ವಿಜಯಪುರ : ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದ ಬಳಿ ಹೊರ ಗುತ್ತಿಗೆ ನೌಕರರು ಅಹೊರಾತ್ರಿ ಧರಣಿ ಆರಂಭಿಸಿದ್ದಾರೆ.
ಹೊರ ಗುತ್ತಿಗೆ ನೌಕರರ ಸಂಬಳ ಕಳೆದ 9 ತಿಂಗಳಿನಿಂದ ನೀಡಿಲ್ಲ. ಇದರ ಜೊತೆಗೆ ಪಿಎಫ್ ಹಾಗೂ ಇಎಸ್ಐ ಸೌಲಭ್ಯ ನೀಡಬೇಕು ಎಂದು ಆಗ್ರಹಿಸಿದರು. ಪ್ರತಿಭಟನಾ ಸ್ಥಳದಲ್ಲಿಯೇ ಮಹಿಳಾ ಪ್ರತಿಭಟನಾಕಾರರು ಅಡುಗೆ ಮಾಡಿದರೂ, ಎಲ್ಲರೂ ಸೇರಿ ಸ್ಥಳದಲ್ಲಿಯೇ ಊಟ ಮಾಡಿ ಜಿಪಂ ಸಭಾಂಗಣ ಬಳಿ ನಿದ್ರೆ ಮಾಡಿ ಸರ್ಕಾರದ ವಿರುದ್ಧ ವಿನೂತನವಾಗಿ ಪ್ರತಿಭಟನೆ ನಡೆಸಿದರು.
ನೇರ ನೇಮಕಾತಿ ಮಾಡಿಕೊಂಡವರ ಜೊತೆಗೆ ಹೊರ ಗುತ್ತಿಗೆ ನೌಕರರನ್ನೂ ಮುಂದುವರೆಸಬೇಕು. ಹೀಗೆ ವಿವಿದ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಧರಣಿ ಮುಂದುವರೆಸಿದ್ದಾರೆ. ಚಳಿಯಲ್ಲೂ ಕೂಡಾ ಪ್ರತಿಭಟನಾ ಸ್ಥಳದಲ್ಲೇ ಮಲಗುವುದಾಗಿ ಪ್ರತಿಭಟನಾಕಾರರು ತಿಳಿಸಿದ್ದಾರೆ.