ETV Bharat / state

ಡಾನ್ಸ್ ವಿಚಾರಕ್ಕೆ ಯುವಕರ ಮಧ್ಯೆ ಮಾರಾಮಾರಿ... ದೃಶ್ಯ ಸಿಸಿಟಿವಿಯಲ್ಲಿ ಸೆರೆ: VIDEO

author img

By

Published : Oct 8, 2019, 10:22 AM IST

ವಿಜಯಪುರದ ಪಾರಕ ನಗರದಲ್ಲಿ ಎರಡು ಬೈಕ್​ ಮೇಲೆ ಕೈಯಲ್ಲಿ ದೊಣ್ಣೆ, ತಲ್ವಾರ್​​​ ಹಿಡಿದು ಬಂದ ಯುವಕರು ಗಲಾಟೆ ನಡೆಸಿದ್ದು, ಜಗಳ ಬಿಡಿಸಲು ಬಂದವರ ಮೇಲೆ ಹಲ್ಲೆ ನಡೆಸಲಾಗಿದೆ.

ಯುವಕರ ಮಧ್ಯೆ ಮಾರಾಮಾರಿ

ವಿಜಯಪುರ: ನವರಾತ್ರಿ ಹಬ್ಬದ ಹಿನ್ನೆಲೆ ಬಡಾವಣೆಯೊಂದರಲ್ಲಿ ಪ್ರತಿಷ್ಠಾಪಿಸಿದ್ದ ದೇವಿ ಮೂರ್ತಿ ಎದುರು ಡಾನ್ಸ್ ವಿಚಾರದಲ್ಲಿ ಯುವಕರ ಮಧ್ಯೆ ಗಲಾಟೆ ನಡೆದಿದ್ದು, ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಯುವಕರ ಮಧ್ಯೆ ಮಾರಾಮಾರಿ... ದೃಶ್ಯ ಸಿಸಿಟಿವಿಯಲ್ಲಿ ಸೆರೆ

ನಗರದ ಆಶ್ರಮ ಬಳಿಯ ಪಾರಕ ನಗರದಲ್ಲಿ ಎರಡು ಬೈಕ್​ ಮೇಲೆ ಬಂದ ಯುವಕರು ಕೈಯಲ್ಲಿ ದೊಣ್ಣೆ, ತಲ್ವಾರ್​​​ ಹಿಡಿದು ಗಲಾಟೆ ನಡೆಸಿದ್ದು, ಜಗಳ ಬಿಡಿಸಲು ಬಂದ ರಮೇಶ ಮೇತ್ರಿ (35) ಎಂಬುವವರ ಮೇಲೆ ಹಲ್ಲೆ ನಡೆಸಲಾಗಿದೆ. ಅಲ್ಲದೇ ಇನ್ನೋರ್ವ ಅಪ್ರಾಪ್ತ ಬಾಲಕನ ಮೇಲೂ ಹಲ್ಲೆ ನಡೆದಿದೆ. ಇವರಿಬ್ಬರನ್ನೂ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Vijayapur crime
ಹಲ್ಲೆಗೊಳಗಾದವರು

ಗಲಾಟೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಈ ಸಂಬಂಧ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Intro:ವಿಜಯಪುರ Body:ವಿಜಯಪುರ: ನವರಾತ್ರಿ ಹಬ್ಬದ ಹಿನ್ನೆಲೆಯಲ್ಲಿ ಬಡಾವಣೆಯೊಂದರಲ್ಲಿ ಪ್ರತಿಷ್ಠಾಪಿಸಿದ್ದ ದೇವಿ ಮೂರ್ತಿ ಎದುರು ಡಾನ್ಸ್ ವಿಚಾರದಲ್ಲಿ ಯುವಕರ ಮಧ್ಯೆ ಗಲಾಟೆ ನಡೆದಿದ್ದು, ಕೆಲವರಿಗೆ ಗಾಯಗಳಾಗಿದ್ದು, ಇವರ ಗಲಾಟೆ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾದ ಘಟನೆ ನಡೆದಿದೆ.
ವಿಜಯಪುರ ನಗರದಲ್ಲಿ ಪುಡಾರಿ ಯುವಕರ ಪುಂಡಾಟ‌ ಮತ್ತೊಮ್ಮೆ ಬಯಲಿಗೆ ಬಂದಿದೆ.
ಕೈಯಲ್ಲಿ ದೊಣ್ಣೆ ತಲವಾರ್ ಹಿಡಿದು ಯುವಕರು ಪುಂಡಾಟ ನಡೆಸಿದ್ದಾರೆ.
ವ್ಯಕ್ತಿಯೋರ್ವನ ಮೇಲೆ ದೊಣ್ಣೆಗಳಿಂದ ಹಲ್ಲೆ ಸಹ ಮಾಡಲಾಗಿದೆ. ಈ ಘಟನೆ ನಡೆದಿದ್ದು ವಿಜಯಪುರ ನಗರದ ಆಶ್ರಮ ಬಳಿಯ ಪಾರಕ ನಗರದಲ್ಲಿ.
ಸಿಸಿ ಟಿವಿಯಲ್ಲಿ ಯುವಕರ ಪುಂಡಾಟ ದೃಶ್ಯ ಸೆರೆಯಾಗಿದೆ.
ಹುಡುಗರ ನಡುವಿನ ಜಗಳ ಬಿಡಿಸಲು ಬಂದ ರಮೇಶ ಮೇತ್ರಿ (35) ಎಂಬ ವ್ಯಕ್ತಿ ಮೇಲೆ ಹಲ್ಲೆ ನಡೆಸಲಾಗಿದೆ.
ಇನ್ನೋರ್ವ ಅಪ್ರಾಪ್ತ ಬಾಲಕನ ಮೇಲು ಹಲ್ಲೆ ನಡೆದಿದೆ.
ಎರೆಡು ಬೈಕ್ ಮೇಲೆ ದೊಣ್ಣೆ, ತಲವಾರ್ ಜೊತೆಗೆ ಬಂದ‌ ಯುವಕರು ಈ ಕೃತ್ಯ ನಡೆಸಿದ್ದಾರೆ. ಗಾಯಗೊಂಡಿರುವ
ಇಬ್ಬರು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಎಪಿಎಂಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.Conclusion:ವಿಜಯಪುರ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.