ETV Bharat / state

ಮಕ್ಕಳ ಮದುವೆ ಆಮಂತ್ರಣ ಪತ್ರ ನೀಡಲು ಹೋಗುತ್ತಿದ್ದಾಗ ಬಡಿದ ಸಿಡಿಲು: ದಂಪತಿಗೆ ಗಾಯ

author img

By

Published : Apr 28, 2022, 9:45 PM IST

ಬೈಕ್ ಮೇಲೆ ವಿಜಯಪುರಕ್ಕೆ ಬರುವಾಗ ಈ ಅವಘಡ ಸಂಭವಿಸಿದೆ. ಪರಿಣಾಮ ದಂಪತಿಗೆ ಗಾಯವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

Two cattle died by heavy rain in vijayapura
Two cattle died by heavy rain in vijayapura

ವಿಜಯಪುರ: ಮಗ ಹಾಗೂ ಮಗಳ ಮದುವೆಯನ್ನು ಒಂದೇ ಬಾರಿಗೆ ನಿಶ್ಚಯಿಸಿದ್ದು, ಮದುವೆಯ ಆಮಂತ್ರಣ ಪತ್ರಿಕೆ ನೀಡಲು ಬೈಕ್​​ನಲ್ಲಿ ಹೋಗುತ್ತಿದ್ದ ದಂಪತಿಗೆ ಸಿಡಿಲು ಬಡಿದು ತೀವ್ರ ಗಾಯಗಳಾದ ಘಟನೆ ವಿಜಯಪುರ ತಾಲೂಕಿನ ಡೋಣಿ ನದಿ ಬಳಿ‌ ಇರುವ ಹಳ್ಳಿ ಕ್ರಾಸ್ ಬಳಿ ಸಂಜೆ ನಡೆದಿದೆ.

ಬೈಕ್ ಮೇಲೆ ವಿಜಯಪುರಕ್ಕೆ ಬರುವಾಗ ಈ ಅವಘಡ ಸಂಭವಿಸಿದೆ. ವಿಜಯಪುರ ನಿವಾಸಿಗಳಾದ ಶರಣಯ್ಯ ಸಂಗಮದ(45) ಹಾಗೂ ಪತ್ಮಿ ಕವಿತಾ ಸಂಗಮದ(40) ಗಾಯಗೊಂಡ ದಂಪತಿ. ಇವರನ್ನು ವಿಜಯಪುರದ ಭಾಗ್ಯವಂತಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಮಕ್ಕಳ ಮದುವೆ ಆಮಂತ್ರಣ ಪತ್ರ ನೀಡಲು ಹೋಗುತ್ತಿದ್ದಾಗ ಬಡಿದ ಸಿಡಿಲು: ದಂಪತಿಗೆ ಗಾಯ

ಇದನ್ನೂ ಓದಿ: ಪ್ರಿಯಾಂಕ್ ಖರ್ಗೆ ಹಿಟ್‌ ಅಂಡ್ ರನ್ ರೀತಿ ನಡೆದುಕೊಳ್ತಿದ್ದಾರೆ: ಸಚಿವ ಹಾಲಪ್ಪ

ಎರಡು ಎತ್ತುಗಳ ಸಾವು: ಭಾರಿ ಮಳೆ ಗಾಳಿಗೆ ಎರಡು ಎತ್ತುಗಳು ಪ್ರತ್ಯೇಕ ಪ್ರಕರಣದಲ್ಲಿ ಸಾವನ್ನಪ್ಪಿವೆ. ಬಾಗೇವಾಡಿ ತಾಲೂಕಿನ ಇಂಗಳೇಶ್ವರ ಗ್ರಾಮದ ಶರಣಪ್ಪ ಎಂಬುವರಿಗೆ ಸೇರಿದ ಎತ್ತು ಹಾಗೂ ವಿಜಯಪುರ ತಾಲೂಕಿನ ಹಡಗಲಿ ಗ್ರಾಮದ ರೈತನೊಬ್ಬ ಎತ್ತುಗಳು ಸಿಡಿಲು ಬಡಿದು ಸಾವನ್ನಪ್ಪಿವೆ.

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.