ಮಹಾರಾಷ್ಟ್ರದಲ್ಲಿ ಉತ್ತಮ ಮಳೆ: ರಾಜ್ಯದ ಭೀಮಾನದಿ ತೀರದಲ್ಲಿ ಪ್ರವಾಹ ಭೀತಿ

author img

By

Published : Sep 18, 2022, 12:52 PM IST

Flood threat in Bhima River

ಚಡಚಣ, ಇಂಡಿ ಹಾಗೂ ಆಲಮೇಲ ತಾಲೂಕುಗಳಲ್ಲಿ ಪ್ರವಾಹದ ಆತಂಕ ಎದುರಾಗಿದೆ. ಭೀಮಾನದಿಯಲ್ಲಿನ ಮಹಾರಾಷ್ಟ್ರ ಹಾಗೂ ಕರ್ನಾಟಕದ ಸಮಾನಾಂತರದ ಏಳು ಬ್ಯಾರೇಜ್ ಕಂ ಬ್ರಿಡ್ಜ್​ಗಳು ಮುಳುಗಡೆಯಾಗಿವೆ.

ವಿಜಯಪುರ: ನೆರೆಯ ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಮಳೆಯಿಂದ ತುಂಬಿ ಹರಿಯುತ್ತಿರುವ ಮಹಾರಾಷ್ಟ್ರದ ಉಜನಿ‌ ಹಾಗೂ ವೀರ್ ಜಲಾಶಯಗಳಿಂದ ಭೀಮಾ ನದಿಗೆ 1,16,000 ಕ್ಯೂಸೆಕ್ ನೀರು‌ ಬಿಡುಗಡೆ ಮಾಡಲಾಗಿದೆ. ಹೀಗಾಗಿ, ಗಡಿಭಾಗ ವಿಜಯಪುರ ಜಿಲ್ಲೆಯ ನದಿ ತಟದಲ್ಲಿ ಮತ್ತೊಮ್ಮೆ ಪ್ರವಾಹ ಭೀತಿ ಎದುರಾಗಿದೆ.

ಭೀಮಾನದಿಯಲ್ಲಿ ಪ್ರವಾಹ ಭೀತಿ

ಚಡಚಣ, ಇಂಡಿ ಹಾಗೂ ಆಲಮೇಲ ತಾಲೂಕುಗಳಲ್ಲಿ ಪ್ರವಾಹದ ಆತಂಕ ಎದುರಾಗಿದೆ. ಮಹಾರಾಷ್ಟ್ರ ಹಾಗೂ ಕರ್ನಾಟಕದ ಸಮಾನಾಂತರದ 7 ಬ್ಯಾರೇಜ್ ಕಂ ಬ್ರಿಡ್ಜ್​ಗಳು ಮುಳುಗಡೆಯಾಗಿವೆ. ಗೋವಿಂದಪುರ್-ಬಂಡಾರಕವಟೆ, ಉಮರಾಣಿ - ಲವಂಗಿ, ಔಜ್‌‌ - ಶಿರನಾಳ, ಹಿಂಗಣಿ - ಆಳಗಿ, ಖಾನಾಪೂರ - ಪಡನೂರ, ಹಿಳ್ಳಿ - ಗುಬ್ಬೇವಾಡ, ಚಣೇಗಾಂವ್ - ಬರೂರು ಬಾಂದಾರ್​ಗಳು ಮುಳುಗಡೆಯಾಗಿವೆ.

ಉಭಯ ರಾಜ್ಯಗಳ ಸಂಪರ್ಕ ಕೊಂಡಿಯಾಗಿದ್ದ ಬಾಂದಾರ್​ಗಳು ತುಂಬಿ ಹರಿಯುತ್ತಿದ್ದು ವಾಹನ, ಜನ ಸಂಚಾರ ಸ್ಥಗಿತವಾಗಿದೆ. ನದಿತೀರದ ಗ್ರಾಮಗಳ ಜನರು ಸುರಕ್ಷತೆ ವಹಿಸುವಂತೆ ಜಿಲ್ಲಾಡಳಿತ ಮನವಿ ಮಾಡಿದೆ.

ಇದನ್ನೂ ಓದಿ: ಉಜನಿ ಜಲಾಶಯದಿಂದ ಭೀಮಾ ನದಿಗೆ ಅಪಾರ ಪ್ರಮಾಣದ ನೀರು: ಕಲಬುರಗಿಗೆ ಪ್ರವಾಹ ಭೀತಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.