ETV Bharat / state

ಆಶಾ ಕಾರ್ಯಕರ್ತೆಯರ ಪ್ರೊಟೆಸ್ಟ್​​ : ಪಿಡಿಓಗಳ ಮುಖಾಂತರ ಸಿಎಂಗೆ ಮನವಿ ಪತ್ರ

author img

By

Published : Jul 13, 2020, 10:56 PM IST

12 ಸಾವಿರ ರೂ. ವೇತನದ ಜೊತೆಗೆ ಕೆಲಸದ ವೇಳೆ ರಕ್ಷಣಾ ಸಾಮಗ್ರಿ ವಿತರಿಸಬೇಕೆಂದು ಆಗ್ರಹಿಸಿ ಮುದ್ದೇಬಿಹಾಳದ ಪಂಚಾಯಿತಿ ಪಿಡಿಓಗಳ ಮುಖಾಂತರ ಸಿಎಂಗೆ ಆಶಾ ಕಾರ್ಯಕರ್ತೆಯರು ಮನವಿ ಪತ್ರ ಸಲ್ಲಿಸಿದರು.

ಪಿಡಿಓಗಳ ಮುಖಾಂತರ ಸಿಎಂಗೆ ಮನವಿ ಪತ್ರ
ಪಿಡಿಓಗಳ ಮುಖಾಂತರ ಸಿಎಂಗೆ ಮನವಿ ಪತ್ರ

ಮುದ್ದೇಬಿಹಾಳ: ಜೀವದ ಹಂಗು ತೊರೆದು ಕೋವಿಡ್-19 ವಾರಿಯರ್ಸ್​ಗಳಾಗಿ ಸೇವೆ ಸಲ್ಲಿಸುತ್ತಿರುವ ಆಶಾ ಕಾರ್ಯಕರ್ತೆಯರಿಗೆ 12 ಸಾವಿರ ವೇತನ ಜೊತೆಗೆ ಕೆಲಸದ ವೇಳೆ ರಕ್ಷಣಾ ಸಾಮಗ್ರಿ ವಿತರಿಸಬೇಕು ಎಂದು ಆಗ್ರಹಿಸಿ, ತಾಲೂಕಿನ ವಿವಿಧ ಗ್ರಾಪಂಗಳ ವ್ಯಾಪ್ತಿಯಲ್ಲಿ ಆಶಾ ಕಾರ್ಯಕರ್ತೆಯರು ಪ್ರತಿಭಟನೆ ನಡೆಸಿದರು. ಅಲ್ಲದೇ ಆಯಾ ಪಂಚಾಯಿತಿ ಪಿಡಿಓಗಳ ಮುಖಾಂತರ ಸಿಎಂಗೆ ಮನವಿ ಪತ್ರ ಸಲ್ಲಿಸಿದರು.

ಪಿಡಿಓಗಳ ಮುಖಾಂತರ ಸಿಎಂಗೆ ಮನವಿ ಪತ್ರ
ಪಿಡಿಓಗಳ ಮುಖಾಂತರ ಸಿಎಂಗೆ ಮನವಿ ಪತ್ರ

ತಾಲೂಕಿನ ಹಿರೇಮುರಾಳದ ಪಂಚಾಯಿತಿ ಎದುರಿಗೆ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದ ಕಾರ್ಯಕರ್ತೆಯರು, ತಮಗೆ ಜೀವನ ಭದ್ರತೆ ಹಾಗೂ ಯಾವುದೇ ಹೆಚ್ಚಿನ ವೇತನ ಇರುವುದಿಲ್ಲ. ಜು.10 ರಿಂದಲೇ ಸೇವೆ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸುತ್ತಿದ್ದರೂ, ಈವರೆಗೆ ಸರ್ಕಾರ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ದೂರಿದರು.

ಪಿಡಿಓ ಸಂಗಯ್ಯ ಸಾರಂಗಮಠ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಈ ವೇಳೆ ಸರೋಜಿನಿ ನಾವದಗಿ,ರೇಣುಕಾ ಚಲವಾದಿ, ಶಕುಂತಲಾ ಬಿರಾದಾರ, ಸುಜಾತಾ ಬಿರಾದಾರ,ಬೇಬಿ ನಾಗಬೇನಾಳ,ರೇಣುಕಾ ಗೌಡರ,ಯಲ್ಲಮ್ಮ ಮಾದರ ಮತ್ತಿತರರು ಇದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.