ETV Bharat / state

ವಿಜಯಪುರ ಕಾಂಗ್ರೆಸ್ ಕಚೇರಿಗೆ ವೀರ ಸಾವರ್ಕರ್ ಫೋಟೋ ಅಂಟಿಸಿ ಕಿಡಿಗೇಡಿಗಳು ಪರಾರಿ

author img

By

Published : Aug 22, 2022, 12:19 PM IST

ವಿಜಯಪುರದಲ್ಲಿ‌ ವೀರ ಸಾವರ್ಕರ್ ವಿವಾದ ತಾರಕಕ್ಕೇರಿದೆ. ಜಿಲ್ಲಾ ಕಾಂಗ್ರೆಸ್ ಕಚೇರಿಯ ಗೋಡೆ, ಬಾಗಿಲಿಗೆ ಸಾವರ್ಕರ್ ಫೋಟೋ ಅಂಟಿಸಿ ಕಿಡಿಗೇಡಿಗಳು‌‌ ಪರಾರಿಯಾಗಿದ್ದಾರೆ.

savarkar photo
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ರಾಜು ಆಲಗೂರ

ವಿಜಯಪುರ: ರಾಜ್ಯದ ಹಲವೆಡೆ ಬಿಜೆಪಿ ಹಾಗೂ ಕಾಂಗ್ರೆಸ್​ ಕಾರ್ಯಕರ್ತರ ನಡುವಿನ ಬ್ಯಾನರ್​, ಫ್ಲೆಕ್ಸ್​ ಗಲಾಟೆಗಳು ಮುಂದುವರೆದಿದೆ. ಇದೀಗ ವಿಜಯಪುರ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ವೀರ ಸಾವರ್ಕರ್ ಫೋಟೋ ಅಂಟಿಸಿ ಕಿಡಿಗೇಡಿಗಳು ಪರಾರಿಯಾಗಿದ್ದಾರೆ. ತಡರಾತ್ರಿ ಹತ್ತಾರು ಸಾವರ್ಕರ್ ಫೋಟೋಗಳನ್ನು ವಿಜಯಪುರ ಜಿಲ್ಲಾ ಕಾಂಗ್ರೆಸ್ ಕಚೇರಿಯ ಗೋಡೆ, ಬಾಗಿಲಿಗೆ ಅಂಟಿಸಿ ಕಿಡಿಗೇಡಿಗಳು‌‌ ಪರಾರಿಯಾಗಿದ್ದಾರೆ.

ವಿಜಯಪುರದಲ್ಲಿ‌ ತಾರಕಕ್ಕೇರಿದ ವೀರ ಸಾವರ್ಕರ್ ವಿವಾದ

ಇದನ್ನೂ ಓದಿ: ಎಂ ಬಿ ಪಾಟೀಲ ಭೇಟಿ ಹಿನ್ನೆಲೆ ಸಾವರ್ಕರ್​​ ಬ್ಯಾನರ್​ ಹಾಕಿದ ಬಿಜೆಪಿ ಕಾರ್ಯಕರ್ತರು ಪೊಲೀಸ್​ ವಶಕ್ಕೆ

ಈ ಕುರಿತು ಪ್ರತಿಕ್ರಿಯೆ ನೀಡಿರುವ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ರಾಜು ಆಲಗೂರ, ಕೂಡಲೇ ಆರೋಪಿಗಳನ್ನು ಬಂಧಿಸಬೇಕು, ಇಲ್ಲವಾದ್ರೆ ಬಿಜೆಪಿ ಕಚೇರಿಗೆ ನಮ್ಮ ಕಾರ್ಯಕರ್ತರು ಟಿಪ್ಪು ಸುಲ್ತಾನ್ ಫೋಟೋ ಅಂಟಿಸುತ್ತಾರೆ ಎಂದು ಎಚ್ಚರಿಕೆ ನೀಡಿದರು.

ಇದನ್ನೂ ಓದಿ: ಏರಿಯಾಗಳಲ್ಲಿ, ನಗರ ಪ್ರದೇಶಗಳಲ್ಲಿ ಸಾವರ್ಕರ್ ಫ್ಲೆಕ್ಸ್ ಅಳವಡಿಸುತ್ತೇವೆ.. ಕಾಂಗ್ರೆಸ್ ನಾಯಕರಿಗೆ ರೇಣುಕಾಚಾರ್ಯ ಸವಾಲು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.