗಳ ಜಿಪಿಎಸ್ ನೋಂದಣಿಗೆ ಮುಂದಾಗಿಲ್ಲ.

ಇನ್ನಾದರೂ ತಕ್ಷಣವೇ ಮನೆ ನಿರ್ಮಾಣಕ್ಕೆ ಹಣ ಬಿಡುಗಡೆ ಮಾಡುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿಗಳಿಗೆ ಗ್ರಾಮಸ್ಥರು ಮನವಿ ಸಲ್ಲಿಸಿದರು.

Intro:ವಿಜಯಪುರ: ಬೇನಾಳ ಆರ್ ಎಸ್ ಗ್ರಾಮ ಪಂಚಾಯತ ವ್ಯಾಪ್ತಿ ಬಡವರಿಗೆ ಮಂಜೂರಾದ ಅಂಬೇಡ್ಕರ್ ಹೆಸರಿನಲ್ಲಿ ನಿರ್ಮಾಣವಾಗುತ್ತಿರುವ ಮನೆಗಳಿಗೆ ಸರಿ ಬಿಡುಗಡೆ ಮಾಡುವಂತೆ ಗ್ರಾಮಸ್ಥರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.



Body:ಅಂಬೇಡ್ಕರ್ ವಸತಿ ಯೋಜಯಲ್ಲಿ ಬೇನಾಳ ಪಂಚಾಯತ ವ್ಯಾಪ್ತಿ್ಗೆಗೆ ಬರುವ ಮೂರ್ನಾಲ್ಕು ಹಳ್ಳಿಗಳಿಗೆ 180 ಅಧಿಕ ಕಳೆದ ವರ್ಷ ಮನೆಗಳು ಮಂಜೂರಾಗಿವೆ ಫಲಾನುಭವಿಗಳು ಮನೆಗಳು ಕಟ್ಟಡ ಪ್ರಾರಂಭಿದ್ರೂ ಇದುವರಿಗೆ ಸಂಭಂದಿಸಿದ ಅಧಿಕಾರಿಗಳು ಒಂದು ವರ್ಷವಾದ್ರೂ ಹಣ ಫಲಾನುಭವಿಗಳಿಗೆ ಹಣ ಬಿಡುಗಡೆ ಮಾಡಿಕೊಂಡಿಲ್ಲ ಎಂದು ಗ್ರಾಮಸ್ಥರು ಅಧಿಕಾರಿಗಳ ವಿರುದ್ಧ ಕಿಡಿಕಾರಿದರು.


Conclusion:ಇನ್ನೂ ಮನೆಗಳ ನಿರ್ಮಾಣಕ್ಕೆ ಫಲಾನುಭವಿಗಳು ಹಣ ಹಾಕಿ‌ ಮನೆಗಳ‌ ನಿರ್ಮಾಣಕ್ಕೆ ಮುಂದಾಗುತ್ತಿದ್ದಾರೆ‌ ಕೆಲವರು ಹಣ ಮಂಜೂರಾಗದ ಕಾರಣ ಕಟ್ಟಡ ಕಾಮಗಾರಿ ಅರ್ಧಕ್ಕೆ ನಿಲ್ಲಿಸವಂತಾಗಿದೆ. ಇತ್ತ ಅಧಿಕಾರಿಗಳು ಮನೆಗಳ ಜಿಪಿಎಸ್ ನೋಂದಣಿಗೆ ಮುಂದಾಗಿಲ್ಲ ತಕ್ಷಣವೇ ಹಣ ಬಿಡುಗಡೆ ಮಾಡುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು..

ಬೈಟ್: ಬಸವರಾಜ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.