ವಿಜಯಪುರ: ಐತಿಹಾಸಿಕ ಸ್ಮಾರಕ ಆನಂದ ಮಹಲ್‌ನಲ್ಲಿ ಜಿಲ್ಲಾಡಳಿತದ ಆಶ್ರಯದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಯಿತು.
ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ನಗರದ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಪಾಲ್ಗೊಂಡು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು. ಏಕದಂತ ಸೂರ್ಯವಂಶಿ ಮತ್ತು ವಂಬಾಸೆ ತಂಡದಿಂದ ವಚನ ಗಾಯನ ಶೈನ್ ಕಲಾ ಸಂಸ್ಥೆಯಿಂದ ಸಮೂಹ ಗಾಯನ, ಮಕ್ಕಳ ಜಾನಪದ ನೃತ್ಯ, ದೇಶ ಭಕ್ತಿ ಗೀತೆಗಳು ಸೇರಿದಂತೆ ಹಲವಾರು ಸಂಗೀತ ಕಾರ್ಯಕ್ರಮಗಳಿಗೆ ನಗರದ ಆನಂದ ಮಹಲ್ ಸಾಕ್ಷಿಯಾಗಿದೆ.
ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ತಮ್ಮ ಕಲೆ ಪ್ರದರ್ಶನ ಮಾಡಿದ ಮಕ್ಕಳಿಗೆ ಜಿಲ್ಲಾಡಳಿತದಿಂದ ಪ್ರಮಾಣ ಪತ್ರಗಳನ್ನು ನೀಡಿ ಮಕ್ಕಳ ಕೆಲೆಯನ್ನು ಪ್ರೋತ್ಸಾಹಿಸಿದರು. ಇನ್ನೂ ಇಂದು ಸಾಯಂಕಾಲ ಅಂಬಿಕಾ ಸವದಿ ಅವರಿಂದ ಭರತ ನಾಟ್ಯ, ಮಾಳವಿಕಾ ಜೋಶಿ ಸುಗಮ ಸಂಗೀತ, ಸೋಲೋ ಜಾನಪದ ಗಾಯನ ಸೇರಿದಂತೆ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಜಿಲ್ಲಾಡಳಿತ ಜಿಲ್ಲೆಯ ಪ್ರತಿಭೆಗಳನ್ನು ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಆಯೋಜಿಸಲಾಗಿದೆ.
ಇನ್ನು ನಗರದ ಜನತೆ ಜಿಲ್ಲಾಡಳಿತದ ಸಾಂಸ್ಕೃತಿಕ ಹಬ್ಬವನ್ನು ವೀಕ್ಷಿಸಲು ಆಗಮಿಸುತ್ತಿದ್ದಾರೆ.