ETV Bharat / state

ಮುದ್ದೇಬಿಹಾಳ: ನೀರಿನ ಟ್ಯಾಂಕ್​ಗೆ ಬಿದ್ದು ಬಾಲಕ ಸಾವು

author img

By

Published : Dec 16, 2022, 2:15 PM IST

ಮನೆಯ ಮುಂದೆ ಆಟವಾಡುತ್ತಿದ್ದ 5 ವರ್ಷದ ಬಾಲಕ ಆಯತಪ್ಪಿ ನೀರಿನ ಟ್ಯಾಂಕ್‌ನೊಳಗೆ ಬಿದ್ದು ಸಾವನ್ನಪ್ಪಿದ ಘಟನೆ ಮುದ್ದೇಬಿಹಾಳದಲ್ಲಿ ನಡೆದಿದೆ.

Etv Bharat
ನೀರಿನ ಟ್ಯಾಂಕ್​ಗೆ ಬಿದ್ದು ಬಾಲಕ ಸಾವು

ಮುದ್ದೇಬಿಹಾಳ: ಮನೆಯ ಮುಂದಿದ್ದ ಟ್ಯಾಂಕರನಲ್ಲಿ ನೀರು ತುಂಬಿಕೊಳ್ಳಲು ಹೋದ ವೇಳೆ ಮುಳುಗಿ ಐದು ವರ್ಷದ ಬಾಲಕನೊಬ್ಬ ಸಾವನ್ನಪ್ಪಿದ ಘಟನೆ ಪಟ್ಟಣದ ಹುಡ್ಕೋದಲ್ಲಿ ಗುರುವಾರ ರಾತ್ರಿ ತಾಲೂಕು ಆಡಳಿತಸೌಧದ ಹಿಂಭಾಗದಲ್ಲಿ ನಡೆದಿದೆ. ಮೃತಪಟ್ಟ ಬಾಲಕನನ್ನು ನಿಡಗುಂದಿ ತಾಲೂಕು ಕಿರಿಶ್ಯಾಳ ಗ್ರಾಮದ ನಿವಾಸಿ ಆನಂದ ನಿಡೋಣಿ ಎಂದು ತಿಳಿದು ಬಂದಿದೆ.

ಬಾಲಕನ ತಂದೆ ಆನಂದ ಎಂಬವರು ಕಟ್ಟಡದಲ್ಲಿ ಬಾಡಿಗೆ ಇದ್ದು, ಬೇಕರಿ ತಿನಿಸುಗಳನ್ನು ತಯಾರಿಸಿ ಕೊಡುವ ಕೆಲಸ ಮಾಡುತ್ತಿದ್ದರು. ತಾವು ವಾಹನ ತೊಳೆಯುವಾಗ ಬಾಲಕ ಹೊರಗಡೆಯೇ ಇದ್ದ. ಬಹಳ ಹೊತ್ತಾದರೂ ಮನೆ ಒಳಗೆ ಬರದಿರುವುದನ್ನು ಕಂಡು ಪಾಲಕರು ಎಲ್ಲ ಕಡೆ ಹುಡುಕಾಟ ನಡೆಸಿದರೂ ಸಿಕ್ಕಿರಲಿಲ್ಲ. ಬಳಿಕ ಟ್ಯಾಂಕ್‌ನಲ್ಲಿ ಜಗ್ ತೇಲಾಡುತ್ತಿರುವುದನ್ನು ನೋಡಿ ಸಂಶಯಗೊಂಡು ಅಗ್ನಿಶಾಮಕ ಸಿಬ್ಬಂದಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಅಗ್ನಿಶಾಮಕ ದಳದವರು ಬಂದು ನೋಡಿದಾಗ ಬಾಲಕ ಟ್ಯಾಂಕ್‌ನೊಳಗೆ ಶವವಾಗಿ ಪತ್ತೆ ಆಗಿದ್ದಾನೆ.

ಮಗನ ದುರಂತ ಸಾವಿಗೆ ಪಾಲಕರ ಆಕ್ರಂದನ ಮುಗಿಲು ಮುಟ್ಟುವಂತಿತ್ತು. ವಾಹನ ತೊಳೆಯುವ ಸಂದರ್ಭ ಜಗ್ಗನಲ್ಲಿ ನೀರು ತುಂಬಿಸಿಕೊಳ್ಳುತ್ತಿರುವಾಗ ಬಾಲಕ ಆಯತಪ್ಪಿ ಟ್ಯಾಂಕ್‌ನೊಳಗೆ ಬಿದ್ದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಈ ಕುರಿತು ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಮದುವೆಯಾದ 3 ತಿಂಗಳಿಗೆ ವ್ಯಕ್ತಿ ಆತ್ಯಹತ್ಯೆ; ಹೆಂಡತಿ ಕಿರುಕುಳ ಕಾರಣವೆಂದ ಪೋಷಕರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.