ETV Bharat / state

ಮದುವೆಯಾಗಿ ನಾಲ್ಕೇ ತಿಂಗಳಿಗೆ ಲಾರಿ ಹರಿದು ವ್ಯಕ್ತಿ ಸಾವು: ವಿಜಯಪುರದಲ್ಲಿ ದುರಂತ - ವಿಡಿಯೋ

author img

By

Published : Dec 9, 2020, 12:47 PM IST

Updated : Dec 9, 2020, 1:11 PM IST

ಬೈಕ್​ ಸವಾರನ ಮೇಲೆ ಲಾರಿ ಹರಿದು ಸವಾರ ಸಾವನ್ನಪ್ಪಿರುವ ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ನಾಲ್ಕು ತಿಂಗಳ ಹಿಂದೆಯಷ್ಟೇ ದಾಂಪತ್ಯಕ್ಕೆ ಕಾಲಿಟ್ಟಿದ್ದ ವ್ಯಕ್ತಿ ಅಕಾಲಿಕವಾಗಿ ದುರ್ಮರಣಕ್ಕೀಡಾಗಿರುವ ಈ ಘಟನೆ ವಿಜಯಪುರ ಜಿಲ್ಲೆಯಲ್ಲಿ ಸಂಭವಿಸಿದೆ.

Lorry hits bike: Bike rider dies on spot
ಮುದುವೆಯಾಗಿ ನಾಲ್ಕೇ ತಿಂಗಳಿಗೆ ಲಾರಿ ಹರಿದು ವ್ಯಕ್ತಿ ಸಾವು...

ವಿಜಯಪುರ: ನಗರದ ಇಂಡಸ್ಟ್ರಿಯಲ್ ಏರಿಯಾದಲ್ಲಿ ಲಾರಿ ಹರಿದ ಪರಿಣಾಮ ಬೈಕ್​ ಸವಾರ ಸಾವನ್ನಪ್ಪಿದ್ದಾರೆ. ಈ ಘಟನೆಯ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಮುದುವೆಯಾಗಿ ನಾಲ್ಕೇ ತಿಂಗಳಿಗೆ ಲಾರಿ ಹರಿದು ವ್ಯಕ್ತಿ ಸಾವು: ವಿಜಯಪುರದಲ್ಲಿ ದುರಂತ

ಬೈಕ್ ಸವಾರ ಶಶಿಧರ ಕಮತಗಿ ಸಾವನ್ನಪ್ಪಿರುವ ವ್ಯಕ್ತಿ. ಈತ ವಿಜಯಪುರ ತಾಲೂಕಿನ ಮಧಬಾವಿ ನಿವಾಸಿ. ಮೃತನಿಗೆ ಮದುವೆಯಾಗಿ ಕೇವಲ 4 ತಿಂಗಳು ಕಳೆದಿತ್ತು. ಶಶಿಧರ ಇದೇ ಇಂಡಸ್ಟ್ರಿಯಲ್ ಏರಿಯಾದಲ್ಲಿ ಕೆಲಸ ಮಾಡುತ್ತಿದ್ದರು. ಈತ ಪ್ರತಿದಿನ ಬೈಕ್ ಮೇಲೆ ಮಧಬಾವಿ ಗ್ರಾಮಕ್ಕೆ ಹೋಗಿ ಬರುತ್ತಿದ್ದರು ಎಂದು ತಿಳಿದು ಬಂದಿದೆ.

ವಿಜಯಪುರ ಎಪಿಎಂಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Last Updated : Dec 9, 2020, 1:11 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.