ETV Bharat / state

ವಿಜಯಪುರ ಜಿಲ್ಲೆಯಲ್ಲಿ ಮಳೆಯಿಂದ ನೆಲಕಚ್ಚಿದ ಕಬ್ಬಿನ ಬೆಳೆ: ಸಂಕಷ್ಟದಲ್ಲಿ ರೈತ

author img

By

Published : Oct 15, 2020, 8:03 AM IST

ಕಳೆದ ಮೂರ್ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆ, ಗಾಳಿಯ ಪರಿಣಾಮ ಕಬ್ಬಿನ ಬೆಳೆ ಸಂಪೂರ್ಣವಾಗಿ ನೆಲಕಚ್ಚಿದ್ದು, ಕಬ್ಬು ಬೆಳೆದ ರೈತರು ಕಂಗಾಲಾಗಿದ್ದಾರೆ.

Rain effect Sugarcane crop destruction in Vijayapura district
ಮಳೆಯಿಂದ ನೆಲಕ್ಕಚಿದ ಕಬ್ಬಿನ ಬೆಳೆ

ವಿಜಯಪುರ: ನಿರಂತರವಾಗಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಕಟಾವಿಗೆ ಬಂದ ಕಬ್ಬಿನ ಬೆಳೆ ನೆಲಸಮಗೊಂಡ ಘಟನೆ ಇಂಡಿ ತಾಲೂಕಿನ ವಾಡೇ ಗ್ರಾಮದಲ್ಲಿ ನಡೆದಿದೆ.

ಮಳೆಯಿಂದ ನೆಲಕಚ್ಚಿದ ಕಬ್ಬಿನ ಬೆಳೆ

ಕಳೆದ ಮೂರ್ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆ, ಗಾಳಿಯ ಪರಿಣಾಮ 3 ಎಕರೆ ಪ್ರದೇಶದಲ್ಲಿನ ಕಬ್ಬಿನ ಬೆಳೆ ಸಂಪೂರ್ಣವಾಗಿ ನೆಲಕಚ್ಚಿದ್ದು, ಕಬ್ಬು ಬೆಳೆದ ರೈತರು ಕಂಗಾಲಾಗಿದ್ದಾರೆ. ವಾಡೇ ಗ್ರಾಮದ ರೈತ ಪಂಡಿತ ನಾಗಪ್ಪ ಅವಟಿ ಎಂಬುವರಿಗೆ ಸೇರಿದ ಬೆಳೆಯಾಗಿದ್ದು, ಸಾಲ ಸೂಲ ಮಾಡಿ ವರ್ಷವಿಡೀ ಬೆಳೆದ ಬೆಳೆ ನೆಲಕ್ಕೆ ಉರಳಿದ್ದು ರೈತನ ಆತಂಕಕ್ಕೆ ಕಾರಣವಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.