ETV Bharat / state

ಐತಿಹಾಸಿಕ ಕಟ್ಟಡ ಇಬ್ರಾಹಿಂ ರೋಜಾದ ತಡೆಗೋಡೆ ಕುಸಿತ

author img

By

Published : Oct 15, 2020, 9:39 AM IST

ಕಳೆದ ಎರಡು-ಮೂರು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಐತಿಹಾಸಿಕ ಸ್ಮಾರಕ ಇಬ್ರಾಹಿಂ ರೋಜಾ ದ ತಡೆಗೋಡೆ ಕುಸಿದಿದೆ.

Ibrahim Roja Memorial Barrier Collapse
ಇಬ್ರಾಹಿಂ ರೋಜಾ ಸ್ಮಾರಕದ ತಡೆಗೋಡೆ ಕುಸಿತ

ವಿಜಯಪುರ: ನಿನ್ನೆ ಸಂಜೆ ಇದ್ದಕ್ಕಿದ್ದಂತೆ ಇಬ್ರಾಹಿಂ ರೋಜಾ ಕಟ್ಟಡದ ರಕ್ಷಣೆಗೆ ಕಟ್ಟಿದ್ದ ತಡೆಗೋಡೆ ನೆಲಕ್ಕಚ್ಚಿದೆ. ಗೋಡೆ ಪಕ್ಕದಲ್ಲಿ ನಿಂತಿದ್ದ ಓಮಿನಿ ವಾಹನದ ಮೇಲೆ ಕಲ್ಲುಗಳು ಬಿದ್ದಿವೆ ಎಂಬ ಮಾಹಿತಿ ಇದೆ.

ಇಬ್ರಾಹಿಂ ರೋಜಾ ಸ್ಮಾರಕದ ತಡೆಗೋಡೆ ಕುಸಿತ

ಕಾಂಪೌಂಡ್ ಪಕ್ಕದ ಎರಡು ವಿದ್ಯುತ್ ಕಂಬಗಳು ವಾಲಿದ್ದು ಹೆಸ್ಕಾಂ ಅಧಿಕಾರಿಗಳ ಸಮಯ ಪ್ರಜ್ಞೆಯಿಂದ ಕಂಬಗಳು ವಾಲುತ್ತಿದ್ದಂತೆ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ.

ತಡೆಗೋಡೆ ಪಕ್ಕದಲ್ಲಿ ಜನರು ಸಂಚರಿಸದಂತೆ ಪಕ್ಕದ ರಸ್ತೆಗೆ ಕಲ್ಲು ಹಾಕಲಾಗಿದೆ. ಘಟನೆಯಿಂದ ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.