ETV Bharat / state

Yatnal: ಡಿಕೆಶಿ ಎಂದಿಗೂ ಸಿಎಂ ಆಗಲ್ಲ, ಸಿದ್ದರಾಮಯ್ಯ ಅವರೇ ಕಾಂಗ್ರೆಸ್​ನ ಕೊನೇಯ ಸಿಎಂ- ಯತ್ನಾಳ್

author img

By

Published : Aug 18, 2023, 3:53 PM IST

ಡಿಕೆಶಿ ಸೂಪರ್​ ಸಿಎಂ ಆಗಿದ್ದಾರೆ. ಆದರೆ ಅವರು ಎಂದಿಗೂ ಸಿಎಂ ಆಗಲ್ಲ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

ಶಾಸಕ ಬಸನಗೌಡ ಪಾಟೀಲ ಯತ್ನಾಳ
ಶಾಸಕ ಬಸನಗೌಡ ಪಾಟೀಲ ಯತ್ನಾಳ

ಯತ್ನಾಳ್ ಹೇಳಿಕೆ

ವಿಜಯಪುರ: ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಸಿಎಂ ಆಗಲ್ಲ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹೇಳಿದರು. ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿಕೆಶಿ ಈಗ ಸೂಪರ್ ಸಿಎಂ ಆಗಿದ್ದಾರೆ. ಆದ್ರೆ, ಯಾವ ಕಾಲಕ್ಕೂ ಸಿಎಂ ಆಗಲ್ಲ. ಸಿಎಂ ಸಿದ್ದರಾಮಯ್ಯಗೆ ಬಹಳ ನೋವಿದೆ. ಕಾಂಗ್ರೆಸ್‌ನ ಕೊನೆಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಎಂದು ಟೀಕಿಸಿದರು. ಸಿಎಂ ಕೂಡ ಸುಮ್ಮನೆ ಹುದ್ದೆಯಲ್ಲಿ ಇದ್ದಾರೆ. ಆದ್ರೆ, ಆಡಳಿತ ಮಾತ್ರ ಡಿ.ಕೆ.ಶಿವಕುಮಾರ್​ ಮಾಡುತ್ತಿದ್ದಾರೆ. ಇನ್ನು ಆರು ತಿಂಗಳೇ ಆಗ್ಲಿ, ಐದು ವರ್ಷವೇ ಆಗ್ಲಿ ಸಿಎಂ ಆಗಿ ಸಿದ್ದರಾಮಯ್ಯ ಅವರೇ ಇರುತ್ತಾರೆ ಎಂದರು.

ಇದೇ ವೇಳೆ ಕಾಂಗ್ರೆಸ್ ತಳಿ ರಾಕ್ಷಸರದ್ದು ಎಂದು ಯತ್ನಾಳ್ ಕಿಡಿಕಾರಿದರು. ಬಿಜೆಪಿಗೆ ಓಟು ಹಾಕಿದವರು ರಾಕ್ಷಸರು ಎಂಬ ಸುರ್ಜೆವಾಲಾ ಹೇಳಿಕೆಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿ, ಕಾಂಗ್ರೆಸ್ ವಂಶದ ಬ್ಯಾಗ್ರೌಂಡ್ ಸರಿ ಇಲ್ಲ, ಕಾಂಗ್ರೆಸ್‌ನದ್ದು ಹೈಬ್ರಿಡ್ ತಳಿ. ಬಿಜೆಪಿಗೆ ಓಟು ಹಾಕಿದವರು ರಾಕ್ಷಸರು ಎಂದು ದೇಶದ ಮತದಾರರನ್ನು ಅವಮಾನ ಮಾಡಿದ್ದಾರೆ. ಇದನ್ನು ಮತದಾರರು ತಿಳಿದುಕೊಳ್ಳಬೇಕು. ಮತದಾರರನ್ನು ರಾಕ್ಷಸ ಎನ್ನುವ ಮನಸ್ಥಿತಿ ಅವರದ್ದು ಎಂದು ವಾಗ್ದಾಳಿ ನಡೆಸಿದರು.

ಇದಕ್ಕೂ ಮುನ್ನ ಮೂರು ದಿನಗಳ ಹಿಂದಷ್ಟೇ ಕಾಂಗ್ರೆಸ್​​​​ ಸರ್ಕಾರ ಕೆಲವೇ ತಿಂಗಳಲ್ಲಿ ಪತನಗೊಳ್ಳಲಿದೆ ಎಂಬ ಅಚ್ಚರಿಯ ಹೇಳಿಕೆಯನ್ನು ಯತ್ನಾಳ ನೀಡಿದ್ದರು. "ರಾಜ್ಯದಲ್ಲಿ ಆಡಳಿತದ ಚುಕ್ಕಾಣಿ ಹಿಡಿದಿರುವ ಕಾಂಗ್ರೆಸ್​​ ಮೂರು ತಿಂಗಳ ಹಿಂದೆ ಇದ್ದ ಹಾಗಿಲ್ಲ. ಇನ್ನಾರು ತಿಂಗಳಲ್ಲಿ ಸರ್ಕಾರ ಉರುಳಲಿದೆ" ಎಂದು ಹೇಳಿದ್ದರು.

"ರಾಜ್ಯದಲ್ಲಿ ಕಾಂಗ್ರೆಸ್​​ ಅಧಿಕಾರಕ್ಕೆ ಬಂದ ಬಳಿಕ ಭ್ರಷ್ಟಾಚಾರ ಹೆಚ್ಚಾಗಿದೆ. ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ಅವರ ಆಡಳಿತ ನಡೀತಿಲ್ಲ. ಸಿಎಂ ಅಸಹಾಯಕತೆ ತೋರಿಸುತ್ತಿದ್ದಾರೆ. ಕಾಂಗ್ರೆಸ್​​ ಸರ್ಕಾರ 5 ವರ್ಷ ಸುದೀಘ ಆಡಳಿತ ನಡೆಸುತ್ತದೆ ಎಂದು ಅವರು ಭಾವಿಸಿದ್ದಾರೆ.

ಲೋಕಸಭೆ ಚುನಾವಣೆಗೆ ಮೊದಲು ಅಥವಾ ನಂತರ ಕಾಂಗ್ರೆಸ್​ ಪತನಗೊಳ್ಳುವುದು ಖಚಿತ ಎಂದು ಭವಿಷ್ಯ ನುಡಿದಿದ್ದರು. ಯತ್ನಾಳರ ಈ ಹೇಳಿಕೆಗೆ ಕಾಂಗ್ರೆಸ್​ನ ನಾಯಕರು ಟೀಕಿಸಿದ್ದರು. ಯತ್ನಾಳ ಹೇಗೆ ಬೇಕಾದರೂ ಹೇಳಲಿ ನಮಗೆ ಸಂಬಧವಿಲ್ಲ. ಅಲ್ಲದೇ ಅವರ ಸಂಪರ್ಕದಲ್ಲಿ ಕಾಂಗ್ರೆಸ್​ನ ಒಬ್ಬ ಸಚಿವರಾದರೂ ಇದ್ದಾರಾ ಎಂದು ಸಚಿವ ಶಿವಾನಂದ ಪಾಟೀಲ್​ರು ಪ್ರಶ್ನಿಸಿದ್ದರು. ಮೀನುಗಾರಿಕೆ ಇಲಾಖೆ ಸಚಿವರೂ ಕೂಡ ಶಾಸಕ ಯತ್ನಾಳರ ವಿರುದ್ಧ ವಾಗ್ದಾಳಿ ನಡೆಸಿದ್ದರು. ಅವರು ಏನಾದರೂ ಹೇಳಬೇಕೆಂದು ಇಂತಹ ಹೇಳಿಕೆಗಳನ್ನು ಕೊಡುತ್ತಾರೆ. ಅವರ ಮಾತುಗಳನ್ನು ಕಿವಿಗೆ ಹಾಕಿಕೊಳ್ಳಬೇಡಿ, ಅವರ ಮನಸ್ಥಿತಿ ಸರಿಯಿಲ್ಲ ಎಂದು ಸಚಿವ ಟಾಂಗ್​ ನೀಡಿದ್ದರು.

ಇದನ್ನೂ ಓದಿ: ನೈಸ್ ವಿಚಾರದಲ್ಲಿ ಸಣ್ಣ ಸಾಕ್ಷಿ ತೋರಿಸಿದರೂ ದೇವೇಗೌಡರ ಕುಟುಂಬವೇ ರಾಜಕೀಯ ನಿವೃತ್ತಿ : ಕುಮಾರಸ್ವಾಮಿ ಸವಾಲು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.